भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous12Next >

ಊಜ್

(ಭೂವಿ) ಫೊರಾಮಿನಿಫೆರ, ಡಯಾಟಮ್ ಮುಂತಾದ ಸಾಗರಜೀವಿಗಳ ಚಿಪ್ಪು ಚೂರುಗಳಿಂದ ಕೂಡಿದ ಸಾಗರ ತಳಸಂಚಯ. ಸಣ್ಣ ಕಣಗಳಿಂದಾಗಿದೆ

ಊಟೆ

(ಸಾ) ನೆಲದಡಿಯಿಂದ ಮೇಲಕ್ಕೆ ಚಿಮ್ಮುವ ನೀರು. ಬುಗ್ಗೆ. ಕಾರಂಜಿ. ನೋಡಿ : ಚಿಲುಮೆ

ಊಡು

(ತಂ) ಬೈರಿಗೆ/ಕತ್ತರಿಸುವ ಉಪಕರಣದ ಮುಂಚಲನೆ. ಪಾತ್ರೆಗೆ ದ್ರಾವಣ ತುಂಬು. ಯಂತ್ರದಲ್ಲಿ ಸಂಸ್ಕರಣಕ್ಕೆ ವಸ್ತು ಅಥವಾ ಬಿಡಿ ಭಾಗಗಳನ್ನು ಮುಂದೂಡುವ ಭಾಗ. (ಕಂ) ಕಂಪ್ಯೂಟರ್/ಸಂಪರ್ಕ ಜಾಲಬಂಧಕ್ಕೆ ಸಂe/ಕ್ರಮವಿಧಿ ಒದಗಿಸುವುದು

ಊತ

(ವೈ) ಶರೀರದ ಯಾವುದೇ ಭಾಗ ಬಾತು ಕೊಳ್ಳುವುದು, ಊದಿಕೊಳ್ಳುವುದು. ಬಾವು. ಬೀಗು

ಊತ

(ಸ) ಸಸ್ಯದ ಯಾವುದೇ ಭಾಗ ಹಾನಿಗೆ/ಬೇನೆಗೆ ಒಳಗಾದಾಗ ಅಲ್ಲಿಯ ಊತಕಗಳು ಸಹಜ ಪ್ರಮಾಣಕ್ಕಿಂತ ದೊಡ್ಡದಾಗಿ ಉಬ್ಬಿಕೊಳ್ಳುವುದು

ಊತಕ ಉರಿಯೂತ

(ವೈ) ತೀವ್ರ ಸ್ವರೂಪದಲ್ಲಿ ಹರಡ ಬಹುದಾದ ಬ್ಯಾಕ್ಟೀರಿಯಾಗಳಿಂದಾಗುವ ಚರ್ಮ ಸೋಂಕು. ಸಾಮಾನ್ಯವಾಗಿ ಸ್ಟ್ರೆಪ್ಟೋಕಾಕಸ್ ಅಥವಾ ಸ್ಟಫೈಲೊಕಾಕಸ್ ಜೀವಿ ಗಳಿಂದ ತಲೆದೋರುವ ಊತಕ ಉರಿಯೂತದಲ್ಲಿ ಚರ್ಮ ಕೆಂಪಾಗಿರುತ್ತದೆ. ಬಿಸಿಯಾಗಿರುತ್ತದೆ, ಊದಿಕೊಂಡಿರುತ್ತದೆ, ನೋವು ಅಸಾಧ್ಯವಾಗಿರುತ್ತದೆ. ಇದು ಸಾಮಾನ್ಯವಾಗಿ ಕೆಳ ಅವಯವದಲ್ಲಿ (ಕಾಲುಗಳಲ್ಲಿ) ಕಂಡುಬರುವ ಸಮಸ್ಯೆ. ಸಿಹಿಮೂತ್ರ ರೋಗಿಗಳಲ್ಲಿ ಗಂಭೀರ ಸ್ವರೂಪ ತಳೆಯಬಲ್ಲದು

ಊತಕ ಕೃಷಿ

(ಜೀ) ಪ್ರಾಣಿ ಅಥವಾ ಸಸ್ಯ ದೇಹದಿಂದ ತೆಗೆದ ಊತಕ ತುಣುಕುಗಳನ್ನು ಪ್ರತ್ಯೇಕವಾಗಿ, ಯುಕ್ತ ಪರಿಸರದಲ್ಲಿ ಬೆಳೆಸುವುದು. ಜೀವಕೋಶಗಳ ಬೆಳವಣಿಗೆ ಹಾಗೂ ಪ್ರಭೇದೀಕರಣಗಳನ್ನು ನಿಯಂತ್ರಿಸುವ ಅಂಶಗಳ ಬಗೆಗೆ ತಿಳಿಯಲು ಊತಕ ಕೃಷಿ ಅತ್ಯಮೂಲ್ಯವೆಂದು ಸಾಧಿತವಾಗಿದೆ. ಸಸ್ಯ ಊತಕಗಳ ಕೃಷಿಯ ಫಲವಾಗಿ ಸಂಪೂರ್ಣವಾಗಿ ಹೊಸ ಮಾದರಿಯ ಸಸ್ಯ ಗಳನ್ನು, ವೈರಸ್‌ಗಳಿಂದ ಬಾಧಿತವಾಗದಂಥ ಸಸ್ಯಗಳನ್ನು ಬೆಳೆಯಲು ಸಾಧ್ಯವಾಗಿದೆ. ಅಂಗಾಂಶ ಕೃಷಿ

ಊತಕ ಕ್ಷಯ

(ವೈ) ಜೀವಂತ ಊತಕದಲ್ಲಿ ಕೋಶ ಹಂತಹಂತವಾಗಿ ಶಿಥಿಲಗೊಂಡು/ವಿಘಟನೆಗೊಂಡು ಊತಕ ಕ್ರಮೇಣ ನಶಿಸುವುದು

ಊತಕ ತಂತ್ರವಿದ್ಯೆ

(ವೈ) ಹಾನಿಗೀಡಾದ ಅಥವಾ ಗಾಯಗೊಂಡ ಶಾರೀರಿಕ ರಚನೆಯನ್ನು, ಅಂಗಾಂಶ ಅಥವಾ ಕೆಲವು ವೇಳೆ ಅಂಗಗಳನ್ನು ಪೂರ್ವಸ್ಥಿತಿಗೆ ತರುವ ಅಥವಾ ಬದಲಾಯಿಸುವ ತಂತ್ರವಿದ್ಯೆ. ಈ ವಿನೂತನ ಚಿಕಿತ್ಸೆಯು ಜೀವ ವಿಜ್ಞಾನ ಹಾಗೂ ತಂತ್ರಜ್ಞಾನದ ಮೂಲ ತತ್ವಗಳ ಆನ್ವಯಿಕತೆಯನ್ನು ಆಧರಿಸಿದೆ. ಇಲ್ಲಿ ಹಾನಿಗೀಡಾದ ಅಂಗಾಂಶಗಳ ಬದಲಾಗಿ, ಮೂಲ ಅಂಗಾಂಶಗಳಂತೆಯೇ ಕಾರ್ಯ ನಿರ್ವಹಿಸುವ ಪರ್ಯಾಯ ಗಳನ್ನು ತಯಾರಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಜೀವಂತ ಕೋಶಗಳನ್ನು ಆಕರ ಸಾಮಗ್ರಿಯಂತೆ ಉಪಯೋಗಿಸಲಾಗುತ್ತದೆ

ಊತಕ ವಿಜ್ಞಾನ

(ಜೀ) ಕ್ರಿಯೆಗೆ ಸಂಬಂಧಿಸಿದಂತೆ ಪ್ರಾಣಿ ಹಾಗೂ ಸಸ್ಯ ಊತಕಗಳ ಸೂಕ್ಷ್ಮ ರಚನೆ ಮತ್ತು ರಾಸಾಯನಿಕ ಸಂಯೋಜನೆಗಳನ್ನು ಅಧ್ಯಯನ ಮಾಡುವ ಶಾಖೆ. (ವೈ) ಸೂಕ್ಷ್ಮ ದರ್ಶಕದ ಅಡಿಯಲ್ಲಿ ಜೀವಕೋಶಗಳ ರಚನೆಯನ್ನು ಅಧ್ಯಯನ ಮಾಡುವ ವಿಜ್ಞಾನ. ಸಹಜ ಕೋಶಗಳ ಅಧ್ಯಯನವು ಸಹಜ ಊತಕ ವಿಜ್ಞಾನ; ರೋಗಗ್ರಸ್ತ ಜೀವಕೋಶಗಳ ಅಧ್ಯಯನವು ವಿಕೃತ ಊತಕ ವಿಜ್ಞಾನವಾಗುತ್ತದೆ

ಊತಕನಾಶ

(ಜೀ) ಪ್ರಾಣಿ ಅಥವಾ ಸಸ್ಯದಲ್ಲಿ ಜೈವಿಕ ಊತಕಗಳು ನಾಶವಾಗುವುದು

ಊದಾ ಬಣ್ಣ

(ಸಾ) ಕೆಂಪೂ ನೀಲಿಯೂ ಸ್ವಲ್ಪ ಕಪ್ಪು ಅಥವಾ ಬಿಳುಪಿನೊಡನೆ ಅಥವಾ ಇವೆರಡರೊಡನೆ ವಿವಿಧ ಪ್ರಮಾಣಗಳಲ್ಲಿ ಮಿಶ್ರವಾದ ಬಣ್ಣ

ಊದು

(ವೈ) ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿಗೆ ಊದಿ ಕೊಂಡಿರುವುದು. ಊದಿಕೊಳ್ಳಲು ಗಾಳಿ, ನೀರು, ರಕ್ತರಸ (ಸೀರಂ) ಇತ್ಯಾದಿ ಕಾರಣವಾಗಿರಬಹುದು. ಬೀಗು

ಊದು ಕುಲುಮೆ

(ತಂ) ಒತ್ತಡದಲ್ಲಿರುವ ಬಿಸಿಗಾಳಿಯನ್ನು ಯಂತ್ರದ ಮೂಲಕ ನುಗ್ಗಿಸಿ ಲೋಹ ಕರಗಿಸುವ ಕುಲುಮೆ, ಬೀಡು ಕಬ್ಬಿಣದ ತಯಾರಿಕೆಯಲ್ಲಿ ಬಳಕೆ

ಊದು ಕೊಳವೆ

(ತಂ) ಗಾಜು ಉದ್ಯಮದಲ್ಲಿ ದ್ರವ ಗಾಜನ್ನು ಸಂಗ್ರಹಿಸಿ ಊದಿ ಅದಕ್ಕೆ ವಿವಿಧ ಆಕಾರವೀಯಲು ಬಳಸುವ, ಸುಮಾರು ೨ ಮೀ ಉದ್ದ , ೨-೪ ಮಿಮೀ ನಾಳವ್ಯಾಸ ಮತ್ತು ಮಂದ ಮೂತಿ ಇರುವ ಲೋಹದ ಕೊಳವೆ

ಊನ

(ವೈ) ನೋಡಿ: ವಿಕಲ್ಪೀಕರಣ

ಊರಿಡುವಿಕೆ

(ರ) ಖಾದ್ಯ ಪದಾರ್ಥಗಳನ್ನು ಉಪ್ಪು, ಸಕ್ಕರೆ, ಮಸಾಲೆ ಹಾಗೂ ಅಸಿಟಿಕ್ ಆಮ್ಲ ಉಪಯೋಗಿಸಿ ಸಂರಕ್ಷಿಸುವ ವಿಧಾನ. (ತಂ) ಆಮ್ಲ ದ್ರಾವಣದಿಂದ ಲೋಹ ಸಂಸ್ಕರಣ

ಊರೆ

(ತಂ) ಕಮಾನಿನ ಗುದ್ದು ಕಂಬ. ಪಕ್ಕದಲ್ಲಿರುವ ಆಧಾರ. ಕಮಾನೂ ಅದರ ಆಧಾರವೂ ಸಂಧಿಸುವ ಸ್ಥಳ

ಊರೆ

(ತಂ) ನೋಡಿ: ಆಧಾರ

ಊರ್ಧ್ವ

(ಗ) ನೆಲಕ್ಕೆ ಲಂಬವಾಗಿರುವ ರೇಖೆ. ನೆಲಮಟ್ಟಕ್ಕೆ ಕ್ಷಿತಿಜೀಯವೆಂದು ಹೆಸರು. ಶೃಂಗೀಯ. ಮೇಲೆ
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App