भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous12345678Next >

ಫಂಡಸ್

(ವೈ) ೧. ನೇತ್ರದರ್ಶಕ ಬಳಸಿ ಪಾಪೆಯ ಮೂಲಕ ಕಾಣಬಹುದಾದ ಕಣ್ಣುಗುಡ್ಡೆಯ ಪೊಳ್ಳುಭಾಗ. ೨. ಹೊಟ್ಟೆಯ ಅಥವಾ ಯಾವುದೇ ಟೊಳ್ಳಾದ ಅಂಗದ ಅತ್ಯಂತ ತಳಭಾಗ

ಫಣಿ

(ವೈ) ಚರ್ಮದ ಅಡಿಯಲ್ಲಿ ಏಳುವ ಕುರು

ಫರ್

(ಸ) ಪೈನೇಸೀ ಕುಟುಂಬದ ಹಾಗೂ ಏಬೀಸ್ ಜಾತಿಗೆ ಸೇರಿದ ಒಂದು ವೃಕ್ಷ. ಹೊಡೆಗಳ ಮೇಲೆ ಸೂಜಿ ಆಕಾರದ ಬಿಡಿಬಿಡಿ ಎಲೆಗಳು ಇರುತ್ತವೆ. ಕಾಯಿಗಳು ಶಂಕುವಿನ ಆಕಾರ. ದಾರು ಮೃದು, ಸಂಗೀತ ವಾದ್ಯ ಭಾಗಗಳ ತಯಾರಿಕೆ ಯಲ್ಲೂ ಹಡಗು ನಿರ್ಮಾಣದಲ್ಲೂ ಬಳಕೆ

ಫರ್ಕ್ಯುಲ

(ಜೀ) ಹಕ್ಕಿಗಳಲ್ಲಿ ಎರಡು ಕ್ಲಾವಿಕಲ್ ಮೂಳೆಗಳು ‘U’ ಅಥವಾ ‘V’ ಆಕಾರದಲ್ಲಿ ಕೂಡಿ ಆದ ರಚನೆ

ಫರ್‌ಫರ್

(ವೈ) ಕೆಳಗಡೆ ಹೊಸ ಚರ್ಮ ಹುಟ್ಟಿದ ಹಾಗೆಲ್ಲ ಮೇಲುಗಡೆ ಉದುರುತ್ತ ಹೋಗುವ ಸತ್ತ ಚರ್ಮದ ಹುರುಪೆ. ಹಗರು. ಮುಖ್ಯವಾಗಿ ತಲೆ ಹೊಟ್ಟು. ಸಿಬ್ಬು. ಸಿಂಡು

ಫರ್ಮಿ

(ಭೌ) ಫೆಮ್ಟೊಮೀಟರ್, ಪ್ರತೀಕ fm, ಅತಿ ಕಡಿಮೆ ಉದ್ದವನ್ನು ಅಳೆಯಲು ಬಳಸುವ ಮಾನ, ೧೦-೧೫ ಮೀ. ಉದ್ದಕ್ಕೆ ಸಮ. ಪ್ರೋಟಾನ್ ತ್ರಿಜ್ಯದ ದರ್ಜೆಯಲ್ಲಿದೆ. 1.2 fm. ಬೈಜಿಕ ಭೌತವಿಜ್ಞಾನ ದಲ್ಲಿ ಬಳಕೆ. ಎನ್ರಿಕೊಫರ್ಮಿ (೧೯೦೧-೫೪) ಸ್ಮರಣಾರ್ಥ ಈ ಹೆಸರು

ಫರ್ಮಿಯಮ್

(ರ) ಪ್ರತೀಕ Fm. ಮಾನವನಿರ್ಮಿತ ಧಾತು. ಪರಮಾಣು ಸಂಖ್ಯೆ ೧೦೦. ಮುಖ್ಯ ಸಮಸ್ಥಾನಿ ೨೫೭Fm. ಅರ್ಧಾಯು ೮೦ ದಿನಗಳು. ೧೯೫೨ರಲ್ಲಿ ಸಿಡಿಸಲಾದ ಮೊದಲ ಹೈಡ್ರೊಜನ್ ಬಾಂಬ್‌ನ ಭಗ್ನಾವಶೇಷಗಳಲ್ಲಿ ಇದನ್ನು ಮೊದಲು ಪತ್ತೆ ಹಚ್ಚಲಾಯಿತು

ಫರ್ಮಿಯಾನ್

(ಭೌ) ಫರ್ಮಿ-ಡಿರಾಕ್ ಸಂಖ್ಯಾಕಲನ ಸಿದ್ಧಾಂತವನ್ನು ಪಾಲಿಸುವ ಒಂದು ಕಣ. ಉದಾ: ಬೇರ‍್ಯಾನ್ ಮತ್ತು ಲೆಪ್ಟಾನ್‌ಗಳು. ಇವು ಪೌಲಿ ಬಹಿಷ್ಕರಣ ತತ್ತ್ವಕ್ಕೆ ಬದ್ಧ

ಫರ್ಲಾಂಗ್

(ಸಾ) ದೂರಕ್ಕೆ ಸಂಬಂಧಿಸಿದ ಬ್ರಿಟಿಷ್ ಏಕಮಾನ. ಒಂದು ಮೈಲಿಯ ಎಂಟನೇ ಒಂದು ಭಾಗ. ೨೨೦ ಗಜ. ೨೦೧.೧೭ ಮೀಟರ್‌ಗೆ ಸಮ

ಫಲಕ

(ತಂ) ಮುಖ. ಸೂಚೀಫಲಕ

ಫಲಕ

(ತಂ) ಆವರ್ತಿಸುವ ದುಂಡುಫಲಕ. ಇದರ ಮೇಲ್ಮೈಯನ್ನು ಕಾಂತೀಕರಿಸಿ ಮಾಹಿತಿಯನ್ನು ಏಕಕೇಂದ್ರೀಯ ದಾಖಲೆ ಜಾಡುಗಳಾಗಿ ದಾಸ್ತಾನಿಸಬಹುದು

ಫಲಕ

(ಭೂ) ಭೂಭಾಗವೊಂದರ ಪ್ರಧಾನ ಮೇಲ್ಮೈ

ಫಲಕಗಳು

(ಭೂವಿ) ಭೂಖಂಡಗಾತ್ರಕ್ಕಿಂತ ದೊಡ್ಡದಾದ ಶಿಲಾಗೋಳದ ಗಡಸು ರಚನೆಗಳು. ಇವುಗಳಿಗೆ ಚಿಪ್ಪು ಮತ್ತು ಮೇಲ್ಪದರಗಳಿವೆ. ಇವು ಸ್ನಿಗ್ಧ ಕೆಳಪದರದ ಮೇಲೆ ತೇಲುತ್ತಿರುತ್ತವೆ

ಫಲಕಾಂದೋಲನ

(ಭೂವಿ) ಸ್ನಿಗ್ಧ ಕವಚದ ಮೇಲೆ ಗಟ್ಟಿ ಚಪ್ಪಡಿಗಳಂತೆ ತೇಲುತ್ತಿರುವ ಶಿಲಾಗೋಳದ ದೊಡ್ಡ ಫಲಕಗಳ ಚಲನೆಗಳನ್ನು ಗಮನದಲ್ಲಿಟ್ಟುಕೊಂಡು ಭೂಮಿಯ ರಚನೆ ಹಾಗೂ ಪ್ರಕ್ರಿಯೆಗಳನ್ನು ವಿವರಿಸುವ ಸಿದ್ಧಾಂತ

ಫಲಜ್ಯೋತಿಷ

(ಸಾ) ವ್ಯಕ್ತಿಜೀವನವನ್ನು ಆಕಾಶಕಾಯಗಳು ಪ್ರಭಾವಿಸುವುವೆಂದು ಅಂಗೀಕರಿಸಿ ಅವುಗಳ ಚಲನವಲನಗಳ ಅಧ್ಯಯನದಿಂದ ಆತನ ಭವಿಷ್ಯ ನುಡಿಯಲು ಪ್ರಯತ್ನಿಸುವ ಮಿಥ್ಯಾ ತರ್ಕ. ಊಹೆಯದೇ ಪ್ರಧಾನ ಪಾತ್ರ. ನಿಸರ್ಗದಲ್ಲಿ ಆಧಾರವಿಲ್ಲ. ಜ್ಯೋತಿಷಶಾಸ್ತ್ರ. ಹೋರಾಶಾಸ್ತ್ರ

ಫಲನಗಳು

(ಗ) ಫಲನ (ಚಿತ್ರ ಚಿತ್ರಣ) ಗಣ xನ ಪ್ರತಿಯೊಂದು ಧಾತು xಗೂ ಗಣ yಯ ಏಕೈಕ ಧಾತು yಯನ್ನು ನಿಗದಿಸುವ ಕ್ರಮವಿಧಿ. ಇದನ್ನು y=f(x) ಎಂದು ಬರೆಯುತ್ತೇವೆ. ಪ್ರತೀಕ f ಫಲನವನ್ನು ಸೂಚಿಸುತ್ತದೆ. ಫಲನ f ಕುರಿತಂತೆ yಗೆ x ಧಾತುವಿನ ಬಿಂಬವೆಂದು ಹೆಸರು. ಗಣ xಗೆ ಫಲನ fನ ಪ್ರಾಂತವೆಂದೂ ಗಣ yಗೆ ಸಹಪ್ರಾಂತವೆಂದೂ ಹೆಸರು. ಒಂದು-ಒಂದು ಚಿತ್ರಣ (one-one mapping) : ಈ ಚಿತ್ರಣದಲ್ಲಿ ಪ್ರಾಂತದ ವಿವಿಧ ಧಾತುಗಳಿಗೆ ವಿವಿಧ ಬಿಂಬಗಳಿವೆ. ಆಚ್ಛಾದಕ ಚಿತ್ರಣ (onto mapping) : ಸಹಪ್ರಾಂತ yಯಲ್ಲಿಯ ಪ್ರತಿಯೊಂದು ಧಾತು yಗೆ ಪ್ರಾಂತ x ನಲ್ಲಿ f (x) = y ಆಗುವಂತೆ ಕನಿಷ್ಠ ಒಂದು ಧಾತು x ಇರುತ್ತದೆ. ಉಭಯ ಚಿತ್ರಣ (bijection mapping) : ಒಂದು-ಒಂದು ಮತ್ತು ಆಚ್ಛಾದಕ ಎರಡೂ ಆಗಿರುವ ಚಿತ್ರಣ. ಪ್ರತಿಲೋಮ ಫಲನ (inverse function) : y = f (x) ಎಂಬುದು ಗಣ xನಿಂದ ಗಣ yಗೆ ಒಂದು-ಒಂದು ಮತ್ತು ಆಚ್ಛಾದಕ ಚಿತ್ರಣವಾಗಿದ್ದು, y = f (x) ಆಗುವಂತೆ g(y) = x ಪ್ರಕಾರ ಗಣ yನಿಂದ ಗಣ xಗೆ ಚಿತ್ರಣ gಯನ್ನು ವ್ಯಾಖ್ಯಿಸಬಹುದು. ಈ ಚಿತ್ರಣ gಗೆ fನ ಪ್ರತಿಲೋಮ ಫಲನವೆಂದು ಹೆಸರು. ಪ್ರತೀಕ f -1, ಅಂದರೆ f -1(y) = x(( y = f (x)

ಫಲನದ ಪರಿಬಂಧಗಳು

(ಗ) f (x) ಫಲನದ ನೀಚ ಪರಿಬಂಧ L ಮತ್ತು ಉಚ್ಚ ಪರಿಬಂಧ M ಆಗಿದ್ದು xನ ಎಲ್ಲ ಬೆಲೆಗಳಿಗೆ LLL f (x) M ಆಗಿದ್ದರೆ L ಮತ್ತು M ಈ ಫಲನದ ಪರಿಬಂಧಗಳು

ಫಲಭರಿತತೆ ಮತ್ತು ಫಲವಂತತೆ

(ಪ್ರಾ) ಸಂತಾನಾಭಿವೃದ್ಧಿ ಶಕ್ತಿ. ಮುಖ್ಯವಾಗಿ ಪ್ರಾಣಿಗಳಲ್ಲಿ ಮರಿ ಹಾಕುವ ಶಕ್ತಿ. (ಸ) ಭೂಮಿಯ ಫಲದಾಯಕತೆ

ಫಲವಂತ ಧಾತುಗಳು

(ಭೌ) ಯುರೇನಿಯಮ್-೨೩೮ ಮತ್ತು ಥೋರಿಯಮ್-೨೩೨ ಇವನ್ನು ನೇರವಾಗಿ ಪರಮಾಣು ಕ್ರಿಯಾಕಾರಿಯಲ್ಲಿ ಬಳಸಲಾಗುವುದಿಲ್ಲ. ನ್ಯೂಟ್ರಾನನ್ನು ಹೀರಿಕೊಳ್ಳುವಂತೆ ಮಾಡುವ ಮೂಲಕ ಯುರೇನಿಯನಮ್-೨೩೮ನ್ನು ಪ್ಲೂಟೋನಿಯಮ್-೨೩೯ ಆಗಿಯೂ ಥೋರಿಯಮ್-೨೩೨ನ್ನು ಯುರೇನಿಯಮ್-೨೩೩ ಆಗಿಯೂ ವಿದಳನಗೊಳಿಸಿ ಬಳಸಬಹುದಷ್ಟೆ

ಫಲವತ್ತತೆ

(ಜೀ) ಸಮೃದ್ಧ ಉತ್ಪಾದನಾಶೀಲತೆ ನಿಹಿತವಾಗಿ ಇರುವ ಸ್ಥಿತಿ
< previous12345678Next >

Search Dictionaries

Loading Results

Follow Us :   
  Download Bharatavani App
  Bharatavani Windows App