भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತಿರುಚುಮುರುಚುತನ

(ಭೂವಿ) ನದೀ ಪಾತ್ರದ ಮಧ್ಯರೇಖೆಯಲ್ಲಿ ಅಳೆದಂತೆ ದೊರೆಯುವ ನದಿಯ ವಾಸ್ತವ ದೀರ್ಘತೆ ಮತ್ತು ಆ ನದಿಯ ಅಕ್ಷೀಯ ದೀರ್ಘತೆ ಇವೆರಡರ ನಡುವಿನ ನಿಷ್ಪತ್ತಿ. ವಕ್ರತೆ

ತಿರುಪು ಕೊಂಡಿ

(ತಂ) ನೋಡಿ: ಸ್ವಿವೆಲ್

ತಿರುಪು ಪಟ್ಟಿ

(ಪ್ರಾ) ನೋಡಿ: ಟೂರ್ನಿಕೆ

ತಿರುಬಾನಿ

(ತಂ) ಬೀಳುತ್ತಿರುವ ಜಲಧಾರೆಯು ಆವರ್ತನ ಶೀಲ ಚಕ್ರದ ಅಲಗುಗಳಿಗೆ ಬಡಿದಾಗ ಚಕ್ರ ಆವರ್ತಿಸಿ ವಿದ್ಯುತ್ತನ್ನು ಉತ್ಪಾದಿಸುವ ಎಂಜಿನ್ನನ್ನು ಚಾಲೂಗೊಳಿಸುವ ಯಂತ್ರಸಾಧನ. ಬಳಸುವ ತರಲದ ಬಗೆಗಳನ್ನನುಸರಿಸಿ ಅನಿಲ ತಿರುಬಾನಿ, ಜಲ ತಿರುಬಾನಿ ಹಾಗೂ ಉಗಿ ತಿರುಬಾನಿ ಗಳೆಂದು ಮೂರು ವಿಧಗಳುಂಟು. ಉಗಿ ಹಾಗೂ ಜಲ ತಿರುಬಾನಿಗಳ ಸಹಾಯದಿಂದ ಜಗತ್ತಿನ ಶೇ. ೯೫ರಷ್ಟು ವಿದ್ಯುದುತ್ಪಾದನೆ (ಟರ್ಬೊ ಜನರೇಟರ್‌ಗಳ ರೂಪದಲ್ಲಿ) ಆಗುತ್ತಿದೆ. ಅನಿಲ ತಿರುಬಾನಿಗಳು ಜಗತ್ತಿನ ಎಲ್ಲ ಜೆಟ್-ನೋದಿತ ವಿಮಾನಗಳಿಗೆ ಶಕ್ತಿ ಒದಗಿಸುತ್ತವೆ. ಟರ್ಬೈನ್

ತಿರುವುಮುರುವು

(ಭೂವಿ) ಹೊಳೆ, ನದಿ ಮುಂತಾದ ಹರಿವ ನೀರಿನ ಮಾರ್ಗದಲ್ಲುಂಟಾದ ತೀವ್ರ ಅಂಕುಡೊಂಕು, ಅದರಲ್ಲೂ ಅದು ತುಂಬಿ ಹರಿಯುತ್ತಿರುವಂಥ ಭಾಗದಲ್ಲಿ. ನದಿ ಮಾರ್ಗದ ಉಬ್ಬು ಭಾಗಗಳು ನಿರಂತರ ಸವೆತ, ತಗ್ಗು ಭಾಗಗಳಲ್ಲಿ ನಿಕ್ಷೇಪಗಳ ನಿರಂತರ ಸಂಚಯನ, ಈ ಅಂಕುಡೊಂಕುಗಳ ವಿಸ್ತಾರವನ್ನು ಹಿಗ್ಗಿಸುತ್ತವೆ. ಡೊಂಕು

ತಿರುಳು

(ಸ) ತೆಂಗಿನಕಾಯಿ ಚಿಪ್ಪಿನ ಒಳಗಿನ ಭಾಗ ಹಾಗೂ ಹಣ್ಣಿನೊಳಗೆ ಓಟೆಯ ಸುತ್ತ ಇರುವ ಮೆತು ಭಾಗ

ತಿರುಳು

(ತಂ) ಚೌಬೀನೆಯನ್ನು ಯಾಂತ್ರಿಕ ಅಥವಾ ರಾಸಾಯನಿಕ ಕ್ರಿಯೆಗೆ ಒಳಪಡಿಸಿದ ನಂತರ ರೂಪಿತವಾಗುವ ವಸ್ತು. ಕಾಗದದ ತಯಾರಿಕೆಗೆ ಉಪಯುಕ್ತ. ಮಜ್ಜೆ

ತಿಲಾಸ್ಥಿ

(ಪ್ರಾ) ಸಾಮಾನ್ಯವಾಗಿ ಮಂಡಿಚಿಪ್ಪಿನಂಥ ಕೀಲಿನಲ್ಲಿ ಅಥವಾ ಅದರ ಬಳಿಯಲ್ಲಿ ಸ್ನಾಯು-ಅಂಶವಾಗಿರುವ ದುಂಡಗಿನ ಸಣ್ಣ ಎಳ್ಳಿನಾಕಾರದ ಮೂಳೆ. ಸೆಸಮಾಯ್ಡ್

ತೀಕೊಡಾಂಟ್

(ಪ್ರಾ) ತಿಕೊಡಾಂಷಿಯ ಗಣಕ್ಕೆ ಸೇರಿದ, ಟ್ರಿಯಾಸಿಕ್ ಯುಗದಲ್ಲಿ ಜೀವಿಸಿದ್ದ ಆರ್ಕೊಸಾರಿಯನ್ ಸರೀಸೃಪ. ದವಡೆಯ ಕುಳಿಗಳಲ್ಲಿ ದಂತ ಹುದುಗಿದ್ದುದು ಇದರ ವೈಶಿಷ್ಟ್ಯವಿದ್ದಿತು

ತೀಕ್ಷ್ಣ

(ಸ) ಚೂಪು ಮೊನೆಯ, ತೀಕ್ಷ್ಣಾಗ್ರ ಮುಳ್ಳು

ತೀಟ ಫಲನಗಳು

(ಗ) ರೀಮಾನ್ ತಲಗಳ, ಎಲಿಪ್ಟಿಕ್ ಫಲನಗಳ ಮತ್ತು ಎಲಿಪ್ಟಿಕ್ ಅನುಕಲಗಳ ಅಧ್ಯಯನದಲ್ಲಿ ಬಳಸುವ ಸಂಕೀರ್ಣ ಫಲನಗಳು

ತೀನರ್

(ಪ್ರಾ) ಅಂಗೈಯ ಅಥವಾ ಅಂಗಾಲಿನ ಹೆಬ್ಬೆರಳಿನ ಬುಡದಲ್ಲಿ ಉಬ್ಬಿರುವ ಮಾಂಸ ಭಾಗ

ತೀರಾವಳಿ

(ಭೂ) ಕಡಲಿನಲ್ಲಿ ಪೂರ್ಣ ಭರತ ಹಾಗೂ ಇಳಿತ ಸಾಲುಗಳ ನಡುವಿನ ಪ್ರದೇಶ. ಸರೋವರಗಳಲ್ಲಿ ಆಳವಿಲ್ಲದ ನೀರಿನ ಪ್ರದೇಶ. ಇಲ್ಲಿ ಬೆಳಕು ತಳದವರೆಗೂ ಹೋಗಬಲ್ಲುದು ಹಾಗೂ ಬೇರು ಸಸ್ಯಗಳು ಬೆಳೆಯಬಲ್ಲವು. ಸಾಗರದ ಸುಮಾರು ೨೦೦ ಮೀಟರ್ ಆಳದ ಸ್ತರ. ಲಿಟೋರಲ್

ತೀವ್ರ

(ವೈ) ಅತಿಕ್ಷಿಪ್ರವಾಗಿ ಉಲ್ಬಣಿಸುವ ರೋಗ ಸ್ಥಿತಿ. ದೀರ್ಘಕಾಲಿಕಕ್ಕೆ ವಿರುದ್ಧವಾದುದು

ತೀವ್ರತೆ

(ಭೌ) ೧. ವಿದ್ಯುತ್ ಕ್ಷೇತ್ರ, ಕಾಂತೀಕರಣ, ವಿಕಿರಣ ಅಥವಾ ವಿಕಿರಣಪಟುತ್ವದಂಥ ಪರಿಮಾಣವೊಂದರ ವಿಶಿಷ್ಟತೆಯಾಗಿ ಕಾಣಿಸಿಕೊಳ್ಳುವ ಬಲ ಅಥವಾ ಇತರ ಗುಣ. ೨. ಬೆಳಕಿನ ಅಥವಾ ಶಬ್ದದ ಅಲೆಗೆ ಲಂಬವಾದ ಕ್ಷೇತ್ರದ ಏಕಮಾನಕ್ಕೆ ಸಂಬಂಧಿಸಿದಂತೆ ಅಲೆಯ ಪ್ರೇಷಿತ ಶಕ್ತಿ

ತೀಸಿಯಮ್

(ಸ) ಡಿಸ್ಕೊಮೈಸೆಟಸ್ ಶಿಲೀಂಧ್ರಗಳಲ್ಲೂ ಶಿಲಾವಲ್ಕಗಳಲ್ಲೂ ಅಪೊಥೀಸಿಯಮ್ ಎಂಬ ಜನನಾಂಗದಲ್ಲಿ ಕಂಡುಬರುವ ಫಲವತ್ತಾದ ಭಾಗ

ತುಕ್ಕು

(ರ) ಕಬ್ಬಿಣದ ಹೈಡ್ರೇಟೆಡ್ ಆಕ್ಸೈಡ್, ಪ್ರಧಾನವಾಗಿ Fe2O3.H2O ಕಬ್ಬಿಣವನ್ನು ತೇವಕ್ಕೆ ಅಥವಾ ಗಾಳಿಗೆ ಒಡ್ಡಿದಾಗ ಅದರ ಮೈಮೇಲೆ ಕಲೆಗಳೊಂದಿಗೆ ರೂಪುಗೊಳ್ಳುವ ಉತ್ಕರ್ಷಣ ಕ್ರಿಯೆ. ನೀರು ಹಾಗೂ ಆಕ್ಸಿಜನ್ ಇದ್ದಾಗಲಷ್ಟೆ ಈ ಕ್ರಿಯೆ ಜರಗುತ್ತದೆ

ತುಕ್ಕುರೋಗ

(ಸ) ಸಸ್ಯಗಳ ಕಾಂಡ ಹಾಗೂ ಎಲೆಗಳ ಮೇಲೆ ತುಕ್ಕು ಬಣ್ಣದ ಕಲೆಗಳನ್ನು ಉಂಟುಮಾಡುವ ಯುರೆಡಿನೇಲಿಸ್ ಗುಂಪಿನ ಹಲವು ಬಗೆಯ ಶಿಲೀಂಧ್ರಗಳಿಂದಾಗುವ ರೋಗ

ತುಕ್ಕುಹಿಡಿ

(ರ) ಇದೊಂದು ವಿದ್ಯುತ್ ರಾಸಾಯನಿಕ ಪ್ರಕ್ರಿಯೆ. ಇದರಲ್ಲಿ ಕಬ್ಬಿಣದ ಮೇಲ್ಮೈಯ ವಿವಿಧ ಭಾಗಗಳು ವಿದ್ಯುತ್ಕೋಶದಲ್ಲಿಯ ಎಲೆಕ್ಟ್ರೋಡ್‌ಗಳಂತೆ ವರ್ತಿಸುತ್ತವೆ. ಆನೋಡ್‌ನಲ್ಲಿ ಕಬ್ಬಿಣದ ಪರಮಾಣುಗಳು Fe2+ ಅಯಾನ್‌ಗಳಾಗಿ ನಿಕ್ಷೇಪಿಸುತ್ತವೆ. ಕ್ಯಾಥೋಡ್‌ನಲ್ಲಿ ಹೈಡ್ರಾಕ್ಸೈಡ್ ಅಯಾನ್‌ಗಳು ರೂಪುಗೊಳ್ಳುತ್ತವೆ. ಕಬ್ಬಿಣದಲ್ಲಿ ಕಲ್ಮಷಗಳು ಇದ್ದಾಗ ಮತ್ತು ನೀರಿನಲ್ಲಿ ಆಮ್ಲಗಳಾಗಲೀ ಇತರ ಎಲೆಕ್ಟ್ರೊಲೈಟ್‌ಗಳಾಗಲೀ ಇದ್ದಾಗ ತುಕ್ಕು ಹಿಡಿಯುವ ಕ್ರಿಯೆ ಹೆಚ್ಚು ಶೀಘ್ರಗತಿಯಲ್ಲಿ ಜರಗುತ್ತದೆ

ತುಂಗೆಗೆಡ್ಡೆ, ತುಂಬೆ ಹುಲ್ಲು

(ಸ) ನೋಡಿ: ಕೊನ್ನಾರಿಗೆಡ್ಡೆ

Search Dictionaries

Loading Results

Follow Us :   
  Download Bharatavani App
  Bharatavani Windows App