भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಂಬುಳ

ಒಂದು ಬಗೆಯ ಮುಳ್ಳು ಸಸ್ಯ

ಈಮಕ್ಕೆ

ಈ ಕಡೆಗೆ; ಈ ದಿಕ್ಕಿಗೆ (ಶಿವ.ಜಿ)

ಈಮ್ಯಾಕ ಬರು

ಹಸು ಅಥವಾ ಎಮ್ಮೆಗಳು ಗರ್ಭಕಟ್ಟಿ ಹೊಟ್ಟೆ ದಪ್ಪಗಾಗಿರುವುದು (ಶಿವ.ಜಿ)

ಈಯ

ನೋಡಿ- ಇಯ

ಈಯುವುದು

ಸಾಕು ಪ್ರಾಣಿಗಳು ಕರು ಹಾಕುವುದು

ಈಯ್ಯಾ

ನೋಡಿ- ಈಚು

ಈರ

(ನಾ)
ಕತ್ತಿಯನ್ನು ಹಿಡಿದು ದೇವರ ಮುಂದೆ ಕುಣಿಯುವ ವೀರಮಕ್ಕಳು.
ಈರು

ಈರ

(ಕ್ರಿ)
ಗರಗಸದಲ್ಲಿ ಮರ ತುಂಡರಿಸು (ಕೊಡ.ಜಿ)

ಈರಕಾಚ

ವೀರಗಾಸೆ; ಗಂಡುಗಚ್ಚೆ (ಮಂಡ್ಯ.ಜಿ)

ಈರಕಾರ

ನೋಡಿ- ಈರಗಾರ

ಈರಗಲ್ಲು

ವೀರಗಲ್ಲು; ಯುದ್ದದಲ್ಲಿ ಮಡಿದ ವೀರನ ನೆನಪಿಗಾಗಿ ನೆಟ್ಟ ಕಲ್ಲು

ಈರಗಲ್ಲು

ಮದುವೆಯಾಗದೆ ಸತ್ತ ವೀರ ಯುವಕನ ಹೆಸರಿನಲ್ಲಿ ಕೆತ್ತಿಸಿ ನೆಡುವ ಕಲ್ಲು (ಮಂಡ್ಯ.ಜಿ).
ಕರುಗಲ್ಲು

ಈರಗಾರ/ಈರಕಾರ:

ಮದುವೆಗೆ ಮುಂಚೆಯೇ ಸತ್ತ ಯುವಕರನ್ನು ಈರಗಾರರು ಎನ್ನುತ್ತಾರೆ. ಇವರಿಗೆ ಚಕ್ರಶಾಂತಿ, ತಿಥಿ ಕ್ರಮಗಳು ಇರುವುದಿಲ್ಲ

ಈರಗಾರ/ಈರಕಾರ:

ಚೌಡಮ್ಮನ ಕುಣಿತದಲ್ಲಿ ಪುರವಂತರಂತೆ ವೇಷ ಧರಿಸಿ ಕುಣಿಯುವವರು (ತುಮ.ಜಿ)

ಈರಗಾಲ

ವೀರಗಾಲು; ವೀರಮಂಡಿ; ಮೊಣಕಾಲನ್ನು ನೆಲಕ್ಕೆ ಹಚ್ಚುವುದು; ಮಂಡಿಯೂರಿ ನಿಲ್ಲುವುದು.
ಈರ‍್ಮಂಡಿ (ಬೆಂಗ್ರಾ.ಜಿ)

ಈರಗೂಡಿ

ಬೀರಗೂಡಿ; ಗೊಲ್ಲ ಜನಾಂಗದವರು ಮದುವೆಯಲ್ಲಿ ಆಚರಿಸುವ ಒಂದು ಸಂಪ್ರದಾಯ

ಈರಗ್ಯಾತ

ವೀರಕೇತ; ಜನಪದ ಕಾವ್ಯದಲ್ಲಿ ಬರುವ ಒಂದು ವ್ಯಕ್ತಿನಾಮ; ವಡ್ಡಗೆರೆನಾಗಮ್ಮನ ಮಾವ

ಈರಜಡೆ

ಜಡೆಯ ಆಕಾರದಲ್ಲಿರುವ ಹೊಂಬಾಳೆ

ಈರಣ

ಒಂದು ಸಣ್ಣ ಚರ್ಮವಾದ್ಯ; ಉರುಮೆ

ಈರಣ

ವೀರಭದ್ರ (ಮಂಡ್ಯ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App