भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತಾರ್ಕಣೆ ಮಾಡು

(ಸಾ) ಪರಸ್ಪರ ಹೊಂದಿಸು. ತಾಳೆ ಮಾಡು

ತಾರ್ಕಿಕ ಸಂಯೋಜಕಗಳು

(ಗ) ಎರಡು ಉಕ್ತಿ ಗಳನ್ನು ಸಂಯೋಜಿಸಲು ಬಳಸುವ ಪರಿಕರ್ಮಗಳು: “ಮತ್ತು”, “ಅಥವಾ”, “ಇಲ್ಲ (ಅಲ್ಲ)”, “ಆದರೆ”, “ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ (ಆಆಮಾ)” ಒಂದು ಅಥವಾ ಹೆಚ್ಚು ಸಂಯೋಜಕ ಗಳಿಂದ ಬಂಧಿತವಾಗಿರುವ ಉಕ್ತಿಗಳಿಗೆ “ಸಂಯುಕ್ತೋಕ್ತಿಗಳು” ಎಂದು ಹೆಸರು. ಪ್ರತೀಕಗಳಲ್ಲಿ: “ಮತ್ತು” “” “ಅಥವಾ” “, “ಇಲ್ಲ (ಅಲ್ಲ)” ~, “ಆದರೆ” “” “ಆದರೆ ಮತ್ತು ಆಗಿದ್ದರೆ ಮಾತ್ರ (ಆಆಮಾ) )”

ತಾಲವ ನರ

(ವೈ) ಅಂಗುಳಿಗೆ ಸಂಬಂಧಿಸಿದ ನರ

ತಾಲಿಡೊಮೈಡ್ ಶಿಶುಗಳು

(ವೈ) ಗರ್ಭಧಾರಣೆಯ ಪ್ರಾರಂಭದಲ್ಲಿ ಹೊಟ್ಟೆ ತೊಳಸುವುದು, ವಾಂತಿ ಮುಂತಾದ ಅದೂ ವಿಶೇಷವಾಗಿ ಎಳೆ ಬಸುರಿಯರಲ್ಲಿ ಕಂಡು ಬರುವ ಪೀಡನೆಗಳ ನಿವಾರಣೆಗಾಗಿ ಪಶ್ಚಿಮ ಜರ್ಮನಿಯಲ್ಲಿ ೧೯೫೯-೬೧ರಲ್ಲಿ ತಾಲಿಡೊಮೈಡ್ (C13H10N2O4) ಎಂಬ ಒಂದು ಶಾಮಕ ಮದ್ದು ವ್ಯಾಪಕವಾಗಿ ಬಳಕೆಯಲ್ಲಿ ಇದ್ದಿತು. ಇದು ಸಾಕಷ್ಟು ಹಾನಿಯುಂಟುಮಾಡಿತು. ಆಗ ಪಶ್ಚಿಮ ಜರ್ಮನಿಯಲ್ಲಿ ಹುಟ್ಟಿದ ಅಸಂಖ್ಯ ಶಿಶುಗಳು ಹುಟ್ಟಿನಿಂದಲೇ ಅಂಗವಿಕಲವಾಗಿದ್ದವು. ಅವು ಈ ಮದ್ದಿನ ಈ ದುಷ್ಪರಿಣಾಮದತ್ತ ಪ್ರಪಂಚದ ಲಕ್ಷ್ಯವನ್ನೇ ಸೆಳೆದುವು. ಈ ಶಿಶುಗಳನ್ನು ತಾಲಿಡೊಮೈಡ್ ಶಿಶುಗಳೆಂದೇ ಕರೆದದ್ದುಂಟು

ತಾಲು

(ಜೀ) ನೋಡಿ : ಅಂಗುಳು

ತಾಳು

(ಸ) ಕಸಿ ಸೇರಿಸುವ ಸಸ್ಯದ ಕಾಂಡ. ಪ್ರಜನನ ಅಥವಾ ಪ್ರಸರಣೆಗಾಗಿ ಸಂರಕ್ಷಿಸಿದ ತಳಿ. ಕಾಂಡ

ತಾಳೆಮರ

(ಸ) ಪಾಮೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಬೊರಾಸಸ್ ಫ್ಲಾಬೆಲಿಫರ್ ವೈಜ್ಞಾನಿಕ ನಾಮ. ತೆಂಗು, ಈಚಲು, ಅಡಿಕೆ ಮರಗಳ ಹತ್ತಿರ ಸಂಬಂಧಿ. ಹಣ್ಣಿಗೆ ತಾಟಿನುಂಗು ಎಂಬ ಹೆಸರಿದೆ. ಮರದಿಂದ ಹೆಂಡ ಇಳಿಸುತ್ತಾರೆ. ನಾರಿನಿಂದ ಬ್ರಷ್, ಬರಲುಗಳನ್ನೂ ಎಲೆಗಳಿಂದ ಛತ್ರಿ, ಬುಟ್ಟಿ, ಚಾಪೆಗಳನ್ನೂ ನೇಯುತ್ತಾರೆ. ಹೊಸದಾಗಿ ಇಳಿಸಿದ ನೀರಾದಿಂದ ಬೆಲ್ಲ ತಯಾರಿಸುತ್ತಾರೆ

ತಿಕ್ಸೊಟ್ರೊಪಿ

(ರ) ಕಾಲದೊಂದಿಗೆ ಸ್ನಿಗ್ಧತೆಯಲ್ಲಾಗುವ ವ್ಯತ್ಯಯದ ದರ. ನಿಶ್ಚಲ ಸ್ಥಿತಿಯಲ್ಲಿ ಕೆಲವು ದ್ರವಗಳ ಸ್ನಿಗ್ಧತೆ

ತಿಗಣೆ

(ಪ್ರಾ) ಸಿಮಿಸಿಡೀ ಕುಟುಂಬಕ್ಕೆ ಸೇರಿದ ಕೀಟ. ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಮನೆಗಳಲ್ಲಿ ಹಾಸಿಗೆ ಹೊದಿಕೆಗಳಲ್ಲಿ ಸೇರಿ ಮನುಷ್ಯರ ರಕ್ತ ಹೀರಿ ಜೀವಿಸುವ ಉಪದ್ರವಕಾರಕ ಕೀಟ

ತಿಂಗಳು

(ಖ) ವರ್ಷದ ಹನ್ನೆರಡು ವಿಭಾಗಗಳಲ್ಲೊಂದು. ಚಂದ್ರನಿಗೆ ಭೂಮಿಯ ಸುತ್ತ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ. ನೋಡಿ: ಚಾಂದ್ರಮಾಸ, ನಾಕ್ಷತ್ರಿಕ ಮಾಸ, ಪಾತಮಾಸ, ಸಾಯನ ಮಾಸ

ತಿದಿ

(ತಂ) ಬೆಂಕಿಯ ಉಷ್ಣತೆ ಏರಿಸಲೋಸುಗ ಅದರ ಮೇಲೆ ಸಾಂದ್ರೀಕೃತ ವಾಯುಧಾರೆ ಹರಿಸಲು ಬಳಸುವ ಸಾಧನ. ಏಣುಗಳಿಂದ ಕೂಡಿರುವ ಮತ್ತು ಪದರ ಪದರವಾಗಿ ಮಡಿಸ ಬಹುದಾದ ನಮ್ಯ ಚೀಲವಿದ್ದು ಇದನ್ನು ಎಳೆದಾಗ ಇದರೊಳಗೆ ತುಂಬುವ ಗಾಳಿ ಅಮುಕಿದಾಗ ಬೆಂಕಿಯತ್ತ ಏಕಧಾರೆಯಾಗಿ ಚಿಮ್ಮುತ್ತದೆ. ತಿತ್ತಿ. ಫುಪ್ಪುಸ

ತಿಮಿ ಎಣ್ಣೆ

(ರ) ತಿಮಿ ಮೇದಸ್ಸಿನಿಂದ ಪಡೆದ ಎಣ್ಣೆ. ದಹನಶೀಲ, ವಿಷರಹಿತ, ಆಲ್ಕಹಾಲಿನಲ್ಲಿ ದ್ರಾವ್ಯ, ಕಂದು ಹಳದಿ ಬಣ್ಣ. ಕೀಲೆಣ್ಣೆಯಾಗಿ ಉಪಯೋಗ

ತಿಮಿ ಮೇದಸ್ಸು

(ಪ್ರಾ) ತಿಮಿಂಗಿಲದಂಥ ಸಾಗರವಾಸಿ ಸ್ತನಿಗಳಲ್ಲಿ ನಿಜತ್ವಚೆಯನ್ನು ಆವರಿಸಿರುವ ಕೊಬ್ಬಿನ ಪದರ

ತಿಮಿಂಗಿಲ

(ಪ್ರಾ) ಸಿಟೇಸಿಯ ಗಣದ ಹಲವಾರು ಬಗೆಯ ಬೃಹತ್ ಗಾತ್ರದ ಸ್ತನಿಗಳ ಸಾಮಾನ್ಯ ನಾಮ. ಜಲವಾಸಿ. ಹೆಚ್ಚಾಗಿ ಸಾಗರ ವಾಸ. ಕೆಲವು ಬಗೆಯವು ಉಷ್ಣವಲಯದ ನದಿ, ಸರೋವರ ಗಳಲ್ಲೂ ಕಂಡುಬರುವುದುಂಟು. ಡಾಲ್ಫಿನ್ ಮತ್ತು ಪಾರ್ಪಾಯಿಸ್ ಇದೇ ಗಣಕ್ಕೆ ಸೇರಿದ ಅಲ್ಪ ಗಾತ್ರದ ಪ್ರಾಣಿಗಳು. ತಿಮಿಂಗಿಲಗಳ ಉದ್ದ ಸು. ೧.೩ ಮೀ.ನಿಂದ ಸು. ೨೩ ಮೀ. ವರೆಗೆ. ಸರಾಸರಿ ತೂಕ ೮೫ ಟನ್

ತಿಯೊಬ್ರೋಮಿನ್

(ರ) ಕೋಕೊ ಗಿಡದಲ್ಲಿ ಮುಖ್ಯವಾಗಿ ದೊರೆಯುವ ಆಲ್ಕಲಾಯಿಡ್. C7HPN4O2 ಚಾಕೊಲೇಟ್ ತಯಾರಿಕೆಯಲ್ಲಿ ಬಳಕೆ. ಬಿಳಿ ಸ್ಫಟಿಕೀಯ ಪುಡಿ. ಕಹಿರುಚಿ. ನೀರಿನಲ್ಲಿ ಆವಿಲೇಯ. ವೈದ್ಯಕೀಯವಾಗಿ ಒಂದು ಉತ್ತೇಜಕ ದ್ರವ್ಯ. C7H8N4O2 ತಿಯೊಫಿಲ್ಲಿನ್‌ನ ಸಮಾಂಗಿ. ಇವೆರಡೂ ಚಹಾದಲ್ಲುಂಟು. ವೈದ್ಯಕೀಯದಲ್ಲಿ ಬಳಕೆ

ತಿಯೋಡಲೈಟ್

(ತಂ) ಸುತ್ತ ತಿರುಗುವಂತೆ ತ್ರಿಪಾದಿ ನಿಲುವಿನ ಮೇಲೆ ಜೋಡಿಸಿದ ದೂರದರ್ಶಕದ ಮೂಲಕ ಕ್ಷಿತಿಜೀಯ ಕೋನಗಳನ್ನೂ ಲಂಬಕೋನಗಳನ್ನೂ ಅಳೆಯಲು ಮೋಜಣಿಯಲ್ಲಿ ಉಪಯೋಗಿಸುವ ಒಂದು ಸಲಕರಣೆ. ಅಂತರಕೋನ ಮಾಪಕ. ಕೋನ ದೂರದರ್ಶಕ

ತಿರುಗಣಿ ಕಿಟಕಿ

(ತಂ) ಗಾಜಿನ ಹಾಳೆಗಳಿದ್ದು ಕೀಲುಗಳ ಮೇಲೆ ತಿರುಗುವ ಕಿಟಕಿ ಚೌಕಟ್ಟು ಅಥವಾ ಅದರ ಭಾಗ

ತಿರುಚು

(ತಂ) ಭ್ರಾಮಕ ಇಲ್ಲವೇ ಬಲಯುಗ್ಮದ ಅನ್ವಯ ದಿಂದ ವಸ್ತುವಿನಲ್ಲಿ ಪ್ರಕಟವಾಗುವ ವಕ್ರವಿರೂಪಣೆ. ತಿರುಚುದಂಡ. ಇದು ಸ್ಪ್ರಿಂಗ್‌ನ ಒಂದು ರೂಪ. ಇದರ ಒಂದು ಕೊನೆಯನ್ನು ಭದ್ರ ಗೊಳಿಸಿ ಇನ್ನೊಂದು ಕೊನೆಗೆ ಭ್ರಾಮಕವನ್ನು ಅನ್ವಯಿಸಲಾಗುತ್ತದೆ. ಮೋಟರ್ ವಾಹನಗಳ ನಿಲಂಬನ ವ್ಯವಸ್ಥೆಗಳಲ್ಲಿ ತಿರುಚು ದಂಡಗಳ ಉಪಯೋಗವುಂಟು. (ವೈ) ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವನ್ನು ತಡೆಗಟ್ಟಲು ಧಮನಿಯ ಕತ್ತರಿಸಿದ ತುದಿಯನ್ನು ತಿರುಚುವುದು

ತಿರುಚು ತ್ರಾಸು

(ಭೌ) ಗುರುತ್ವ, ಕಾಂತತೆ ಅಥವಾ ವಿದ್ಯುತ್ ಆವೇಶಗಳ ಕಾರಣವಾಗಿ ಉಂಟಾಗುವ ಅತಿ ದುರ್ಬಲ ಬಲಗಳನ್ನು ಅಳೆಯಬಲ್ಲ ಸೂಕ್ಷ್ಮಸಾಧನ. ಕ್ಷಿತಿಜೀಯ ಸರಳೊಂದನ್ನು ಊರ್ಧ್ವತಂತಿ ಇಲ್ಲವೇ ತಂತುವಿನ ಕೊನೆಯಿಂದ ತೂಗು ಬಿಟ್ಟಿರಲಾಗುತ್ತದೆ. ಅಳೆಯಬೇಕಾದ ಬಲವನ್ನು ಸರಳಿನ ಒಂದು ಕೊನೆಯ ಮೇಲೆ ಪ್ರಯೋಗಿಸಲಾಗುವುದು. ಆಗ ತಿರುಚಿದ ಸರಳು ಸಮತೋಲ ಸಾಧಿಸಲು ತುಸು ವಿಚಲಿತವಾಗುತ್ತದೆ. ಸರಳಿಗೆ ಲಗತ್ತಿಸಿದ ಒಂದು ಸಣ್ಣ ಕನ್ನಡಿ, ಒಂದು ದೀಪ ಹಾಗೂ ಅಳತೆ ಪಟ್ಟಿಯ ಸಹಾಯದಿಂದ ಕನ್ನಡಿಯಲ್ಲಿ ಪ್ರತಿಫಲಿತವಾದ ವಿಚಲನೆಯನ್ನು ಅಳೆದು ದುರ್ಬಲ ಬಲದ ಪ್ರಮಾಣವನ್ನು ನಿರ್ಧರಿಸ ಲಾಗುವುದು. ಹೆನ್ರಿ ಕ್ಯಾವೆಂಡಿಷ್ (೧೭೩೧-೧೮೧೦) ಅನಂತರ ಚಾರ್ಲ್ಸ್ ಬಾಯ್ಸ್ (೧೮೫೫-೧೯೪೪) ಈ ತಂತ್ರ ಬಳಸಿ ಗುರುತ್ವ ಸ್ಥಿರಾಂಕ ನಿರ್ಧರಿಸಿದರು

ತಿರುಚು ನಿವಾರಣೆ

(ವೈ) ಕೆಲವು ಸಂದರ್ಭಗಳಲ್ಲಿ ಕೆಲವು ಅಂಗಗಳು ತಿರುಚಿಕೊಂಡು ತುರ್ತುಪರಿಸ್ಥಿತಿಯನ್ನು ಉಂಟು ಮಾಡಬಹುದು. ಉದಾ: ಮೂತ್ರವಾಹಕ ನಾಳ ತಿರುಚಿಕೊಳ್ಳುವುದು. ಇದನ್ನು ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು

Search Dictionaries

Loading Results

Follow Us :   
  Download Bharatavani App
  Bharatavani Windows App