भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಇನಾರ್ಗ್ಯಾನಿಕ್ ರಸಾಯನ ವಿಜ್ಞಾನ

(ರ) ರಸಾಯನ ವಿಜ್ಞಾನದ ಒಂದು ಶಾಖೆ. ಇಂಗಾಲದ ಸಂಯುಕ್ತಗಳನ್ನು ಹೊರತುಪಡಿಸಿ ಉಳಿದ ರಾಸಾಯನಿಕ ಧಾತುಗಳ ಮತ್ತು ಅವುಗಳ ಸಂಯುಕ್ತಗಳ ಅಧ್ಯಯನ. ಆದರೆ ಇಂಗಾಲದ ಆಕ್ಸೈಡ್‌ಗಳ

ಇನ್‌ಕ್ಯುಬೇಷನ್

(ರ) ಕಿಣ್ವನ ಕ್ರಿಯೆಯಂಥ ನಾನಾ ರಾಸಾಯನಿಕ ಕ್ರಿಯೆಗಳನ್ನು ಅಭ್ಯಸಿಸಲೋಸುಗ ರಾಸಾಯನಿಕ ಮಿಶ್ರಣಗಳನ್ನು ನಿರ್ದಿಷ್ಟ ಸ್ಥಿತಿಯಲ್ಲಿ ನಾನಾ ಕಾಲಾವಧಿಗಳವರೆಗೆ ಇರಿಸಿರುವುದು. (ವೈ) ೧. ಸೋಂಕು ದೇಹವನ್ನು ಪ್ರವೇಶಿಸಿದ ಕ್ಷಣದಿಂದ ಹಿಡಿದು, ಪ್ರಥಮ ರೋಗಲಕ್ಷಣ ಪ್ರಕಟವಾಗುವ ವರೆಗಿನ ಅವಧಿ. ೨. ಕಾವಿನವಧಿ. ಅವಧಿಪೂರ್ವ ಜನಿಸಿದ ಅಥವಾ ಆಕ್ಸಿಜನ್ನಿನ ಕೊರತೆಯಿಂದ ನರಳುವ ಮಗುವನ್ನು ಕೃತಕ ಉಷ್ಣತೆ, ಆರ್ದ್ರತೆ ಹಾಗೂ ಆಕ್ಸಿಜನ್ನಿನ ಪರಿಸರದಲ್ಲಿ ಇಟ್ಟು ಕಾಪಾಡುವುದು

ಇನ್‌ಕ್ವಿಲಿನ್

(ಪ್ರಾ) ಬೇರೊಂದು ಪ್ರಾಣಿಯ ಗೂಡಿನಲ್ಲಿ ವಾಸಿಸುತ್ತಿರುವ ಅತಿಥಿ ಪ್ರಾಣಿ. ಆತಿಥೇಯ ಪ್ರಾಣಿ ತನಗಾಗಿ, ತನ್ನ ಮರಿಗಳಿಗಾಗಿ ಇರಿಸಿರುವ ಆಹಾರವನ್ನು ತಾನೂ ಉಣ್ಣುವ ಪ್ರಾಣಿ. ಸಹಭುಂಜಕ ಜೀವಿ

ಇನ್‌ಟೇಕ್

(ತಂ) ಅಂತರ್ದಹನ ಎಂಜಿನ್‌ನೊಳಕ್ಕೆ ಅನಿಲ ಮಿಶ್ರಣವನ್ನು, ಗಣಿಯೊಳಕ್ಕೆ ಸ್ವಚ್ಛ ಹವೆಯನ್ನು, ಒಳ ಹಾಯಿಸುವ ಕೊಳವಿ, ತೆರಪು, ಇತ್ಯಾದಿ. ಒಳಹಾಯಿಕೆ

ಇನ್ನರ್‌ವೇಷನ್

(ಪ್ರಾ) ಅಂಗದಿಂದ ಮತ್ತು ಅಂಗಕ್ಕೆ ನರ ತಂತುಗಳ ಸರಬರಾಜು

ಇನ್‌ಪುಟ್

(ವೈ) ನೋಡಿ : ಆದಾನ

ಇನ್‌ಫಾರ್ಕ್ಟ್

(ವೈ) ರಕ್ತಪೂರೈಕೆ ಸರಿಯಾಗಿ ಆಗದೆ ಊತಕ ಸತ್ತುಹೋಗಿರುವ ದೇಹಭಾಗ. ಮೃತಊತಕ

ಇನ್‌ಫ್ಲೂಯೆನ್ಝಾ

(ವೈ) ಮೈಕೈ ನೋವು, ನೆಗಡಿ, ಜ್ವರ ಗಳಿಂದ ಕೂಡಿದ ತೀವ್ರ ಸಾಂಕ್ರಾಮಿಕವಾದ, ಗಾಳಿಯಲ್ಲಿ ಹರಡುತ್ತ ಶ್ವಾಸಕಾಂಗಗಳಿಗೆ ತಗಲುವ, ಶ್ವಾಸನಾಳದ ಲೋಳೆ ಪೊರೆಯ ಉರಿಯೂತ ಉಂಟುಮಾಡುವ ವೈರಸ್ ರೋಗ. ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೀವ್ರ ನೆಗಡಿಯಿಂದ ಕೂಡಿ ಬೇಗ ದಣಿವು ಉಂಟುಮಾಡುತ್ತದೆ. ಗಾಳಿಯಲ್ಲಿದ್ದು ಉಸಿರಿನ ಮೂಲಕ ಶರೀರ ಹೊಗುವ ವೈರಸ್ ಈ ಅಸ್ವಸ್ಥತೆಗೆ ಕಾರಣ. ಪ್ರಪಂಚ ವ್ಯಾಪಿ ರೋಗವಿದು. ಆದರೆ ಇದರ ತೀವ್ರತೆ ಸತತವಾಗಿ ಬದಲುವ ರೋಗಾಣುವಿನ ಮಾದರಿಯನ್ನು ಅವಲಂಬಿಸಿದೆ. ಉರಿಶೀತ

ಇನ್ವರ್ಟೇಸ್

(ಸ) ಕಬ್ಬಿನ ಸಕ್ಕರೆಯನ್ನು ಜಲ ವಿಶ್ಲೇಷಿಸುವ ಒಂದು ಸಸ್ಯ ಕಿಣ್ವ. ಸುಕ್ರೇಸ್. (ರ) ಸುಕ್ರೇಸನ್ನು ಜಲವಿಭಜನೆ ಮಾಡಿ ಗ್ಲೂಕೋಸ್ ಲೀವ್ಯೂಲೋಸ್‌ಗಳ ಮಿಶ್ರಣವಾಗಿ ಪರಿವರ್ತಿಸಲ್ಪಟ್ಟದ್ದು

ಇನ್ವಾರ್

(ರ) ೬೩.೮% ಕಬ್ಬಿಣ, ೩೬% ನಿಕ್ಕಲ್, ೦.೨% ಕಾರ್ಬನ್ ಉಳ್ಳ ಮಿಶ್ರಲೋಹ. ಅತ್ಯಂತ ಕಡಿಮೆ ಉಷ್ಣ ವ್ಯಾಕೋಚನ ಗುಣಾಂಕವಿರುವ ಇದನ್ನು ಗಡಿಯಾರದ ಲೋಲಕ, ವೈಜ್ಞಾನಿಕ ಸಲಕರಣೆಗಳು ಮೊದಲಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇನ್ವೇರಿಯಬಲ್ (ಅವ್ಯತ್ಯಯ ಶೀಲ) ಪದದ ಸಂಕ್ಷಿಪ್ತ ರೂಪ

ಇನ್ಸುಲ

(ಪ್ರಾ) ಮಿದುಳಿನ ಸಿಲ್ಪಿಯನ ಸೀಳಿನ ಬುಡದಲ್ಲಿ ಇರುವ ಸಣ್ಣ ಹಾಲೆ

ಇನ್ಸುಲಿನ್

(ವೈ) ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿ ಯಾಗುವ, ಸಕ್ಕರೆಯನ್ನು ಜೀರ್ಣಗೊಳಿಸುವುದರಲ್ಲಿ ಭಾಗವಹಿಸುವ, ಪ್ರೋಟೀನ್ ಹಾರ್ಮೋನ್. ಇದರ ಕೊರತೆಯಿಂದ ಆಹಾರ ದಲ್ಲಿಯ ಸಕ್ಕರೆ ಅಂಶ ಜೀರ್ಣಗೊಳ್ಳದೆ ರಕ್ತದೊಂದಿಗೆ ಬೆರೆತು ಮಧುಮೂತ್ರ ರೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ ಈ ರೋಗವಿರುವವರಿಗೆ ಇನ್ಸುಲಿನ್ ಚುಚ್ಚುಮದ್ದು ನೀಡಿ ರಕ್ತದಲ್ಲಿಯ ಸಕ್ಕರೆ ಅಂಶ ನಿವಾರಿಸಲು ಯತ್ನಿಸಲಾಗುತ್ತದೆ. ಇದಕ್ಕಾಗಿ ಹಿಂದೆ ಇನ್ಸುಲಿನ್ನನ್ನು ಹಂದಿ ಹಾಗೂ ದನಗಳ ಮೇದೋಜೀರಕಾಂಗಗಳ ಸಾರದಿಂದ ತಯಾರಿಸಲಾಗುತ್ತಿತ್ತು. ಈಗ ಜೀನ್‌ರೀತ್ಯ ವ್ಯತ್ಯಯಿಸಿದ ಬ್ಯಾಕ್ಟೀರಿಯಾ ತಳಿಯಿಂದ ಪಡೆಯಲಾಗುತ್ತದೆ

ಇಂಪಾಲ

(ಪ್ರಾ) ಆರ್ಟಿಯೊಡ್ಯಾಕ್ಟಿಲ ವರ್ಗ, ಬೋವಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಈಪೈಸಿರೋಸ್ ಮೆಲಾಂಪಸ್ ವೈಜ್ಞಾನಿಕ ನಾಮ. ದಕ್ಷಿಣ ಆಫ್ರಿಕ ಮೂಲವಾಸಿ. ಆಕರ್ಷಕ ಒಡಲಿನ ಸಣ್ಣ ಜಿಂಕೆ, ಹುಲ್ಲೆ. ಮೈಬಣ್ಣ ಮೇಲ್ಭಾಗದಲ್ಲಿ ಕಂದುಮಿಶ್ರಿತ ಕೆಂಪು, ಕೆಳಭಾಗದಲ್ಲಿ ಬಿಳಿ. ವಯಸ್ಸಾದ ಇಂಪಾಲಗಳಿಗೆ ಮಾತ್ರ ಸುರುಳಿ ಸುತ್ತಿದ ಉಂಗುರ ಗಳಿಂದಾದ ಎರಡು ಕೊಂಬುಗಳಿರುತ್ತವೆ

ಇಂಪೇಷಿಯನ್ಸ್

(ಸ) ಬಾಲ್ಸಾಮಿನೇಸೀ ಕುಟುಂಬ, ಕರ್ಣಕುಂಡಲ ಜಾತಿಗೆ ಸೇರಿದ, ಏಕ, ದ್ವಿ ಹಾಗೂ ಬಹುವಾರ್ಷಿಕ ಸಸ್ಯ. ೬೦೦-೭೦೦ ಪ್ರಭೇದಗಳಿವೆ. ಯುರೇಷ್ಯ, ಆಫ್ರಿಕಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಕಾಯಿ ಮುಟ್ಟಿದೊಡನೆ ಸಿಡಿಯುವುದರಿಂದ ಇದಕ್ಕೆ ಇಂಪೇಷಿಯನ್ಸ್ (ಅಸಹನೆ) ಹೆಸರು ಬಂದಿದೆ. ಸಾಲುಗಿಡ ಗಳಾಗಿ ಬೆಳೆಸುತ್ತಾರೆ. ಗಿಡದ ಕಷಾಯದಲ್ಲೂ ಬೀಜದ ಎಣ್ಣೆಯಲ್ಲೂ ಔಷಧೀಯ ಗುಣಗಳಿವೆ

ಇಬ್ಬನಿ

(ಭೌ) ತೆರೆದ ಮೇಲ್ಮೈಗಳ ಮೇಲೆ ಶಾಂತ ಮತ್ತು ತಿಳಿಯಾದ ರಾತ್ರಿ ವೇಳೆ ಸಂಚಯಿಸುವ ತೇವ. ಉಷ್ಣನಷ್ಟದ ಪರಿಣಾಮವಾಗಿ ಈ ಮೇಲ್ಮೈಗಳ ಉಷ್ಣತೆ ಇಬ್ಬನಿ ಬಿಂದುವಿಗಿಂತ ಕೆಳಕ್ಕಿಳಿಯುತ್ತದೆ. ಆಗ ಈ ಮೇಲ್ಮೈ ಸಂಪರ್ಕದಲ್ಲಿ ಇರುವ ವಾಯುವಿನಲ್ಲಿಯ ತೇವ ಸಾಂದ್ರೀಕರಿಸಿ ಹನಿಹನಿಯಾಗಿ ನೆಲಕ್ಕೆ ಬೀಳುತ್ತದೆ. ತುಷಾರ. ನೋಡಿ: ಮಂಜುಹನಿ

ಇಬ್ಬನಿ ಬಿಂದು

(ಭೌ) ಜಲಬಾಷ್ಪದ ಸಾಂದ್ರೀಕರಣ ಆರಂಭವಾಗುವ ಉಷ್ಣತೆ

ಇರಾಸ್

(ವೈ) ಮನೋವಿಶ್ಲೇಷಣೆಯಲ್ಲಿ ಉಳಿವು ಹಾಗೂ ಜೀವೋತ್ಪತ್ತಿಯ ಸಹಜ ಪ್ರವೃತ್ತಿಗಳಿಗೆ ಸಂಬಂಧಿಸಿದ ಸೂತ್ರ

ಇರಿ

(ವೈ) ಈಟಿಶಸ್ತ್ರದಿಂದ ಚುಚ್ಚಿ, ಕೊಯ್ದು ಅಥವಾ ಕತ್ತರಿಸಿ ತೆರೆ. ಕುರು ಇತ್ಯಾದಿಗಳನ್ನು ಸೀಳು

ಇರಿಡಿಯಮ್

(ರ) ಭಿದುರವಾದ, ಬೂದು ಬಣ್ಣದ ಪ್ಲಾಟಿನಮ್ ಕುಟುಂಬಕ್ಕೆ ಸೇರಿದ ಲೋಹಧಾತು. ಪ್ರತೀಕ ir. ಪಸಂ ೭೭, ೨೦0 ಸೆನಲ್ಲಿ ಸಾಸಾಂ ೨೨.೪, ಪತೂ ೧೯೨.೨. ದ್ರಬಿಂ ೨೪೧೦0 ಸೆ ಪ್ಲಾಟಿನಮ್ ಅಥವಾ ಆಸ್ಮಿಯಮ್‌ನೊಂದಿಗೆ ಕೂಡಿ ಗಡಸಾದ ತುಕ್ಕು-ನಿರೋಧಕ ಮಿಶ್ರಲೋಹ ರೂಪಿಸುತ್ತದೆ. ಅದನ್ನು ಲೇಖನಿಯ ಮುಳ್ಳಿನ ತುದಿಗಳಲ್ಲೂ ಗಡಿಯಾರಗಳಲ್ಲೂ ದಿಕ್ಸೂಚಿಗಳಲ್ಲೂ ಬಳಸಲಾಗುತ್ತದೆ

ಇರುವೆ

(ಪ್ರಾ) ಕೀಟ ವರ್ಗ, ಹೈಮನಾಪ್ಟರ ಉಪವರ್ಗ, ಫಾರ್ಮಿಸಿಡೀ ಕುಟುಂಬಕ್ಕೆ ಸೇರಿದ, ಅತಿ ಪ್ರಾಚೀನ ಸಂಘ ಜೀವಿ. ಸಿನೋಜೋಯಿಕ್ ಯುಗದ (೬೫ ಮಿಲಿಯನ್ ವರ್ಷ ಹಿಂದಿನ) ಪಳೆಯುಳಿಕೆ ದೊರೆತಿದೆ. ಸುಮಾರು ೬೦೦೦ ಪ್ರಭೇದಗಳಿವೆ. ಬೆಚ್ಚಗಿನ ಗೂಡು ವಾಸಸ್ಥಾನ

Search Dictionaries

Loading Results

Follow Us :   
  Download Bharatavani App
  Bharatavani Windows App