भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456789Next >

ಏಕ

ಒಂದು; ಒಂದು ಸಂಖ್ಯೆ

ಏಕ

ಉದ್ದಕ್ಕೂ; ಸಾಲಾಗಿ; ನೇರವಾಗಿ(ಮಂಡ್ಯ.ಜಿ)

ಏಕ

ಒಂದೇ ಸಲಕ್ಕೆ; ಒಂದೇ ನೆಗೆತಕ್ಕೆ (ಮೈಸೂ.ಜಿ)

ಏಕಕೂಟ

ಒಂದು ಗರ್ಭಗುಡಿಯುಳ್ಳ ದೇವಸ್ಥಾನ (ಚಿತ್ರ.ಜಿ)

ಏಕಜಾಮ

ನಡುರಾತ್ರಿ ಕಳೆದ ಮೊದಲ ಜಾಮ (ದಕ.ಜಿ)

ಏಕಜಿಕೆದ ಗುತ್ತು

ಪಾಡ್ದನಗಳಲ್ಲಿ ಬರುವ ಒಂದು ಗುತ್ತಿನ ಹೆಸರು (ದಕ.ಜಿ)

ಏಕತಾರ ಪಂತು

ಬುಡ್ಗಜಂಗಮರು ಹಾಕುವ ಸನ್ಯಾಸಿ ವೇಷ, ಜನರು ಇವರನು ಸಾಧು, ಭೈರಾಗಿ, ಗೋಸಾಯಿಗಳೆಂದು ಗುರುತಿಸುತ್ತಾರೆ, ಕಾವಿ, ರುದ್ರಾಕ್ಷಿ,ಲಿಂಗ ಕಟ್ಟಿಕೊಂಡು ವಿಭೂತಿ, ಜಿಂಕೆಚರ್ಮ ಧರಿಸಿ. ಕೈಯಲ್ಲಿ ಕಮಂಡಲ ಹಿಡಿದು ಏಕತಾರಿ ಬಾರಿಸುತ್ತಾ, ರಾಮದಾಸ ಕೀರ್ತನೆ, ಯಾದಗಿರಿ ನರಸಿಂಹಸ್ವಾಮಿ ಕೀರ್ತನೆಯನ್ನು ಹಾಡುತ್ತಾ ಭಿಕ್ಷೆ ಬೇಡುತ್ತಾರೆ

ಏಕತಾರಿ ಮೇಳ

ತಂಬಲೂರಿ ಮೇಳ: ಭಜನೆ ಮೇಳ. ಗುರುಹಿರಿಯರ ಪುಣ್ಯತಿಥಿ, ಮರಣಸಂಸ್ಕಾರ, ಮಾರಮ್ಮ ,ಲಕ್ಷ್ಮಿ ಮೊದಲಾದ ದೇವತೆಗಳ ಜಾತ್ರೆ, ಉತ್ಸವದ ಸಂದರ್ಭಗಳಲ್ಲಿ ಈ ಮೇಳದವರು ರಾತ್ರಿಯಿಡೀ ಏಕತಾರಿಯನ್ನು ಬಾರಿಸುತ್ತ ತತ್ವಪದ, ಶರಣರ ವಚನ, ದಾಸರ ಕೀರ್ತನೆಗಳನ್ನು ಹಾಡುತ್ತಾರೆ (ಗುಲ್ಬ.ಜಿ)

ಏಕತಾರಿ/ಏಕದಾರಿ

ತಂಬಲೂರಿಯ೦ತಹ ತಂತಿವಾದ್ಯ. ಮೊಳ ಉದ್ದದ ಬಿದಿರಿಗೆ ತಂತಿ ಬಿಗಿದು, ಅಗಲವಾದ ಒಣಗಿದ ಸೋರೆಕಾಯಿ ಬುರುಡೆಯ ಮಧ್ಯದಲ್ಲಿ ಇದನ್ನು ಚುಚ್ಚಿ ಇದರ ಕೆಳಗೆ ಹಾಗೂ ಮೇಲೆ ತಂತಿ ಬರುವ ಹಾಗೆ ಮಾಡಿ ನಿರ್ಮಿಸಿದ ವಾದ್ಯ. ಬಿದಿರಿನ ಕಡ್ಡಿಯಿಂದ ಬಾರಿಸಿದಾಗ ಏಕನಾದ ಇಲ್ಲವೆ ಒಂದೇ ನಾದ ಹೊರಡುವುದರಿಂದ ಇದಕ್ಕೆ ಏಕತಾರಿ ಎನ್ನುತ್ತಾರೆ.
ಏಕನಾದ (ಮೈಸೂ.ಜಿ)

ಏಕದಾನಿ

ಮಣಿಗಳ ನಡುವೆ ಬಂಗಾರದ ಗುಂಡು ಹೊಂದಿರುವ ಸರ (ಉಕ.ಜಿ)

ಏಕದಾರಿ

ನೋಡಿ- ಏಕತಾರಿ

ಏಕನಕ್ಷತ್ರ

ಒಂದೇ ನಕ್ಷತ್ರದಲ್ಲಿ ಹುಟ್ಟಿದವರು. ಯಾರಾದರೂ ಅತಿಯಾದ ವಿರೋಧಿಗಳಾಗಿದ್ದರೆ ಅಥವಾ ಸ್ನೇಹದಿಂದ ಇದ್ದರೆ ಹೇಳುವ ಮಾತು :
ಅವ್ರಿಬ್ರದ್ದೂ ಏಕನಕ್ಷತ್ರ

ಏಕನಾಥೇಶ್ವರಿ

ಚಿತ್ರದುರ್ಗದ ಒಂಭತ್ತು ರಕ್ಷಕ ದೇವತೆಯರಲ್ಲಿ ಒಬ್ಬಳು; ಪಾರ್ವತಿಯ ಅವತಾರ

ಏಕನಾದ

ನೋಡಿ- ಏಕತಾರಿ

ಏಕನಾದ ಹಿಡಿದುಕೊಳ್ಳು

ತಿರುಪೆ ಎತ್ತು; ಭಿಕ್ಷೆಗೆ ಹೋಗು

ಏಕನಾಯಕನ ಗಿಡ

ಸಲಾಸಿಯಾ ರೆಟಿಕ್ಯುಲೇಟಾ: ಬೇರಿನಲ್ಲಿ ಹಾವಿನ ವಿಪನಿವಾರಕ ಗುಣವಿರುವ ಒಂದು ಔಷಧೀ ಸಸ್ಯ. ಮಧುಮೇಹ ನಿಯಂತ್ರಿಸುವ ಗುಣವೂ ಈ ಸಸ್ಯಕ್ಕಿದೆ (ಚಾಮ.ಜಿ).
ಸಪ್ತಕಪಿ (ಚಿತ್ರ ನೋಡಿ)

ಏಕನಾಳಿ

ಸರಿಯಾಗಿ ಊಟ ಮಾಡದೆ ಕೃಶನಾದ ವ್ಯಕ್ತಿ (ದಕ.ಜಿ)

ಏಕಮಾಲೆ ಸರ

ಒಂದೆಳೆ ಸರ (ದ.ಕ.ಜಿ)

ಏಕವಾಡಿ

ನೋಡಿ- ಏಕೋಡಿ

ಏಕಾ೯ಲುಮರ

ಮೂಕಿಮರ; ಗಾಡಿಗೆ ಬಳಸುವ ಉದ್ದನೆಯ ಮರ (ತುಮ.ಜಿ)
< previous123456789Next >

Search Dictionaries

Loading Results

Follow Us :   
  Download Bharatavani App
  Bharatavani Windows App