भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಚಲುಮರದವ್ವ

ಕಾಡಿನ ಗಿಡಮರಗಳ ನಡುವೆ ಇರುವ ದೇವತೆ. ಈಕೆ ಹನ್ನೆರಡು ಮಂದಿ ಪರಿವಾರ ದೇವತೆಗಳನ್ನು ಹೊಂದಿದ್ದಾಳೆ ಎಂಬ ನಂಬಿಕೆ ಇದೆ (ಉಕ.ಜಿ)

ಈಚಲುವನ

ದಟ್ಟವಾಗಿ ಬೆಳೆದ ಈಚಲು ಗಿಡಗಳು ಇರುವ ಸ್ಥಳ (ಚಿಮ.ಜಿ)

ಈಚಲುಸೇವೆ

ತುಮಕೂರು ಜಿಲ್ಲೆಯ ಉಡಸಲಮ್ಮನ ಜಾತ್ರೆಯಲ್ಲಿ ಆಚರಿಸುವ ಸೇವೆ. ಉತ್ಸವ, ಪೂಜೆಗಳಾದ ನಂತರ ಭಕ್ತನ ಮೈಮೇಲೆ ದೇವಿಯ ಆವಾಹನೆಯಾಗುತ್ತದೆ. ಆತನನ್ನು ದೇವಾಲಯದ ಪಕ್ಕದಲ್ಲಿ ‘ಬನ್ನಿಮರ’ ಎಂದು ಕರೆಯಲಾಗುವ ಈಚಲು ಮರದ ಬಳಿ ಕರೆದೊಯ್ಯುತ್ತಾರೆ. ಮುಳ್ಳುಗಳಿಂದ ತುಂಬಿದ ಎತ್ತರದ ಮರವನ್ನು ಡೊಳ್ಳು, ತಮಟೆ ವಾದ್ಯಗಳ ಹಿನ್ನೆಲೆಯಲ್ಲಿ ಹತ್ತುವ ಭಕ, ಮರದ ಮೇಲೆ ಸುಳಿಯ ನಡುವೆ ನಿಂತು ಉಳಿದ ಭಕ್ತರಿಗೆ ದರ್ಶನ ನೀಡಿ ಕುಣಿದಾಡುತ್ತಾನೆ

ಈಚಲುಹಣ್ಣು

ಈಚಲು ಮರದ ಹಣ್ಣು. ಇದು ರುಚಿಯಾಗಿದ್ದು ಉತ್ತುತ್ತೆ ಹಣ್ಣಿನಂತಿರುತ್ತದೆ (ಚಿಮ.ಜಿ)

ಈಚಲುಹೊಳ್ದೆ

ಈಚಲು ಮರದ ಗರಿ (ಶಿವ.ಜಿ)

ಈಚಾಬತ್ತಿ

ಮೂಗಿಲಿ. ಹೊಲಗದ್ದೆಗಳಲ್ಲಿ ವಾಸಮಾಡುವ, ಹಂದಿ ಮೂತಿಯಂತೆ ಚೂಪಾದ ಮೂತಿಯುಳ್ಳ ವಿಷಪೂರಿತ ಇಲಿ (ಮಲೆ)

ಈಚಿತುಂಡು

ಗಾಡಿಯ ನೊಗದಲ್ಲಿ ಬಳಸುವ ಸಾಧನ (ಬೆಂಗ.ಜಿ)

ಈಚು

ನೇಗಿಲು ಕುಂಟೆ ಮೊದಲಾದವುಗಳಿಗೆ ಜೋಡಿಸುವ ಉದ್ದನೆಯ ಮರ. ಪ್ರ: ಗೊಬ್ಳಿ ತುಂಡ ತಕೊಂಡೋಗಿ ಈಚ ಕೆತ್ತಿಸ್ಕೊಂಡು ಬಾ

ಈಚು

ಎಳೆಯ ಕಾಯಿ; ಹೀಚು (ಬೆಂಗ್ರಾ.ಜಿ)

ಈಚು

ಗಾಣವನ್ನು ತಿರುಗಿಸಲು ಸಹಕಾರಿಯಾಗುವಂತೆ ಇರುವ ಎಂಟು ಅಥವಾ ಹತ್ತು ಅಡಿ ಉದ್ದ ಮರ (ಹಾಸ.ಜಿ)

ಈಚು

ರೋಣಕಲ್ಲಿಗೂ ನೊಗಕ್ಕೂ ಜೋಡಿಸಿರುವ ದಪ್ಪನಾದ ಕೋಲು

ಈಚು

ಬಂಡಿಗೆ ಎರಡು ಗಾಲಿಗಳ ನಡುವಿನ ಕಬ್ಬಿಣದ ಹಾರಿಯ ಮಧ್ಯಭಾಗದಲ್ಲಿ ಜೋಡಿಸಲಾದ ಉದ್ದನೆಯ ಕಟ್ಟಿಗೆ

ಈಚು

(ಕ್ರಿ)
ಎಳೆ; ಹಿಗ್ಗಿಸು

ಈಚುಕೈ

ಉಳುವಾಗ ಕೈಯಲ್ಲಿ ಹಿಡಿದು ಒತ್ತುವ ನೇಗಿಲಿನ ಭಾಗ; ಮೇಣಿ

ಈಚುಕೋಲು

ಈಚಿಗೆ ಹಾಕುವ ಕೋಲು

ಈಚೆಆಗು

(ಕ್ರಿ)
ಹೊರಗಾಗು; ಮುಟ್ಟಾಗು

ಈಚೆಆಗು

ದೊಡ್ಡೋಳಾಗು; ಮೈ ನೆರೆ

ಈಚ್ಕಡ್ಡಿ

ಮರದ ಮೇಲೆ ಅಳತೆಯ ಗುರುತು ಮಾಡಿಕೊಳ್ಳುವ ಉಪಕರಣ

ಈಚ್ಚಟ್ಟೆ

ಮರದ ಮೇಲಿನ, ಅಳತೆ ಮಾಡಿದಷ್ಟೂ ನಿಖರವಾಗಿ ಕಾಣಿಸಿಕೊಳ್ಳುವ ಗೆರೆ

ಈಚ್ಚಂಡ

ಕೊಳೆತ ಹೆಣ ಮತ್ತು ಅದರ ದುರ್ವಾಸನೆ (ಕೊಡ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App