भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತಂತು

(ಸ) ಪರಾಗಕೋಶಧಾರಿಯ ಕೇಸರಭಾಗ. (ಭೌ) ವಿದ್ಯುತ್ ಪ್ರವಾಹ ಹರಿದು, ಕಾದು, ಪ್ರಕಾಶ ಕೊಡುವ, ಕರಗದ, ವಿದ್ಯುದ್ದೀಪದ ಬುರುಡೆಯೊಳಗಿನ ವಿದ್ಯುದ್ವಾಹಕದಿಂದ ತಯಾರಿಸಿದ ತಂತಿ

ತಂತು

(ರ) ನೂಲಬಹುದಾದ, ನೇಯಬಹುದಾದ, ಹೆಣೆಯ ಬಹುದಾದ, ಜಡೆಗಟ್ಟಿಸಬಹುದಾದ ಸಸ್ಯಜನ್ಯ, ಪ್ರಾಣಿಜನ್ಯ ಇಲ್ಲವೇ ಸಂಶ್ಲೇಷಿತ ವಸ್ತು. ಇದರ ತಂತು ನವುರು, ನಮ್ಯ. ನಾರು, ಎಳೆ

ತಂತು

(ವೈ) ನೋಡಿ : ಧ್ವನಿತಂತು

ತಂತುಕ

(ವೈ) ಸ್ನಾಯು ತಂತುವಿನ ನೀಳ, ಸಂಕೋಚನ ಶೀಲ ಅಂಶಗಳಂಥ ಯಾವುದೇ ಸೂಕ್ಷ್ಮ ದಾರಸದೃಶ ರಚನೆ. ಸಣ್ಣ ನಾರು. ಸೂಕ್ಷ್ಮ ತಂತು

ತಂತುಕೋಶಿಕೆ

(ಪ್ರಾ) ಕೆಲವು ಹೈಡ್ರೊಜೋವಗಳಲ್ಲಿ ಇರುವ ಚುಚ್ಚುಕೊಂಡಿ. ಚುಚ್ಚುಕೊಂಡಿಯ ಆಶ್ರಯವಾದ ಅಥವಾ ಅದನ್ನು ರೂಪಿಸುವ ಒಂದು ಕೋಶ

ತಂತುಗಟ್ಟಿಕೆ

(ವೈ) ಗಾಯದ ಉರಿಯೂತದಿಂದಾಗಿ ಅಥವಾ ರಕ್ತಸಂಚಾರಕ್ಕೆ ಅಡ್ಡಿಯ ಪರಿಣಾಮವಾಗಿ ಜೀವಾಂಗದಲ್ಲಿ ಸಹಜಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಾರುನಾರಾದ ತಂತು ಬಂಧಕ ಊತಕಗಳು ಬೆಳೆಯುವುದು

ತಂತುಗಾಜು

(ತಂ) ಸುಮಾರು ೦.೨೫ ಮೈಕ್ರೊಮೀಟರ್ ವ್ಯಾಸದ ಗಾಜಿನ ತಂತುಗಳನ್ನು ಬಟ್ಟೆಗಳಿಗೆ ಹೆಣೆದು ಅವುಗಳೊಳಗೆ ರಾಳಗಳನ್ನು ತೂರಿದರೆ ಅಂಥ ಪದಾರ್ಥಗಳ ಭಾರ ಧಾರಣ ಸಾಮರ್ಥ್ಯ ಮತ್ತು ಜೀರ್ಣ ನಿರೋಧಕ ಗುಣವೃದ್ಧಿಯಾಗುತ್ತವೆ. ಅವುಗಳನ್ನು ಅಭೇದ್ಯ ಗಾಜಿನಂತೆ, ದೋಣಿ ನಿರ್ಮಾಣ, ಮೋಟಾರ್ ವಾಹನದ ಬಿಡಿಭಾಗ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ

ತಂತುಬಂಧಕ ಊತಕ

(ವೈ) ಬಿಳಿ ತಂತು ಕಟ್ಟುಗಳು ಇರುವ ಸಂಬಂಧಕ ಊತಕದ ಒಂದು ರೂಪ. ಹೆಚ್ಚಿನ ಸಂಖ್ಯೆಯಲ್ಲಿ ತಂತುಗಳಿರುವ ಯಾವುದೇ ಊತಕ

ತತ್ತ್ವ

(ಸಾ) ಸಾಮಾನ್ಯವಾಗಿ ಅನ್ವಯಿಸಬಹುದಾಗಿದ್ದು ಅಥವಾ ಮೂಲಭೂತವಾಗಿದ್ದು ಅದರಿಂದ ಇತರ ನಿಯಮ ಗಳನ್ನು ನಿಗಮಿಸಲು ಸಾಧ್ಯ ಮಾಡಿಕೊಡುವ ವೈಜ್ಞಾನಿಕ ನಿಯಮ

ತತ್ತ್ವಶಾಸ್ತ್ರ

(ಸಾ) ಅಸ್ತಿತ್ವ, ಜ್ಞಾನ, ಚಿಂತನೆ ಅಥವಾ ಜನ ಹೇಗೆ ಬಾಳಬೇಕು ಈ ವಿಚಾರ ಕುರಿತಂತೆ ಅಧ್ಯಯನ ಮತ್ತು ಊಹನೆ ಹಾಗೂ ಸಿದ್ಧಾಂತಗಳ ರೂಪಣೆ. ಈ ಕಾರಣದಿಂದಲೇ ತತ್ತ್ವಶಾಸ್ತ್ರವು ಸಕಲ ಜ್ಞಾನ ವಿಜ್ಞಾನಗಳ ತಾಯಿ ಎನ್ನುವುದುಂಟು. ಚಿಂತನೆ, ಊಹನೆ, ತರ್ಕ ಮೀಮಾಂಸೆ ಮುಂತಾದವು ತತ್ತ್ವಶಾಸ್ತ್ರದ ಪ್ರಮುಖ ಪರಿಕರಗಳು. ಇಲ್ಲಿ ಅಂತರ್ಬೋಧೆಗೆ ಮಹತ್ತ್ವದ ಪಾತ್ರವಿದೆ

ತಂತ್ರ

(ತಂ) ಯಾವುದೇ ಕಾರ್ಯವನ್ನು ಶಾಸ್ತ್ರೀಯವಾಗಿ ನಿರ್ವಹಿಸುವ ಕೌಶಲ. ಕಲಾತ್ಮಕ ಕೆಲಸ ಮೂಲದ ಯಾಂತ್ರಿಕ ವಿಧಾನ

ತಂತ್ರವಿದ್ಯೆ

(ತಂ) ಕೈಗಾರಿಕೋದ್ಯಮಗಳಲ್ಲಿ ವಿಜ್ಞಾನದ ಅನ್ವಯ. ಅನ್ವಿತ ವಿಜ್ಞಾನದಿಂದ ಉಪಯುಕ್ತ ವಸ್ತುಗಳ ಉತ್ಪಾದನೆ

ತಂತ್ರಾಂಶ

(ಕಂ) ಕ್ರಮವಿಧಿಯ (ಪ್ರೋಗ್ರಾಮ್) ಎಲ್ಲ ಬಗೆ ಗಳಿಗೂ ಸಂಬಂಧಿತ ದಾಖಲೀಕರಣಗಳಿಗೂ ಇರುವ ಒಟ್ಟು ಹೆಸರು. ಕಂಪ್ಯೂಟರ್‌ನ ಅತ್ಯಗತ್ಯ ಅಂಶ. ಸಾಫ್ಟ್‌ವೇರ್. ನೋಡಿ: ಯಂತ್ರಾಂಶ

ತತ್ಸಮಕಾರಿ ಧಾತು

(ಗ) ದ್ವಿಪರಿಕರ್ಮ * ಸಿಂಧು ವಾಗುವ ಗಣ Sನಲ್ಲಿ e ಎಂಬ ಒಂದು ಧಾತು. ಪ್ರತಿಯೊಂದು ಧಾತು aaSಗೆ, a*e = e*a = a ಆಗುವಂತೆ ಇದ್ದರೆ ಆಗ eಯನ್ನು ಪರಿಕರ್ಮ * ಕುರಿತಂತೆ S ಗಣದ ತತ್ಸಮಕಾರಿ ಎಂದು ಕರೆಯುತ್ತೇವೆ. ಉದಾ: ನೈಜ ಸಂಖ್ಯೆಗಳ ಗಣದಲ್ಲಿ ಸಂಕಲನ ಪರಿಕರ್ಮ ಕುರಿತಂತೆ ೦ ತತ್ಸಮಕಾರಿ ಧಾತು, ಗುಣಾಕಾರ ಕುರಿತಂತೆ ೧ ತತ್ಸಮಕಾರಿ ಧಾತು. ಐಕ್ಯಧಾತು, ಅಸ್ಮಿತ ಧಾತು

ತದ್ರೂಪಿ

(ಪ್ರಾ) ಅಬೀಜ ಸಂತಾನ. ಒಂದೇ ಜೀವಕೋಶ ಅಥವಾ ಜೀವಿಯಿಂದ ನೀಳಂಗ ರೀತಿಯಲ್ಲಿ ಪಡೆಯಬಹುದಾದ ಸಮರೂಪಿ. ಇದರ ಆನುವಂಶಿಕ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ (ಸ) ಕಣ್ಣು, ತುಳುಕು, ಕೊನೆ, ಗೆಡ್ಡೆ ಮೊದಲಾದವನ್ನು ನೆಟ್ಟು ಬೆಳೆಸುವ ಸಸ್ಯ ಜಾತಿ

ತನ್ಯತೆ

(ತಂ) ಪದಾರ್ಥವನ್ನು ಬಿರಿಯದಂತೆ ಎಳೆಗಳಾಗಿ ವಿಸ್ತರಿಸುವ ಗುಣ. ಉದಾ: ಚಿನ್ನ. ನೋಡಿ: ಪತ್ರಶೀಲತೆ

ತಪಾಸಣೆ

(ಸಾ) ಪರೀಕ್ಷೆ. ತಾಳೆ ನೋಡು, ಹತೋಟಿ

ತಂಬಾಕು ಮಚ್ಚೆ ವೈರಸ್

(ಸ) ತಂಬಾಕು ಮತ್ತಿತರ ಸೊಲನೇಸೀ ಸಸ್ಯಗಳಿಗೆ ತಗಲುವ ವೈರಸ್ ವ್ಯಾಧಿ. ಎಲೆಗಳ ಮೇಲೆ ಕಡು ಹಸುರು, ಕೆಲವೊಮ್ಮೆ ಹಳದಿ ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ

ತಯಜೋಲ್

(ರ) ನಿರ್ವರ್ಣ ಬಾಷ್ಪಶೀಲ ದ್ರವ. ಐದು ಸದಸ್ಯ ಪರಮಾಣುಗಳಿರುವ ಚಕ್ರೀಯ ಅಣು. ಸೂತ್ರ C3H3NS. ಪಿರಿಡೀನ್‌ನೊಂದಿಗೆ ನಿಕಟ ಹೋಲಿಕೆ. ಕುಬಿಂ ೧೧೭0ಸೆ. ಆಮ್ಲ ಗಳೊಂದಿಗೆ ವರ್ತಿಸಿ ಲವಣಗಳನ್ನು ನೀಡುತ್ತದೆ. ಆದರೆ ಇದರ ಮೇಲೆ ಸಾಂದ್ರೀಕೃತ ಸಲ್ಫ್ಯೂರಿಕ್ ಆಮ್ಲದ ಪ್ರಭಾವ ಎಷ್ಟೂ ಇರದು. ಇದರ ನಿಷ್ಪನ್ನಗಳು ವರ್ಣ ತಯಾರಿಕೆಯಲ್ಲೂ ಔಷಧಿಗಳಲ್ಲೂ ಬಳಕೆ

ತಯಾರಿಕೆ

(ರ) ತಕ್ಕ ವಿಧಾನಗಳಿಂದ, ನಿರ್ದಿಷ್ಟ ಕ್ರಮಗಳನ್ನನುಸರಿಸಿ ತಯಾರಿಸಿದ ರಾಸಾಯನಿಕ ಪದಾರ್ಥ

Search Dictionaries

Loading Results

Follow Us :   
  Download Bharatavani App
  Bharatavani Windows App