भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಡು

ಮದುವೆ ನಿಶ್ಚಯವಾದ ಮೇಲೆ ಗಂಡಿನವರು ಹೆಣ್ಣಿಗೆ ನಂಬಿಕೆಗಾಗಿ ಕೊಡುವ ಆಭರಣ

ಈಡುಕಟ್ಟು

(ಕ್ರಿ)
ತಡೆಕಟ್ಟು; ಅಡ್ಡಲಾಗಿ ಒಡ್ಡು ಕಟ್ಟು

ಈಡುಕಟ್ಟು

ಕೇಡುಂಟಾಗದಂತೆ ತಡೆ

ಈಡುಕಟ್ಟು

ನೀರನ್ನು ತಡೆಯಲು ಮಣ್ಣನ್ನು ಹಾಕಿ ಕಟ್ಟಿದ ಅಡ್ಡಕಟ್ಟೆ (ಶಿವ.ಜಿ); ಕೆರೆಯ ಅಥವಾ ಕಾಲುವೆಯ ಅಂಚನ್ನು ಕಲ್ಲುಗಳಿಂದ ಭದ್ರಪಡಿಸುವ ವಿಧಾನ;

ಈಡುಕೂಡು

(ಕ್ರಿ)
ಹೆಣಸುಡಲು ಸೌದೆಯನ್ನು ನಿರ್ದಿಷ್ಟ ಅಳತೆಯಲ್ಲಿ ಜೋಡಿಸು; ಚಿತೆ ಸಿದ್ಧಪಡಿಸು.

ಈಡುಗಾಯಿ

ನೋಡಿ- ಇಡಗಾಯಿ

ಈಡುಗಾರ

ಬೇಟೆಯ ನಿಪುಣ; ಶಿಕಾರಿಗಾರ; ನುರಿತ ಬಿಲ್ಲುಗಾರ; ಗುಂಡು ಹಾರಿಸುವವ (ಚಿಮ.ಜಿ/ಕೋಲಾ.ಜಿ)

ಈಡುಗೋಡೆ

ಸುತ್ತಲ ಗೋಡೆ (ಶಿವ.ಜಿ)

ಈಡುಮಾಡು

(ಕ್ರಿ)
ಕೋವಿಗೆ ಮದ್ದುಗುಂಡನ್ನು ತುಂಬು (ಚಿಮ.ಜಿ/ಕೋಲಾ.ಜಿ)

ಈಡುಮಾಡು

ಗುರಿಮಾಡು

ಈಡುಲ್ಲು

ಬತ್ತವನ್ನು ತೆನೆಯಿಂದ ಬೇರ್ಪಡಿಸುವ ವಿಧಾನ (ತುಮ.ಜಿ); ಹಿಡಿಗಲು (ಬೆಂಗ್ರಾ.ಜಿ)

ಈಡುಸುಡು

ದನಗಳನ್ನು ಬೆಂಕಿಯ ಮೇಲೆ ಓಡಿಸು; ಕಿಚ್ಚುಹಾಯಿಸು (ತುಮ.ಜಿ)

ಈಡುಹೊಡೆ

ಬೇಟೆಯ ಪ್ರಾಣಿಯನ್ನು ಕೊಲ್ಲಲು ಗುರಿಯಿಟ್ಟು ಗುಂಡು ಹಾರಿಸು (ಮಲೆ)

ಈಡೆ

ಸ್ತುತಿ; ಹೊಗಳಿಕೆ (ತುಮ.ಜಿ)

ಈಡ್

ಕಟ್ಟಿಗೆಗಳನ್ನು ಜೋಡಿಸಿಟ್ಟ ಚಿತೆ

ಈಡ್

ಕೋವಿಯಲ್ಲಿ ಗುರಿ ಇಡುವುದು (ದಕ.ಜಿ)

ಈಡ್

ಕಷ್ಟ ಪರಿಹಾರಕ್ಕಾಗಿ ದೈವ ದೇವರುಗಳಿಗೆ ಹರಕೆ ಸಲ್ಲಿಸುತ್ತೇನೆಂದು ಸಂಕಲ್ಪಿಸಿ ಮುಡಿಪಾಗಿ ತೆಗೆದಿಡುವ ಆಭರಣ, ಹಣ, ತೆಂಗಿನಕಾಯಿ ಮೊದಲಾದ ವಸ್ತುಗಳು (ದಕ.ಜಿ)

ಈಡ್

ತೆರ

ಈಡ್

ಕುರಿಗಳ ದೊಡ್ಡಿ (ದಕ.ಜಿ/ಕೋಲಾ.ಜಿ)

ಈಡ್ಡಕಾಣಿಕ್

ರೋಗ ಹಾಗೂ ಸಂಕಷ್ಟಗಳು ಬಂದಾಗ ಹರಕೆ ಹೇಳಿ ಅದರ ಸಂಕೇತವಾಗಿ ದೈವಕ್ಕೆ ಚಿನ್ನ, ಬೆಳ್ಳಿ, ಹಣ, ಅಕ್ಕಿ, ತೆಂಗಿನಕಾಯಿ ಮುಂತಾದ ರೂಪದಲ್ಲಿ ತೆಗೆದಿಟ್ಟ ಮುಡಿಪು

Search Dictionaries

Loading Results

Follow Us :   
  Download Bharatavani App
  Bharatavani Windows App