भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಇಟಾಕೊನಿಕ್ ಆಮ್ಲ

(ರ) C5H6O4. ಡೈ ಕಾರ್ಬಾಕ್ಸಿಲಿಕ್ ಆಮ್ಲದ ಹರಳು. ಅಸ್ಪರ್ ಗಿಲ್ಲಸ್ ಜಾತಿಗೆ ಸೇರಿದ ಮೋಲ್ಡ್‌ಗಳೊಂದಿಗೆ ಸಕ್ಕರೆ ಹುದುಗು ಆದಾಗ ದೊರೆಯುತ್ತದೆ

ಇಟಾಕೊಲ್ಯುಮೈಟ್

(ಭೂವಿ) ಶಿಥಿಲವಾದ ಕಣಗಳಿಂದ ಕೂಡಿಕೊಂಡಿರುವ ಅಭ್ರಕ ಮರಳುಗಲ್ಲು. ತೆಳ್ಳನೆ ಚಪ್ಪಡಿಗಳಾಗಿ ಕಡಿದಾಗ ಬಾಗಿಸುವುದು ಸಾಧ್ಯ

ಇಟ್ಟಿಗೆ

(ಎಂ) ಆವೆ ಅಥವಾ ಕೊಜೆ ಮಣ್ಣಿನ ಮುದ್ದೆಯನ್ನು ನಿರ್ದಿಷ್ಟ ಆಕಾರಕ್ಕೆ ಕೊಯ್ದು, ಒಣಗಿಸಿ ಸುಟ್ಟು ತಯಾರಿಸಿದ ಗಟ್ಟಿ. ಕಟ್ಟಡ ಕಟ್ಟಲು ಮೂಲ ಸಾಮಗ್ರಿ. ನಿರ್ಮಾಣ ಘಟಕ

ಇಂಟ್ರೊಫೈಯರ್

(ರ) ಕಲಿಲ ದ್ರಾವಣವನ್ನು ಕೆಲ ಮಟ್ಟಿಗೆ ಆಣವಿಕ ದ್ರಾವಣವಾಗಿ ಮಾರ್ಪಡಿಸಬಲ್ಲ ಪದಾರ್ಥ. ಇದನ್ನು ಕೆಲವು ದ್ರವಗಳಿಗೆ ಬೆರೆಸಿದಾಗ ಅವುಗಳ ಆರ್ದ್ರತಾ ಸಾಮರ್ಥ್ಯ ಅಧಿಕವಾಗುತ್ತದೆ

ಇಡಕು

(ತಂ) ೧. ಎರಡು ತಲಗಳ ಮಧ್ಯೆ ವಸ್ತುವನ್ನಿಟ್ಟು ಅಮುಕು. ೨. ಸಮ ಅಲೆಯುದ್ದದಲ್ಲಿ ರೇಡಿಯೋ ಅಲೆಗಳನ್ನು ಪ್ರಸಾರ ಮಾಡಿ ಅನ್ಯರ ರೇಡಿಯೊ ಅಥವಾ ರೇಡಾರ್ ಸಂeಗಳನ್ನು ಗಜಿಬಿಜಿ ಮಾಡು

ಇಂಡಕ್ಟೊಮೀಟರ್

(ಭೌ) ನಿರ್ದಿಷ್ಟ ಪ್ರೇರಕತೆ ಇರುವ ತಂತಿ ಸುರುಳಿ. ಪ್ರೇರಣೆಯನ್ನು ಅಳೆಯುವ ಉಪಕರಣ

ಇಂಡಕ್ಷನ್

(ವೈ) ೧. ಅರಿವಳಿಕೆ ನೀಡಿದಾಗಿನಿಂದ ರೋಗಿಯಲ್ಲಿ ಪ್ರeಶೂನ್ಯತೆ ಉಂಟಾಗುವವರೆಗಿನ ಕಾಲಾವಧಿ

ಇಂಡಿಗೊ

(ರ) C16H10N2O2. ನೀಲಿ ಬಣ್ಣದ ಪ್ರಮುಖ ಕಡಾಯಿ ರಂಗು. ಇಂಡಿಗೊಫೆರ ವರ್ಗದ ಸಸ್ಯಗಳಲ್ಲಿ ಲಭ್ಯ. ಇಂದು ಇದೊಂದು ಸಂಶ್ಲೇಷಿತ ಉತ್ಪನ್ನ

ಇಂಡಿಯಮ್

(ರ) ಆವರ್ತ ಕೋಷ್ಟಕದ ೩ನೇ ಗುಂಪಿನಲ್ಲಿರುವ ಬೆಳ್ಳಿ ಬಣ್ಣದ ತ್ರಿವೇಲೆನ್ಸೀಯ ಲೋಹಧಾತು. ಪ್ರತೀಕ In. ಪಸಂ ೪೯, ಸಾಪರಾ ೧೧೪.೮೨, ದ್ರಬಿಂ ೧೫೫0 ಸೆ, ಕುಬಿಂ ೨೧೦೦0 ಸೆ, ೧೩0 ಸೆನಲ್ಲಿ ಸಾಸಾಂ ೭.೨೮. ವಿದ್ಯುತ್ ರೋಧ ಶೀಲತೆ ೯´೧೦-೮ ಓಮ್ ಮೀಟರ‍್ಸ್. ಸತುವಿನ ಅದಿರಿನಲ್ಲಿ ವಿರಳವಾಗಿ ಲಭ್ಯ. ಸೀಸದಂತೆ ಮೃದು ಹಾಗೂ ಗೀಚಿದಾಗ ಗುರುತು ಮೂಡಿಸುತ್ತದೆ. ವಿದ್ಯುಲ್ಲೇಪನದಲ್ಲಿ, ಟ್ರಾನ್ಸಿಸ್ಟರ್‌ಗಳ ತಯಾರಿಕೆಯಲ್ಲಿ ಬಳಕೆ

ಇಡಿಯೊಮಾರ್ಫಿಕ್ ಸ್ಫಟಿಕಗಳು

(ಭೂವಿ) ಈ ಪ್ರಭೇದಕ್ಕೇ ವಿಶಿಷ್ಟವಾದ ಸ್ಫಟಿಕ ಮುಖಗಳಿಂದ ಕೂಡಿರುವ ಅಗ್ನಿಶಿಲಾ ಖನಿಜಗಳು

ಇಂಡೀನ್

(ರ) ದ್ವಿವರ್ತುಲಗಳುಳ್ಳ ಸುವಾಸನೆಯ ನಿರ್ವರ್ಣ, ದಹನಶೀಲ ದ್ರವ ಹೈಡ್ರೊಕಾರ್ಬನ್ (C9H8). ಕಲ್ಲಿದ್ದಲ ಡಾಂಬರಿನಲ್ಲಿ ಲಭ್ಯ. ಸಾಸಾಂ ೧.೦೧, ದ್ರಬಿಂ -೩೫0 ಸೆ, ಕುಬಿಂ ೧೮೨0 ಸೆ. ಆರ್ಗ್ಯಾನಿಕ್ ಸಂಶ್ಲೇಷಣೆಯಲ್ಲಿ ಬಳಕೆ

ಇಂಡೋಲ್

(ರ) C8H7N. ಮಲ್ಲಿಗೆ ಎಣ್ಣೆ ಮತ್ತು ಪುನುಗಿನಲ್ಲಿರುವ ಮತ್ತು ಪ್ರಾಣಿಗಳ ಕರುಳಿನಲ್ಲಿ ಪ್ರೋಟೀನ್‌ಗಳ ವಿಘಟನೆಯ ಉತ್ಪನ್ನವಾಗಿರುವ ಹಳದಿ ಬಣ್ಣದ ವಿಲೇಯ ವಸ್ತು. ದ್ರಬಿಂ ೫೨.೫0 ಸೆ. ಬೆನ್ಝೀನ್ ಹಾಗೂ ಪಿರೋಲ್ ಚಕ್ರಗಳ ಮಿಲನದಿಂದಾದ ಕಾರ್ಬಾನಿಕ್ ಸಂಯುಕ್ತ. ದುರ್ವಾಸನೆಯಿದ್ದರೂ ಸುಗಂಧಗಳ ತಯಾರಿಕೆಯಲ್ಲಿ ಬಳಕೆ

ಇತಿಹಾಸಪೂರ್ವ

(ಸಾ) ಮಾನವೇತಿಹಾಸದಲ್ಲಿ ಲಿಖಿತ ದಾಖಲೆಗಳ ಆರಂಭಕ್ಕೂ ಹಿಂದಿನ ಕಾಲ. ಪ್ರಾಗೈತಿಹಾಸಿಕ

ಇದ್

(ವೈ, ಮವಿ) ಮೊದಲು ಗ್ರೋಡ್ಡೆಕ್ ರೂಢಿಗೆ ತಂದ, ಅನಂತರ ವ್ಯಕ್ತಿಯ ಸಹಜ ಪ್ರವೃತ್ತಿಗಳನ್ನು ವಿವರಿಸಲು ಫ್ರಾಯ್ಡ್ ಬಳಸಿಕೊಂಡ ಪದ. ಇದು ಪ್ರಧಾನವಾಗಿ ಹಠಾತ್ ಬಯಕೆಗಳಿಂದ ಕೂಡಿರುತ್ತದೆ ಮತ್ತು ಸುಪ್ತ ಮನಸ್ಸಿನ ಮುಖ್ಯ ಭಾಗವಾಗಿರುತ್ತದೆ. ಸುಪ್ತಪ್ರe. ಸುಪ್ತವಾಸನೆ. (ಪ್ರಾ) ಜೀವಿಯ ಆನುವಂಶಿಕತೆಯನ್ನು ನಿರ್ಧರಿಸುವ ಕೋಶ ದ್ರವ್ಯಭಾಗದ ಏಕಮಾನ. ಅಹಮ್. ಜೀವಾಂಕುರಾಂಶ

ಇದ್ದಲಿನ ಕಪ್ಪುಪುಡಿ

(ತಂ) ಸೂಕ್ಷ್ಮ/ನವುರು ಕೆತ್ತನೆ ಕೆಲಸಗಳಲ್ಲಿ ಎರಕವು ನಯವಾಗುವ ಸಲುವಾಗಿ ಅಚ್ಚಿನ ಮೇಲೆ ಚಿಮುಕಿಸುವ ಇದ್ದಲು ಪುಡಿ

ಇದ್ದಲು

(ರ) ಮರ ಅಥವಾ ಪ್ರಾಣಿ ಪದಾರ್ಥವನ್ನು ವಾಯುಸಂಪರ್ಕ ಇರದಂತೆ ವಿನಾಶಕ ಬಟ್ಟೀಕರಣಕ್ಕೆ ಒಳಪಡಿಸಿದಾಗ ದೊರೆಯುವ ಶೇಷವಸ್ತು

ಇಂದ್ರಗೋಪ

(ಭೂವಿ) ಕೆಂಪು ಅಥವಾ ಕೆಂಗಂದು ಬಣ್ಣದ ಅರೆಪಾರಕ ಚಾಲ್ಸಿಡೆನಿ (ಪ್ರಶಸ್ತ ಖನಿಜ)

ಇಂಧನ

(ಭೌ) ಉಷ್ಣ ಅಥವಾ ಶಕ್ತಿ ಪಡೆಯಲು ಉರಿಸಬಹುದಾದಂಥ ಪದಾರ್ಥ. ಉದಾ: ಕಟ್ಟಿಗೆ, ಕಲ್ಲಿದ್ದಲು, ಎಣ್ಣೆ ಅಥವಾ ಯುರೇನಿಯಮ್. ಉರುವಲು

ಇನಾಕ್ಯುಲೇಷನ್

(ವೈ) ಪ್ರಯೋಗ ಪಶುವಿನ ದೇಹ ದೊಳಕ್ಕೆ ವಿವಿಧ ಮಾರ್ಗಗಳಿಂದ ಸೋಂಕು ಪದಾರ್ಥವನ್ನು ಅಥವಾ ರೋಗಕಾರಕ ಬ್ಯಾಕ್ಟೀರಿಯಗಳನ್ನು ಸೇರಿಸುವುದು. ವ್ಯಕ್ತಿಗೆ ಸೋಂಕಿನ ಎದುರು ರಕ್ಷಣೆ ಒದಗಿಸುವ ಸಲುವಾಗಿ ತತ್ಸಂಬಂಧವಾದ ಲಸಿಕೆಯನ್ನು ಚುಚ್ಚುಮದ್ದಾಗಿ ನೀಡುವುದು. (ತಂ) ಕುಲುಮೆ/ಪಾತ್ರೆ ಗಳಲ್ಲಿ ಇರುವ ದ್ರವ ಲೋಹಕ್ಕೆ ಅಲ್ಪ ಮೊತ್ತಗಳಲ್ಲಿ ಇತರ ಲೋಹ, ಡೀಆಕ್ಸಿಡೆಂಟ್ ಮುಂತಾದವನ್ನು ಬೆರೆಸಿ ಅದರ ಸ್ಫಟಿಕೀಕರಣ ಸ್ವಭಾವದ ಮಾರ್ಪಡಿಕೆ ಅಥವಾ ಆ ಲೋಹಕ್ಕೆ ಮಿಶ್ರಲೋಹ ಗುಣಗಳನ್ನು ಒದಗಿಸಲು ಮಾಡುವ ಕಣ ಸುಧಾರಣೆ. (ರ) ಸ್ಫಟಿಕೀಕರಣವನ್ನು ಪ್ರವರ್ತಿಸಲು ಅತಿ ಪರ್ಯಾಪ್ತ ದ್ರಾವಣದೊಳಗೆ ಅಥವಾ ಅತಿಶೀತಲ ದ್ರವದೊಳಗೆ ಚಿಕ್ಕ ಸ್ಫಟಿಕವೊಂದನ್ನು ಸೇರಿಸುವುದು. (ಸ) ಆತಿಥೇಯವಾಗಬಲ್ಲ ಸಸ್ಯದಲ್ಲಿ, ಮಣ್ಣಿನಲ್ಲಿ ಅಥವಾ ಕೃಷಿಕೆ ಮಾಧ್ಯಮದಲ್ಲಿ ಕೋಶ/ಬೀಜಕ ಮುಂತಾದವನ್ನು ಹೊಗಿಸುವುದು

ಇನಾರ್ಗ್ಯಾನಿಕ್

(ರ) ಖನಿಜ ಮೂಲದ. ಕಾರ್ಬನ್ ರಹಿತ, ಅಕಾರ್ಬನಿಕ, ನಿರವಯವ. ನೋಡಿ: ಆರ್ಗ್ಯಾನಿಕ್

Search Dictionaries

Loading Results

Follow Us :   
  Download Bharatavani App
  Bharatavani Windows App