भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಟು

ಇಷ್ಟು; ಚಿಕ್ಕ; ಸ್ವಲ್ಪ; ಅತ್ಯಂತ ಕಡಿಮೆ ಪ್ರಮಾಣದ.

ಈಡಗಾಯಿ

ದೇವರಿಗೆ ಹೊಡೆಯುವ ತೆಂಗಿನಕಾಯಿ

ಈಡಾಗು

ಗುಂಡುಹಾರು

ಈಡಾಗು

ವಶವಾಗು

ಈಡಾಗು

ಹುಲುಸಾಗು

ಈಡಾಗು

ಗುರಿಯಾಗು

ಈಡಾಟ

ತೆಂಗಿನಕಾಯಿಗೆ ಗುರಿಯಿಟ್ಟು ಹೊಡೆಯುವ ಗ್ರಾಮೀಣ ಆಟ

ಈಡಾಡು

(ಕ್ರಿ)
ಎತ್ತಿ ಒಗೆ; ಬಿಸುಡು; ಚೆಲ್ಲಾಡು; ಎರಚಾಡು
ಈಡ್ಯಾಡು

ಈಡಿಗಿಡು

ಓರಣವಾಗಿ ಜೋಡಿಸು

ಈಡಿಗಿಡು

ಪಣಕ್ಕೆ ಇಡು (ಬಳ್ಳಾ.ಜಿ)

ಈಡಿಗೆ ಹಾಕು

ಆಸ್ತಿ ಪಾಲು ಮಾಡುವಾಗ ಒಂದು ವಸ್ತುವಿನ ಮೌಲ್ಯವನ್ನಾಧರಿಸಿ ಇನ್ನೊಂದು ವಸ್ತುವನ್ನು ಜೋಡು ಮಾಡುವುದು (ತುಮ.ಜಿ/ಬಳ್ಳಾ.ಜಿ)

ಈಡಿನ ಹಬ್ಬ

ತುಮಕೂರು ಜಿಲ್ಲೆಯಲ್ಲಿ ಕಾರ್ತಿಕ ಮಾಸದಲ್ಲಿ ಆಚರಿಸುವ ಕೃಷಿಸಂಬಂಧಿ ಹಬ್ಬ. ದನಗಳನ್ನು ಈಡಿನ ಬಳಿ ಕರೆದೊಯ್ದು ಅವುಗಳ ಮೇಲೆ ಗೊಲ್ಲರು ತಯಾರಿಸಿರುವ ಅಕ್ಕಿ ಬೆರೆಸಿದ ರಾಗಿ ಮುದ್ದೆಗಳನ್ನು ಎಸೆಯುತ್ತಾರೆ. ಬಾಣ ಬಿರುಸುಗಳ ಮನರಂಜನೆಯಾದ ನಂತರ ಈಡಿಗೆ ಬೆಂಕಿ ಹಾಕುತ್ತಾರೆ
ಎತ್ತಿನಹಬ್ಬ

ಈಡು

ಈಡಿನ ಹಬ್ಬದಂದು ದನಗಾಹಿಗಳು ನಿರ್ದಿಷ್ಟ ಜಾಗದಲ್ಲಿ ಕುಂಬಳಕಾಯಿಯ ಮೇಲೆ ಜಾಲಿ, ಬೇಲ, ರೋಜಿ, ಉಡಿಗೆ ಇತ್ಯಾದಿ ಗಿಡಗಳನ್ನು ಕಡಿದು ರಾಶಿ ಹಾಕುವುದು

ಈಡು

ಗುರಿ. ಪ್ರಾಣಿಗೆ ತಾಗುವಂತೆ ಹೊಡೆದ ಗುರಿ. (ಚಿಮ.ಜಿ)

ಈಡು

ಬಂದೂಕಿನಿಂದ ಬರುವ ಸಪ್ಪಳ (ಉಕ.ಜಿ)

ಈಡು

ಸರಿಸಮ.
ಇವ್ನು ಅವುನ್ಗೆ ಈಡ

ಈಡು

ದಪ್ಪ; ಬಹಳ ದೊಡ್ಡ ಪ್ರಮಾಣ (ಧಾರ.ಜಿ) ಸಮೃದ್ದ (ಶಿವ.ಜಿ).
ತೆಂಗಿನಕಾಯಿ ಒಳ್ಳೆ ಈಡಾಗವೆ

ಈಡು

ಹರಕೆಯ ತೆಂಗಿನಕಾಯಿ.
ದೇವ್ರಗೆ ನೂರೊಂದು ಈಡುಗಾಯಿ ಹಾಕ್ಸಿದೊ

ಈಡು

ಹರಕೆ ನಡೆಸಿಕೊಡುತ್ತೇವೆ ಎಂದು ಚಿನ್ನ ಅಥವಾ ಬೆಳ್ಳಿ ಮುಂತಾದ ಅಮೂಲ್ಯ ವಸ್ತುವನ್ನು ಹರಕೆಯ ಹೆಸರಲ್ಲಿ ಕಾದಿರಿಸುವುದು. ಹರಕೆ ಸಂದಾಯವಾಗುವವರೆಗೆ ಅದನ್ನು ಮುಟ್ಟುವಂತಿಲ್ಲ (ದಕ.ಜಿ)

ಈಡು

ಜಮೀನಿಗೆ ಹೋಗಲು ಮಾಡಿಕೊಂಡಿರುವ ದಾರಿ (ಮಂಡ್ಯ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App