भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತಲೆಬುರುಡೆ

(ವೈ) ಮಿದುಳು ಮತ್ತು ಸಂವೇದನಾಂಗಗಳಿಗೆ ಆವರಣ ಹಾಗೂ ರಕ್ಷಣೆ ಯನ್ನೂ ದವಡೆಗಳಿಗೆ ಬೆಂಬಲವನ್ನೂ ನೀಡಿರುವ ಎಲುಬಿನ ಸಂಪುಟ. ನೋಡಿ: ಕಪಾಲ

ತಲೆಮಾರು ಅಂತರ

(ಸಾ) ಬೇರೆ ಬೇರೆ ತಲೆಮಾರುಗಳ ಜನರ ನಡುವೆ ಇರುವ ಅಭಿಪ್ರಾಯ ಭೇದ, ಒಡಂಬಡಿಕೆಯ ಕೊರತೆ

ತಲೆಸುತ್ತು

(ವೈ) ತಾನು ಗಿರಗಿರನೆ ತಿರುಗಿ ಬೀಳುವೆನೆಂಬ ಅಥವಾ ಸುತ್ತಲಿನ ವಸ್ತುಗಳು ತನ್ನ ಸುತ್ತ ಸುತ್ತುತ್ತಿವೆ ಎಂಬ ಭಾವನೆ ತರುವ ಕಾಯಿಲೆ

ತಲೆಹೊಟ್ಟು

(ವೈ) ನೆತ್ತಿಯಲ್ಲಿ ಅತಿಮೇದ ಸ್ರಾವದಿಂದ ಉಂಟಾಗುವ ಸತ್ತ ಚರ್ಮದ ಒಣಹೊಟ್ಟು. ಸ್ಯಾಲಿಸಿಲಿಕ್ ಆಮ್ಲ, ಪರಿಥಿಯೋನ್ ಜಿಂಕ್, ಸೆಲೆನಿಯಂ ಸಲ್ಫೈಡ್ ಇತ್ಯಾದಿ ಔಷಧಗಳು ತಕ್ಕಮಟ್ಟಿನ ಪರಿಹಾರ ನೀಡಬಲ್ಲವು. ಹುರುಪು. ಹಗರು

ತವರ

(ರ) ಲೋಹಧಾತು. ಪ್ರತೀಕ Sn (ಲ್ಯಾಟಿನ್‌ನ ಸ್ಟಾನಮ್ ನಿಂದ). ಪರಮಾಣು ತೂಕ ೧೧೮.೬೯. ಪಸಂ ೫೦. ಸಾಸಾಂ ೭.೩೧; ದ್ರಬಿಂ ೨೩೧.೮೫0 ಸೆ ಕುಬಿಂ. ೨೨೬೦0 ಸೆ. ಬೆಳ್ಳಿ ಬಿಳಿ ಬಣ್ಣದ ಮೃದು ಪತ್ರಶೀಲ ಮತ್ತು ತನ್ಯಶೀಲ ಲೋಹ. ರಾಂಬಿಕ್ ತವರ, ಬೂದು ತವರ ಇದರ ಭಿನ್ನ ರೂಪಗಳು. ಬಿಳಿ ತವರ ಬೂದು ರೂಪಕ್ಕೆ ತಿರುಗುವ ಸಂಕ್ರಮಣೋಷ್ಣತೆ ೧೩.೨0 ಸೆ. ಅಲ್ಪ ಪ್ರಮಾಣ ಆಂಟಿಮೊನಿ ಅಥವಾ ಬಿಸ್ಮತ್ ಸೇರಿಸಿದರೆ ಹೀಗಾಗದು. ಕಬ್ಬಿಣಕ್ಕೆ ಲೇಪಿಸುವಲ್ಲಿಯೂ ಮಿಶ್ರಲೋಹಗಳಲ್ಲಿಯೂ ಬಳಕೆ. ಕ್ಯಾಸಿಟರೈಟ್ ಇದರ ಪ್ರಮುಖ ಅದಿರು. ತವರಕ್ಕೆ ವಾಯು ಅಥವಾ ನೀರಿನಿಂದ ಸಾಧಾರಣ ಉಷ್ಣತೆಗಳಲ್ಲಿ ಬಾಧೆ ತಟ್ಟದು. ಕಂಚಿನ ತಯಾರಿಕೆ ಯಲ್ಲಿಯೂ ಲೋಹ ಬೆಸುಗೆಯಲ್ಲಿಯೂ ಪ್ರಮುಖ ಘಟಕ

ತಳ

(ಭೂವಿ) ಕಣಿವೆಯ ಅತ್ಯಂತ ಕೆಳಭಾಗ

ತಳ

(ಸಾ) ತಳಹದಿ. ಅಡಿ. ಪಾದ. ಆಧಾರ. ಆಸರೆ. ಮೂಲ ಅಸ್ತಿವಾರ. ಪಾಯ.

ತಳ ಕೋನಗಳು

(ಗ) ಜ್ಯಾಮಿತೀಯ ಆಕೃತಿಯ ತಳದ ಜೊತೆ ಪಕ್ಕದ ಭುಜಗಳು ಅಥವಾ ಫಲಕಗಳು ರಚಿಸುವ ಕೋನಗಳು

ತಳ ಮಟ್ಟ

(ಭೂವಿ) ಸವಕಳಿಯ ಕಾರಣವಾಗಿ ತಲಪುವ ತೀರ ಕೆಳಪದರ

ತಳರಚನೆ

(ಭೂವಿ) ಅವಸಾದನಗಳಿಂದ ಆವೃತವಾದ ಅಗ್ನಿ ಹಾಗೂ ರೂಪಾಂತರಿತ ಶಿಲೆಗಳ ಸಂಕೀರ್ಣ. ಭೂ ಮೇಲ್ಮೈಯಿಂದ ತೊಡಗಿ ಮೋಹೊರೊವಿಕ್ ಅವಿಚ್ಛಿನ್ನತೆವರೆಗೂ (ಸುಮಾರು ೮ ಕಿಮೀ ಆಳ) ವ್ಯಾಪಿಸಿರುವ ಚಿಪ್ಪು

ತಳಸೇರು

(ರ) ದ್ರವದಲ್ಲಿ ಘನಪದಾರ್ಥವು ಸಾಂದ್ರತೆಯ ವ್ಯತ್ಯಾಸದಿಂದಾಗಿಯೂ ಗುರುತ್ವಾಕರ್ಷಣೆಯ ಪರಿಣಾಮ ವಾಗಿಯೂ ತಳ ಸೇರುವುದು. ನೆಲಸು

ತಳಸ್ತರ

(ಭೂವಿ) ಕೆಳಭಾಗದಲ್ಲಿರುವ, ಸಾಮಾನ್ಯವಾಗಿ ಕಲ್ಲಿನ ಹಾಸು. ನದೀ ಪಾತ್ರ, ಪದರ, ಸ್ತರ, ಪ್ರಸ್ತರ

ತಳಹದಿ ಪೊರೆ

(ಜೀ) ಎಪಿಥೀಲಿಯಮ್ ಮತ್ತು ಅದರ ಕೆಳಗಿನ ಸಂಯೋಜಕ (ಯೋಜೀ) ಊತಕ ಇವೆರಡರ ನಡುವಿನ ಪೊರೆ. ಕೋಶಾಧಾರ ಪೊರೆ

ತಳಿ

(ಜೀ) ೧. ಯಾವುದೇ ಜೀವಿ ಪ್ರಭೇದದಲ್ಲಿ ಹಲವಾರು ಸದಸ್ಯಗಳು ಒಂದೇ ಗುಂಪಿಗೆ ಸೇರಿದವೆಂದು ಗುರುತಿಸಲು ಸಾಧ್ಯ ವಾಗುವ ವಿಶಿಷ್ಟ ಗುಣಲಕ್ಷಣಗಳ ಸಮುದಾಯ. ೨. ಒಂದೇ ರೀತಿಯ ಗುಣ ಲಕ್ಷಣ ಹಾಗೂ ಆಸಕ್ತಿಗಳನ್ನುಳ್ಳ ಮನುಷ್ಯರ ಅಥವಾ ವಸ್ತುಗಳ ಸಮುದಾಯ. ಸಂತತಿ

ತಳಿ ಎಂಜಿನಿಯರಿಂಗ್

(ಜೀ) ಜೀವಿ ಯೊಂದರ ಆನುವಂಶಿಕ ಲಕ್ಷಣಗಳನ್ನು ನಿರ್ಧರಿಸುವ ಜೀನ್‌ಗಳ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಅಪೇಕ್ಷಿತ ಜೀನ್‌ಗಳನ್ನು ಸೇರಿಸಿ/ಇನ್ಯಾವುದೇ ರೀತಿಯಲ್ಲಿ ಜೀನ್‌ಗಳನ್ನು ಬದಲಾಯಿಸಿ ಆ ಮೂಲಕ ಜೀವಿಯ ಆನುವಂಶಿಕತೆಯನ್ನು ಬದಲಾಯಿಸುವುದು

ತಳಿ ಪರಿವರ್ತಿತ ಜೀವಿ

(ಜೀ) ಜೀವಿಯೊಂದರ ಅಪೇಕ್ಷಿತ ಜೀನ್‌ಅನ್ನು ಮತ್ತೊಂದು ಜೀವಿಯಲ್ಲಿ/ಕೋಶದಲ್ಲಿ ಸೇರಿಸಿ ಮರು ಸಂಯೋಜಿಸಿದ ಜೀವಿ. ಕೃಷಿರಂಗದಲ್ಲಿ ಉತ್ಪಾದನೆ ಹೆಚ್ಚಿಸಲೂ ಹೈನುಗಾರಿಕೆಯಲ್ಲೂ ಇದರ ಬಳಕೆ ವ್ಯಾಪಕ

ತಳಿನಕ್ಷೆ

(ಜೀ) ವರ್ಣತಂತುಗಳಲ್ಲಿ ಜೀನ್‌ಗಳು ನಿರ್ದಿಷ್ಟವಾಗಿ ಜೋಡಣೆಯಾಗಿರುವುದನ್ನು ಕರಾರುವಾಕ್ಕಾಗಿ ಅರ್ಥೈಸುವ ವಿಧಾನ. ತಳಿತಂತ್ರಜ್ಞಾನದಲ್ಲಿ ನಿರ್ದಿಷ್ಟ ಜೀನ್‌ಗಳನ್ನು ಕತ್ತರಿಸಿ ತೆಗೆಯುವುದು ಸಾಧ್ಯ. ಮಾನವನ ತಳಿ ನಕ್ಷೆ ತಯಾರಿಸಿ ಆನುವಂಶಿಕ ಕಾಯಿಲೆಗಳನ್ನು ಗುರುತಿಸಬಹುದು. ಜೀನ್ ಚಿಕಿತ್ಸೆ ನಡೆಸಬಹುದು

ತಳಿವರ್ಧಕ ಗೂಳಿ

(ಪ್ರಾ) ದನಗಳಲ್ಲಿ ತಳಿ ಅಭಿವೃದ್ಧಿಯ ಸಲುವಾಗಿಯೇ ಸಾಕುವ ವಿಶೇಷ ಜಾತಿಯ ಗೂಳಿ

ತಳಿವರ್ಧನ ವಿಜ್ಞಾನ

(ಜೀ) ಸಸ್ಯಗಳನ್ನು, ಸಾಕು ಪ್ರಾಣಿಗಳನ್ನು, ಯಾವುವೇ ಜೀವಿ ಪ್ರಭೇದಗಳನ್ನು ವೈಜ್ಞಾನಿಕ ವಿಧಾನಗಳಿಂದ ಅಭಿವರ್ಧಿಸುವ ವಿಜ್ಞಾನ ವಿಭಾಗ

ತಳಿವಿಜ್ಞಾನ

(ವೈ) ಅತ್ಯಂತ ಸೂಕ್ಷ್ಮಜೀವಿಗಳಾದ ವೈರಸ್ ಗಳಿಂದ ಹಿಡಿದು ಮಾನವನವರೆಗಿನ ಜೀವಿಗಳಲ್ಲಿಯ ಆನುವಂಶಿಕ ಗುಣಗಳು ಯಾವುವು ಮತ್ತು ಆನುವಂಶಿಕತೆಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳು ಹೇಗೆ ಜರಗುತ್ತವೆ ಎಂಬುದನ್ನು ಚರ್ಚಿಸುವ ಜೀವ ವಿಜ್ಞಾನದ ಪ್ರಮುಖ ಶಾಖೆ. ಆನುವಂಶಿಕ ಗುಣಗಳು ಹೇಗೆ ಸಾಗಿ ಬರುತ್ತವೆ, ಆನುವಂಶಿಕತೆಯ ಮೂಲ ಘಟಕಗಳಾದ ಜೀನ್‌ಗಳು ಎಂದರೆ ಏನು? ಅವುಗಳಲ್ಲಿರುವ ರಾಸಾಯನಿಕ ವಸ್ತುಗಳು ಯಾವುವು ಎಂಬೆಲ್ಲ ವಿಚಾರಗಳನ್ನು ಸವಿಸ್ತಾರವಾಗಿ ಚರ್ಚಿಸುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App