भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತುಟಿ

(ವೈ) ದಪ್ಪ ಮಡಿಕೆಯಂತೆ ಬಾಯಿಯ ಸುತ್ತಲೂ ಇದ್ದು ಬಾಯಿ ತೆರೆದಾಗ ಇಲ್ಲವೇ ಮುಚ್ಚಿದಾಗ ಅದಕ್ಕೆ ಮೇಲೆ ಕೆಳಗೆ ಎರಡು ಅಂಚುಗಳಾಗಿ ಕಾಣಿಸಿಕೊಳ್ಳುವ ಅಂಗ. ಮೇಲ್ತುಟಿ ಓಷ್ಠ. ಕೆಳತುಟಿ ಅಧರ. ಇದರಲ್ಲಿ ಸ್ನಾಯು, ಮೇದಸ್ಸು, ನೂರಾರು ಅತಿ ಸಣ್ಣ ಲಾಲಾಗ್ರಂಥಿಗಳು ಹೊರಗೆ ಚರ್ಮದಿಂದಲೂ ಒಳಗೆ ಲೋಳೆ ಪೊರೆಯಿಂದಲೂ ಆಚ್ಛಾದಿತವಾಗಿ ಇರುತ್ತವೆ. ವರ್ಣೋಚ್ಚಾರಣೆಗೆ ತುಟಿ ಚಲನೆ ಅಗತ್ಯ. ಆಹಾರವನ್ನು ಹಲ್ಲುಗಳು ಅಗಿಯುವಂತೆ ಮಾಡುವುದರಲ್ಲೂ ತುಟಿ ಸಹಕಾರಿ

ತುಂಡುಮಾಡು

(ವೈ) ಮಾಂಸಖಂಡವನ್ನು ಅಥವಾ ಅಂಗಾಂಶವನ್ನು ಸಿಗಿದು ಗಾಯ ಮಾಡುವುದು. ಸಿಗಿ

ತುಣುಕು

(ತಂ) ಯಾವುದೇ ವಸ್ತುವಿನ ಮುರಿದ ಚೂರು. (ಸ) ಕ್ರೋಮೊಸೋಮ್‌ನಿಂದ ತೆಗೆದ ಒಂದು ತುಂಡು. (ಭೂವಿ) ಭಂಗಗೊಂಡ ಸಾಮಗ್ರಿಯ ತುಂಡುಗಳಿಂದ ರಚಿತವಾದ ಶಿಲೆ

ತುಂತುರು ನೀರಾವರಿ

(ತಂ) ನೀರನ್ನು ಕಂಬಿಯ ಚಿಕ್ಕ ರಂಧ್ರಗಳ ಮೂಲಕ ರಭಸದಿಂದ ಹೊರ ಹೊಮ್ಮಿಸಿ ಬೆಳೆಗಳ ಮೇಲೆ ಹನಿಹನಿಯಾಗಿ ಬೀಳುವಂತೆ ಮಾಡುವ ನೀರಾವರಿ ವಿಧಾನ. ಸೋನೆ ನೀರಾವರಿ. ನೋಡಿ: ಹನಿ ನೀರಾವರಿ

ತುಪ್ಪಳ

(ಪ್ರಾ) ಚತುಷ್ಪಾದಿಯ ಕೂದಲು, ಉಣ್ಣೆ ಮೊದಲಾದವು

ತುಪ್ಪಳ

(ಪ್ರಾ) ಸ್ತನಿಗಳಲ್ಲಿ ನಯವಾದ ಮೋಟು ಮೆತುಗೂದಲು

ತುಪ್ಪಳದ ಸೀಲ್

(ಪ್ರಾ) ಪಿನಿಪೀಡಿಯ ಗಣ, ಓಟರೈಯಿಡೀ ಕುಟುಂಬಕ್ಕೆ ಸೇರಿದ ಸಾಗರ ವಾಸಿ ಸ್ತನಿ. ಕ್ಯಾಲೊರೈನಸ್ ಅರ್ಸಿನಸ್ ವೈಜ್ಞಾನಿಕ ನಾಮ. ಬೇರಿಂಗ್ ಸಮುದ್ರದ ಪ್ರಿಬಿಲಾಫ್ ದ್ವೀಪಗಳು, ಕಮ್ಯಾಂಡರ್ ದ್ವೀಪಗಳು, ರಷ್ಯದ ಒಕಾತ್‌ಸ್ಕ್ ಸಮುದ್ರ ಹಾಗೂ ಕುರೈಲ್ ದ್ವೀಪಗಳಲ್ಲಿ ವಾಸ

ತುಫಾನು

(ಪವಿ) ಪಶ್ಚಿಮ ಹಾಗೂ ಉತ್ತರ ಪೆಸಿಫಿಕ್ ಸಾಗರದಲ್ಲೂ ಚೀನ ಸಮುದ್ರದಲ್ಲೂ ಮುಖ್ಯವಾಗಿ ಜುಲೈನಿಂದ ಅಕ್ಟೋಬರ್‌ತನಕ ಬೀಸುವ ಚಂಡಮಾರುತ. ಟೈಫೂನ್

ತುರುಚಿ ದದ್ದು

(ವೈ) ಅಲರ್ಜಿಯ ಪರಿಣಾಮವಾಗಿ ಉಂಟಾಗುವ ನವೆಯಿಂದ ಕೂಡಿದ, ತುರುಚಿ ಮುಳ್ಳಿನಿಂದ ಆಗುವಂಥ ಬೊಕ್ಕೆಗಳು

ತುಲನಕಾರಿ

(ಭೌ) ಶಿಷ್ಟ ಉದ್ದವನ್ನು ನಿಖರವಾಗಿ ಹೋಲಿಸಲು ಬಳಸುವ ಸಾಧನ. ಲೋಹದಂಡಗಳ ವ್ಯಾಕೋಚನ ಸಹಾಂಕಗಳನ್ನು ಅಳೆಯಲೂ ಇದರ ಬಳಕೆ ಉಂಟು. ಇದು ದ್ರಾವಣದ ಬಣ್ಣವನ್ನು ಅಳೆದು ರಾಸಾಯನಿಕ ವಿಶ್ಲೇಷಣೆ ಮಾಡುವ ಒಂದು ರೀತಿಯ ಕಲರಿಮೀಟರ್ (ವರ್ಣಮಾಪಕ) ಕೂಡ. (ಕಂ) ಎರಡು ಸಂಖ್ಯೆಗಳ ಪ್ರಮಾಣಗಳನ್ನು ಹೋಲಿಸುವ ಮಂಡಲ

ತುಲಾ

(ತಂ) ಗಡಿಯಾರದಲ್ಲಿ ಕಂಪಿಸುತ್ತಿರುವ ಭಾಗ. ಗತಿ ನಿಯಂತ್ರಕ. ಹೇರ್‌ಸ್ಪ್ರಿಂಗ್‌ನೊಂದಿಗೆ ಜೊತೆಗೂಡಿ ಇದು ಕಾಲ ನಿಯಂತ್ರಕ ಸಾಧನವಾಗುತ್ತದೆ

ತುಲಾ ದಂಡ

(ತಂ) ಗಡಿಯಾರದಲ್ಲಿ ತುಲಾ ಚಕ್ರ ಧರಿಸಿರುವ, ತುಲಾ ಸ್ಪ್ರಿಂಗ್ ಲಗತ್ತಾಗಿರುವ ನವುರು ಸರಳು

ತುಲಾ ಸ್ಪ್ರಿಂಗ್

(ತಂ) ಲೋಹದ ಬಲು ನವುರು ಎಳೆಯಿಂದ ತಯಾರಿಸಿದ ಸ್ಪ್ರಿಂಗ್. ಸಿಂಬೆ, ಸಿಲಿಂಡರ್ ಇಲ್ಲವೇ ಕುಂಡಲಿನಿ ಆಕಾರ. ತುಲಾ ದಂಡವನ್ನು ಸುತ್ತುವರಿದಿದ್ದು ಅದರ ಚಲನೆಯನ್ನು ನಿಯಂತ್ರಿಸುತ್ತದೆ

ತುಲಾಚಕ್ರ

(ತಂ) ಚಕ್ರ ರೂಪದಲ್ಲಿರುವ ತುಲಾ. ಇದಕ್ಕೆ ಸುರುಳಿ ಆಕಾರದ ಮತ್ತು ಬಲು ನವುರಾದ ಹೇರ್ ಸ್ಪ್ರಿಂಗ್‌ಅನ್ನು ಲಗತ್ತಿಸಲಾಗಿರುತ್ತದೆ

ತೂಕ

(ಭೌ) ವಸ್ತುವಿನ ರಾಶಿ ಮತ್ತು ಭೂಕೇಂದ್ರದಿಂದ ಅದರ ದೂರ ಅವಲಂಬಿಸಿ ಅದರ ಮೇಲೆ ವರ್ತಿಸುವ ಭೂಮ್ಯಾ ಕರ್ಷಣ ಬಲ. ರಾಶಿ m, ಗುರುತ್ವ g, ಆಗಿದ್ದರೆ, ತೂಕ w = mg

ತೂಕರಾಹಿತ್ಯ

(ಭೌ) ಗುರುತ್ವ ಅಥವಾ ಇತರ ಬಲಗಳನ್ನು ಅನುಭವಿಸದ ಸ್ಥಿತಿ. (ಉದಾ: ಅಂತರಿಕ್ಷ ನೌಕೆ ಯಲ್ಲಿ- ಭೂಮಿಯ ಗುರುತ್ವಾಕರ್ಷಣ ಶಕ್ತಿಯು ನೌಕೆಯ ಕಕ್ಷಾ ಚಲನೆಗೆ ಅವಶ್ಯವಾದ ಕೇಂದ್ರಾಭಿಗಾಮಿ ಶಕ್ತಿಗೆ ಸಮವಾಗಿದ್ದು ಮುಕ್ತಪತನ ಸ್ಥಿತಿ ಏರ್ಪಟ್ಟಿರುತ್ತದೆ). ಪ್ರತಿರೋಧವಿಲ್ಲದೆ ಮುಕ್ತವಾಗಿ ಬೀಳುವ ಒಂದು ವಸ್ತುವಿನ ಸ್ಥಿತಿ. ಶೂನ್ಯ ಗುರುತ್ವ

ತೂಗು

(ತಂ) ಯಾವುದೇ ಯಂತ್ರವಾಹನದ ಚಲಿಸುವ ಭಾಗಗಳಿಗೆ ಆಧಾರವಾದ ಸುರುಳಿ ಸುತ್ತಿದ ಸ್ಪ್ರಿಂಗ್

ತೂಗು ಗುಂಡು

(ತಂ) ಸರಳಿನ/ದಾರದ ಕೊನೆಯಲ್ಲಿ ತೂಗುತ್ತಿರುವ ಭಾರವಸ್ತು. ಲೋಲಕ ಗುಂಡು

ತೂಗು ತೊಂಗಲು

(ಭೂವಿ) ಸುಣ್ಣಕಲ್ಲಿನ ಗುಹೆಯಲ್ಲಿ ಮೈದಳೆಯುವ ಅಧೋಮುಖಿ ಹನಿಕಲ್ಲು. ಚಾವಣಿಯಿಂದ ಕೆಳಕ್ಕೆ ಸೋರುವ ಸುಣ್ಣ ಮಿಶ್ರಿತ ನೀರು ಹೆಪ್ಪುಗಟ್ಟಿ ಈ ಕೆಳ ಚಾಚಿಕೆ ಉಂಟಾಗುವುದು. ನೋಡಿ: ನೆಲತೊಂಗಲು

ತೂಗು ಮಂಜರಿ

(ಸ) ವಿಲೋ, ಹ್ಯಾಸಲ್ ಮೊದಲಾದ ಸಸ್ಯಗಳಲ್ಲಿ ಕಂಡು ಬರುವ, ದಳವಿಲ್ಲದ, ಏಕಲಿಂಗಿ ಪುಷ್ಪಗಳ, ಮೃದುವಾದ ಅಥವಾ ರೇಷ್ಮೆಯಂತಿರುವ ಮತ್ತು ನೇತು ಬಿದ್ದಿರುವ ಒತ್ತಿದ ಗೊಂಚಲು. ಗೊಂಚಲು ಹೂವು

Search Dictionaries

Loading Results

Follow Us :   
  Download Bharatavani App
  Bharatavani Windows App