भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous123456789Next >

ಟಗರು

(ಪ್ರಾ) ಬೀಜ ಒಡೆದಿಲ್ಲದ ಗಂಡು ಕುರಿ

ಟನ್

(ತಂ) ಬ್ರಿಟನ್ನಿನಲ್ಲಿ ಒಮ್ಮೆ ಬಳಕೆಯಲ್ಲಿದ್ದ ತೂಕದ ಒಂದು ಏಕಮಾನ. ೨೨೪೦ ಪೌಂಡ್‌ಗೆ ಅಥವಾ ೧೦೧೪.೦೪೭ ಕಿ.ಗ್ರಾಮ್‌ಗೆ ಸಮ. ಲಾಂಗ್‌ಟನ್ ಎಂಬ ಹೆಸರೂ ಉಂಟು. ಅಮೆರಿಕದಲ್ಲಿ ಬಳಕೆಯಲ್ಲಿರುವುದನ್ನು ಷಾರ್ಟ್ ಟನ್ ಎನ್ನಲಾಗುತ್ತದೆ. ಅದು ೨೦೦೦ ಪೌಂಡ್‌ಗೆ ಸಮ

ಟನ್

(ತಂ) ಮೆಟ್ರಿಕ್‌ಟನ್. ೧೦೦೦ ಕಿ.ಗ್ರಾಂಗೆ ಸಮ

ಟಪೀಟಮ್

(ಪ್ರಾ) ರಾತ್ರಿಯಲ್ಲಿ ಹಾರಾಡುವ ಕೆಲವು ಕೀಟಗಳ ಕಣ್ಣುಗಳಲ್ಲಿಯ ಪ್ರತಿಫಲನ ರಚನೆ. ಅನೇಕ ನಿಶಾಚರಿ ಕಶೇರುಕಗಳ (ಸ್ತನಿಗಳ ಉದಾ. ಬೆಕ್ಕಿನ) ಕಣ್ಣಿನ ಕೊರಾಯ್ಡ್ ನಲ್ಲಿರುವ ಗ್ವಾನೀನ್ ಸ್ಫಟಿಕಯುಕ್ತ ಪ್ರತಿಫಲನ ಸ್ತರ. ಇದು ಬೆಳಕನ್ನು ಅಕ್ಷಿಪಟಕ್ಕೆ, ಹಿಂದಕ್ಕೆ, ಪ್ರತಿಫಲಿಸುತ್ತದೆ. ಇದರಿಂದ ದೃಷ್ಟಿ ಸುಧಾರಿಸುತ್ತದೆ ಮತ್ತು ಕಣ್ಣುಗಳು ಕತ್ತಲಲ್ಲಿ ಹೊಳೆಯುವಂತೆ ಆಗುತ್ತವೆ. (ಸ) ನಾಳ ಸಸ್ಯದ ಬೀಜಕ ಧಾನಿಯಲ್ಲಿ ಬೀಜಕ ಮಾತೃಕೋಶಗಳನ್ನು ಆವರಿಸಿಕೊಂಡಿರುವ ಕೋಶಗಳ ಪದರ

ಟಪ್ಪೆ

(ತಂ) ನೋಡಿ: ರಿಲೇ

ಟಫೇಟ

(ತಂ) ನವುರು ಎಳೆಗಳನ್ನು ಸರಳವಾಗಿ ನೇಯ್ದು ತಯಾರಿಸಿದ ಹಗುರ ವಸ್ತ್ರ. ಹೊಳೆಯುವ ಉತ್ತಮ ರೇಷ್ಮೆ ಅಥವಾ ರೇಷ್ಮೆಯಂಥ ಬಟ್ಟೆ

ಟಫ್

(ಭೂವಿ) ಸಣ್ಣ ಚೂರು ಮತ್ತು ಸೂಕ್ಷ್ಮ ಕಣಗಳಿಂದ ಕೂಡಿದ ಜ್ವಾಲಾಮುಖಿ ದೂಳಿನಿಂದಾದ ದಟ್ಟ ಶಿಲೆ

ಟರ್ಕ್ವಾಯ್ಸ್

(ಭೂವಿ) ಅಲ್ಯೂಮಿನಿಯಮ್ ಹಾಗೂ ತಾಮ್ರದ ಜಲಯುಕ್ತ ಫಾಸ್ಪೇಟ್. ತ್ರಿನತೀಯ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ದ್ವಿತೀಯಕ ಖನಿಜ. ವಿಶೇಷವಾಗಿ ಟ್ರ್ಯಾಕ್ಸೈಟ್ ಗಳಂಥ ಅಗ್ನಿಶಿಲೆಗಳ ಪರಿವರ್ತನಾ ವಲಯಗಳಲ್ಲಿ ಮೈದಳೆಯುತ್ತದೆ. ತಿಳಿನೀಲಿ, ನೀಲಿ ಮಿಶ್ರಿತ ಹಸುರು ಹಾಗೂ ಹಳದಿ ಮಿಶ್ರಿತ ಹಸುರು ಬಣ್ಣಗಳಲ್ಲಿ ಲಭ್ಯ. ಪ್ರಸಶ್ತ ರತ್ನ. CuAl6 (PO4)4 (OH)8 4H2O

ಟರ್ನಿಪ್

(ಸ) ಕ್ರೂಸಫರೀ (ಬ್ರ್ಯಾಸಿಕೇಸಿ) ಕುಟುಂಬಕ್ಕೆ ಸೇರಿದ ತರಕಾರಿ ಗಿಡ. ಬ್ರ್ಯಾಸಿಕ ರೇಫ ಅಥವಾ ಬ್ರ್ಯಾಸಿಕ ಕ್ಯಾಂಪೆಸ್ಟ್ರಿಸ್ ವೈಜ್ಞಾನಿಕ ನಾಮ. ದ್ವಿವಾರ್ಷಿಕ ಮೂಲಿಕೆ. ಇಡೀ ಬೇರು ತರಕಾರಿಯಾಗಿ ಬಳಕೆ. ಇದರ ಬೇರಿನಲ್ಲಿ, ಎಲೆಗಳಲ್ಲಿ, ಬೀಜದಿಂದ ತೆಗೆದ ಎಣ್ಣೆಯಲ್ಲಿ ಔಷಧೀಯ ಗುಣಗಳುಂಟು

ಟರ್ಪೀನ್‌ಗಳು

(ರ) ಸಸ್ಯ ಪ್ರಪಂಚದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಪರಿಮಳ ವಸ್ತುಗಳು. ಸುಗಂಧ ತೈಲಗಳಲ್ಲಿ ಸರಳ ಟರ್ಪೀನ್‌ಗಳಿವೆ. ಬಾಷ್ಪಶೀಲ ವಸ್ತುವಾದ ಟರ್ಪೆಂಟೈನ್ ಎಣ್ಣೆ ಮತ್ತು ಘನವಸ್ತುವಾದ ಕರ್ಪೂರ ಟರ್ಪೀನ್‌ಗಳಿಗೆ ಉದಾಹರಣೆಗಳು. ಬಹುತೇಕ ಟರ್ಪೀನ್ ಹೈಡ್ರೊಕಾರ್ಬನ್‌ಗಳನ್ನು (C5H8)n ಎಂದು ನಿರೂಪಿಸುವುದುಂಟು

ಟರ್ಪೆಂಟೈನ್

(ರ) ಶಂಖಾಕೃತಿಯ ಕಾಯಿಗಳನ್ನು ಬಿಡುವ ಪೈನ್‌ಜಾತಿಯ ಮರಗಳು (ಪೈನಸ್ ಸೆಲ್ವೆಸ್ಟ್ರಿಸ್) ಒಸರಿಸುವ ರಾಳವನ್ನು ಆಸವಿಸಿ ಪಡೆದ ತೈಲ. ಸೂತ್ರ C10H16. ಸಾಸಾಂ ೦.೮೫-೦.೯೧; ಕುಬಿಂ ೧೫೫-೧೬೫0 ಸೆ. ವೆನಿಸ್ (ಅಥವಾ ಲಾರ್ಚ್) ತೈಲ ಹಾಗೂ ಕೆನಡಾ ಬಾಲ್ಸಮ್ ಪರಿಚಿತ ಉದಾಹರಣೆ ಗಳು. ಸುವಾಸನಾಪೂರಿತ, ವರ್ಣರಹಿತ, ದಹನಶೀಲ ದ್ರವ. ನೀರಿನಲ್ಲಿ ಅವಿಲೇಯ. ವಾಯುಸಂಪರ್ಕದಲ್ಲಿ ಘನೀಭವಿಸುತ್ತದೆ. ರಾಸಾಯನಿಕವಾಗಿ ಪೈನೀನ್ ಮತ್ತಿತರ ಏಕಚಕ್ರೀಯ ಟರ್ಪೀನ್‌ಗಳ ಮಿಶ್ರಣ. ಬಣ್ಣ ಮತ್ತು ವಾರ್ನಿಷ್‌ಗಳಲ್ಲಿ ವಿಲೇಯಕವಾಗಿ ಬಳಕೆ

ಟರ್ಬಟ್

(ಪ್ರಾ) ಫ್ಲೂರೋನೆಕ್ಟಿಫಾರ್ಮೀಸ್ ಗಣದ ಚಪ್ಪಟೆ ಮೀನು. ಇದಕ್ಕೆ ಯೂರೋಪಿನ ಫ್ಲೌಂಡರ್ ಎಂಬ ಹೆಸರುಂಟು. ರಾಂಬಸ್‌ಮ್ಯಾಕ್ಸಿಮಸ್ ವೈಜ್ಞಾನಿಕ ನಾಮ. ಅಟ್ಲಾಂಟಿಕ್ ಕರಾವಳಿ ಹಾಗೂ ಮೆಡಿಟರೇನಿಯನ್ ಸಮುದ್ರ ವಾಸಿ. ದೇಹ ಚಪ್ಪಟೆ ಆಗಿರುವುದರಿಂದ ಎರಡು ಕಣ್ಣುಗಳೂ ಎಡಭಾಗದಲ್ಲಿ ಮಾತ್ರ ಒಂದೇ ಕಡೆ ಇವೆ. ಇದರ ಚರ್ಮದಲ್ಲಿ ಶಲ್ಕಗಳಿಲ್ಲ. ಅಸಂಖ್ಯಾತ ಶಂಖಾಕೃತಿಯ ಗ್ರಂಥಿಗಳಷ್ಟೇ ಇವೆ

ಟರ್ಬಿಯಮ್

(ರ) ವಿರಳ ಭಸ್ಮ ಗುಂಪಿನ ಲೋಹೀಯ ಧಾತು. ಪ್ರತೀಕ Tb. ಪಸಂ ೬೫, ಸಾಪರಾ ೧೫೮.೯೨೫೪. ಸಾಸಾಂ ೮.೨೩ ದ್ರಬಿಂ ೧೩೫೬೦ ಸೆ. ಕುಬಿಂ ೩೨೩೦೦ ಸೆ

ಟರ್ಬೆಲೇರಿಯ

(ಪ್ರಾ) ಪ್ರಾಟಿಹೆಲ್ಮಿಂಥೀಸ್ ವಿಭಾಗಕ್ಕೆ ಸೇರಿದ ಪ್ರಾಣಿವರ್ಗ. ಅಡ್ಡಕೊಯ್ತದಲ್ಲಿ ಮಟ್ಟಸ, ಅಂಡಾಕಾರ / ವೃತ್ತಾಕಾರವಾಗಿ ಕಾಣುವ ಉದ್ದ ಒಡಲುಗಳಿವೆ

ಟರ್ಬೈನ್

(ತಂ) ಚಕ್ರದ ಅಲಗುಗಳನ್ನು ಉಗಿ, ವಾಯು, ಜಲ ಅಥವಾ ಇತರ ತರಲ ಪ್ರವಾಹ ಸಂಘಟ್ಟಿಸಿದಾಗ ಏಕಪ್ರಕಾರವಾಗಿ ಆವರ್ತಿಸುವ ದಂಡವುಳ್ಳ ಯಂತ್ರ ಸಾಧನ. ನೋಡಿ: ತಿರುಬಾನಿ

ಟರ್ಬೊಜೆಟ್

(ತಂ) ತಿರುಬಾನಿಯ ಬಳಕೆಯಿಂದ ಉತ್ಪಾದಿತವಾದ ಅನಿಲದ ಅಥವಾ ದ್ರವದ ಧಾರೆಗೂ ಅದರ ಉತ್ಪಾದಕ ಯಂತ್ರಕ್ಕೂ ಇರುವ ಹೆಸರು. ಹೆಚ್ಚು ರಭಸದಿಂದ ಚಲಿಸುವ ವಿಮಾನಗಳಲ್ಲಿ ವಿಶೇಷವಾಗಿ ಬಳಕೆ. ಅನಿಲ ಅಥವಾ ಇಂಧನ ತಿರುಬಾನಿಯನ್ನು ಉಪಯೋಗಿಸಿಕೊಂಡು ಕೆಲಸ ಮಾಡುವ ಅಂತರ್ದಹನ ಯಂತ್ರಕ್ಕೂ ಇದೇ ಹೆಸರುಂಟು

ಟರ್ಬೊಜೆಟ್ ಎಂಜಿನ್

(ತಂ) ಈ ಅಂತರ್ದಹನ ವಿಮಾನ ಎಂಜಿನ್ನಿನಲ್ಲಿ ತಿರುಬಾನಿ ಚಾಲಿತ ಸಂಪೀಡಕದಿಂದ (ಟರ್ಬೈನ್-ಡ್ರಿವನ್ ಕಂಪ್ರೆಸರ್) ಶಕ್ತಿಭರಿತವಾದ ಅನಿಲವು ಮೂತಿಯ (ಸೂಸುಬಾಯಿ) ಮೂಲಕ ಹೊರಕ್ಕೆ ಧಾವಿಸಿದಾಗ ವಿಮಾನಕ್ಕೆ ನೂಕುಬಲ ಉತ್ಪಾದಿತವಾಗುತ್ತದೆ

ಟರ್ಷಿಯರಿ

(ಭೂವಿ) ನವಜೀವಿ ಕಲ್ಪದ (ಮಧ್ಯಜೀವಿ ಕಲ್ಪದ ಕ್ರೆಟೇಷಿಯಸ್ ತರುವಾಯ ಮತ್ತು ಕ್ವಾಟರ್ನರಿಯ ಮೊದಲಿಗೆ) ಮೊದಲ ಅವಧಿ. ಸುಮಾರಾಗಿ ೬೫ ಮಿಲಿಯನ್ ವರ್ಷ ಪ್ರಾಚೀನದಿಂದ ೨ ಮಿಲಿಯನ್ ವರ್ಷ ಪ್ರಾಚೀನ ತನಕದ ಅವಧಿ. ಈ ಅವಧಿಯಲ್ಲಿ ರೂಪುಗೊಂಡ ಶಿಲಾ ಸಮೂಹಕ್ಕೂ ಇದೇ ಹೆಸರು. ಆಧುನಿಕ ಸ್ತನಿಗಳು ಮತ್ತು ಪೊದೆ ಸಸ್ಯಗಳೂ ಈ ಅವಧಿಯಲ್ಲಿ ಕ್ರಮೇಣ ಮೈದಳೆದುವು

ಟಾಕ್ಸಿನ್

(ಜೀ) ಆಹಾರ ಪದಾರ್ಥಗಳ ಮೇಲೆ ಅಥವಾ ಪ್ರಾಣಿ ದೇಹದ ಮೇಲೆ ಸಸ್ಯ, ಪ್ರಾಣಿ, ಅದರಲ್ಲೂ ಮುಖ್ಯವಾಗಿ ಬ್ಯಾಕ್ಟೀರಿಯಗಳು ವರ್ತಿಸುವುದರಿಂದ ಉತ್ಪತ್ತಿಯಾಗುವ ಯಾವುದೇ ವಿಷ. ಇಂಥ ವಿಷದಿಂದ ಬಾಧಿತವಾಗುವ ಪ್ರಾಣಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿವಿಷಕ್ಕೂ (ಆಂಟಿಟಾಕ್ಸಿನ್) ಟಾಕ್ಸಿನ್ ಎಂಬ ಹೆಸರಿದೆ. ಜೀವಿವಿಷ. ಜೀವಾಣುವಿಷ. ನಂಜು. ನೋಡಿ: ಎಂಡೋಟಾಕ್ಸಿನ್, ಬಹಿರ್ವಿಷ

ಟಾಕ್ಸೀಮಿಯಾ

(ವೈ) ನೋಡಿ: ರಕ್ತನಂಜು
< previous123456789Next >

Search Dictionaries

Loading Results

Follow Us :   
  Download Bharatavani App
  Bharatavani Windows App