भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈ‌ಡ್‍ಬಿಡುವುದು

ದೈವಗಳಿಗೆ ಬಲಿ ಕೊಡುವ ಪ್ರಾಣಿಗಳನ್ನು ಮೊದಲೇ ಹರಕೆ ರೂಪದಲ್ಲಿ ಬಿಡುವುದು

ಈತ್‌ಸಾಪೆ

ಈಚಲಚಾಪೆ (ಕೋಲಾ.ಜಿ)

ಈದ

ಜನಿಸಿದ (ಮೈಸೂ.ಜಿ)

ಈದಡಿ

ಬಂಡಿಯ ಮೂಕಿಯ ತುದಿ

ಈದನಾಯಿ

ಮರಿ ಹಾಕಿದ ನಾಯಿ. ಹತ್ತಿರಕ್ಕೆ ಯಾರನ್ನೂ ಬರಗೊಡದಂತೆ ಗುರುಗುಟ್ಟುತ್ತಿರುತ್ತದೆ

ಈದನಾಯಿ

ಕುಂಟು ನೆಪಕ್ಕೆ ಜಗಳಕ್ಕೆ ಬರುವ ವ್ಯಕ್ತಿ

ಈದಹುಲಿ

ಆಗಷ್ಟೆ ಮರಿಗಳನ್ನು ಹಾಕಿದ ಹುಲಿ; ಇದು ಉಗ್ರ ಕೊಪಿಯಗಿರುತ್ತದೆ. ತುಂಬ ಕೋಪದಿಂದ ಗುರುಗುಟ್ಟುವವರನ್ನು ಈದ ಹುಲಿಯ ಹಾಗೆ ಎಂದು ಹೋಲಿಸುವುದುಂಟು

ಈದಹುಲಿಯ ಹಾಲು ತರುವುದು

ಜನಪದ ಕಥೆಗಳಲ್ಲಿ ಕಥಾನಾಯಕನಿಗೆ ವಿಧಿಸುವ ಕಠಿಣ ಪರೀಕ್ಷೆ; ಮರಿಹಾಕಿದ ಹುಲಿಯ ಕೋಪ ತುಂಬ ಉಗ್ರವಾಗಿದ್ದು ಕಥಾನಾಯಕ ಆ ಕೋಪಕ್ಕೆ ಸಿಲುಕಿ ನಾಶವಾಗಬೇಕು ಎಂಬುದು ಕಠಿಣ ಪರೀಕ್ಷೆ ವಿಧಿಸಿದವರ ಉದ್ದೇಶ

ಈದು

(ನಾ)
ಮುಳ್ಳುಹಂದಿ (ಬಳ್ಳಾ.ಜಿ)

ಈದೊನಿ

ಕಬ್ಬಿಣದ ಅಂಡೆಯಲ್ಲಿ ಸಿಡಿಮದ್ದು ಜಡಿದು ತುಂಬಿಸಿ ಹಾರಿಸುವಂತಹ ಫಿರಂಗಿಯ ಗುಂಡು

ಈಂದ್

ಕ್ಯಾರಿಯೋಟ ಯುರೇನ್ಸ್: ಬೈನೆ ಮರ. ಇದರಿಂದ ಸೇಂದಿ ತೆಗೆಯುತ್ತಾರೆ. ಎಲೆಯು ತೋರಣವಾಗಿ ಬಳಸಲ್ಪಡುತ್ತದೆ. ಪೂರ್ಣವಾಗಿ ಬೆಳೆದು ಹೂ ಬಿಟ್ಟ ಬಳಿಕ ಈ ಮರದ ತಿರುಳಿನಿ೦ದ ಈ೦ದ್ ಹುಡಿ ತಯಾರಿಸಲಾಗುತ್ತದೆ. ಇದು ಬಹಳ ತಂಪು ಎಂದು ನಾಟಿವೈದ್ಯರ ಅಭಿಪ್ರಾಯ

ಈಂದ್

ಏತದಲ್ಲಿ ನೀರು ಮೊಗೆವ ಅರ್ಧ ವೃತ್ತಾಕಾರದ ಅಗಲ ಬಾಯಿಯಿರುವ ಮರಿಗೆ; ಮರಂಬಿ (ದಕ.ಜಿ)

ಈಪನೇರ

ನೊಣಗಳ ಹಿಕ್ಕೆ; ಹೇನಿನ ಮೊಟ್ಟೆ

ಈಪಾಟಿ

ಇಷ್ಟು ಹೆಚ್ಚು; ಇಷ್ಟೊಂದು (ಚಾಮ.ಜಿ).
ಈಪಾಟು

ಈಪು

ಮಳೆಯಲ್ಲಿ ಒದ್ದೆಯಾಗುವುದು; ತೇವ (ಉಕ.ಜಿ)

ಈಬತ್ತಿ/ಈಬುತ್ತಿ/ಈಬೂತಿ

ವಿಭೂತಿ; ಭಸ್ಮ. ಸಾಮಾನ್ಯವಾಗಿ ಶಿವಭಕರು ಹಣೆಯ ಮೇಲೆ ಧರಿಸುವ ಚಿಹ್ನೆ. ಬಾಹಣರಲ್ಲಿ ಸ್ಮಾರ್ತ ಸಂಪ್ರದಾಯದವರು ಧರಿಸುವ ಭಸ್ಮ

ಈಬತ್ತಿಕಟ್ಟು

ಹಣೆಗೆಯ ಮೇಲಿನ ವಿಭೂತಿಯ ಮೂರು ಗೆರೆ ಅಥವಾ ಪಟ್ಟೆಗಳು (ಚಿಮ.ಜಿ.)

ಈಬತ್ತಿಕಳ್ಳ

ಸಾಧಾರಣ ಕಳ್ಳ (ಗುಲ್ಬ.ಜಿ)

ಈಬತ್ತಿಗಿಡ

ವಿಭೂತಿ ಉಂಡೆಯಂತಿರುವ ಕಾಯಿಯುಳ್ಳ ಗಿಡ (ಬಿಜಾ.ಜಿ)

ಈಬು

ಅಂತರ

Search Dictionaries

Loading Results

Follow Us :   
  Download Bharatavani App
  Bharatavani Windows App