भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲಂಬಕೋನೀಯ ವೃತ್ತಗಳು

(ಗ) ಲಂಬಕೋನದಲ್ಲಿ ಸಂಧಿಸುವ ಒಂದು ಜೊತೆ ವೃತ್ತಗಳು. ಸಂಧಿಬಿಂದುವಿನಲ್ಲಿ ಒಂದರ ಸ್ಪರ್ಶಕ ಇನ್ನೊಂದರ ಕೇಂದ್ರದ ಮೂಲಕ ಹಾಯುತ್ತದೆ ಮತ್ತು ವಿಪರ್ಯಯವಾಗಿ

ಲಂಬದೂರ

(ಗ) ಅಳತೆಯ ಮುಖ್ಯ ರೇಖೆಯಿಂದ ಅದಕ್ಕೆ ಲಂಬವಾದ ದಿಶೆಯಲ್ಲಿ ಅಳೆದ ಸ್ವಲ್ಪ ದೂರ

ಲಂಬನ

(ಖ) ವೀಕ್ಷಕನ ಸ್ಥಳ ಬದಲಾವಣೆಯ ಫಲವಾಗಿ ಆಕಾಶಕಾಯಗಳ ಸ್ಥಾನಗಳಲ್ಲಿ ಪ್ರಕಟವಾಗುವ ತೋರಿಕೆ ವ್ಯತ್ಯಾಸ. ವಿಶೇಷವಾಗಿ, ಇದು ಅಂತರಿಕ್ಷದಲ್ಲಿ ಭೂಮಿಯ ಚಲನೆಯಿಂದ ಆಗುತ್ತದೆ. ಭೂಮಿಯ ದೈನಂದಿನ ಗಿರಕಿ, ವಾರ್ಷಿಕ ಕಕ್ಷೆ, ವ್ಯೋಮ ದಲ್ಲಿಯ ಚಲನೆ ಇವುಗಳಿಂದಾಗಿ ಸಂಭವಿಸುತ್ತದೆ. ದಿಶಾಂತರ

ಲಂಬನಕೋನ

(ಖ) ಆಕಾಶಕಾಯವನ್ನು ಧ್ರುವ ಬಿಂದುವಿಗೂ ವೀಕ್ಷಕನ ಖಮಧ್ಯಕ್ಕೂ ಸೇರಿಸುವ ಮಹಾ ವೃತ್ತಖಂಡಗಳ ನಡುವಿನ ಕೋನ. ನೋಡಿ : ಖಗೋಳ ತ್ರಿಭುಜ

ಲಂಬನಿರ್ದೇಶಕಗಳು

(ಗ) ಪರಸ್ಪರ ಲಂಬವಾಗಿರುವ ಸ್ಥಿರರೇಖೆಗಳನ್ನು ಆಧರಿಸಿ ಯಾವುದೇ ಬಿಂದುವನ್ನು ಉಲ್ಲೇಖಿಸುವ ಸಂಖ್ಯೆಗಳ ಒಂದು ಕ್ರಮಗಣ. ಉದಾ : (-೩,೨); (೩,೪,-೫)

ಲಂಬಪಾದ ತ್ರಿಭುಜ

(ಗ) ಯಾವುದೇ ತ್ರಿಭುಜ ABCಯಲ್ಲಿ ಶೃಂಗಗಳಿಂದ ಎದುರು ಭುಜಗಳಿಗೆ ಎಳೆದ ಲಂಬಗಳ ಪಾದಗಳು ರಚಿಸುವ ತ್ರಿಭುಜ: AD, BE, CFಗಳು ಲಂಬಗಳು, D, E, Fಲಂಬ ಪಾದಗಳು ಆದ್ದರಿಂದ ತ್ರಿಭುಜ ABCಯ ಲಂಬಪಾದ ತ್ರಿಭುಜ DEF. ನವಬಿಂದು ವೃತ್ತ ಈ ತ್ರಿಭುಜದ ಪರಿವೃತ್ತ. ಅಲ್ಲದೆ ತ್ರಿಭುಜ ABCಯ ಲಂಬ ಕೇಂದ್ರ O ಲಂಬಪಾದ ತ್ರಿಭುಜದ ಒಳಕೇಂದ್ರ – ಅಂದರೆ AD, BE, CFಗಳು ಅನುಕ್ರಮವಾಗಿ FDE, DEF, EFD ಕೋನಗಳ ಸಮದ್ವಿಭಾಜಕಗಳು

ಲಂಬಪೂರಕ ಕೋನಗಳು

(ಗ) ೨ ಕೋನಗಳ ಮೊತ್ತ ಲಂಬಕೋನ (=೯೦0) ಆದಾಗ ಒಂದು ಇನ್ನೊಂದರ ಪೂರಕ. ನೋಡಿ: ಸರಳಪೂರಕ ಕೋನಗಳು

ಲಂಬರೇಖಾ ಪ್ರಕ್ಷೇಪ

(ಗ) y = f (x) ಎಂಬ ಸಮೀಕರಣವನ್ನು ಹೊಂದಿರುವ ಹಾಗೂ ಪ್ರತಿಯೊಂದು ಬಿಂದುವಿ ನಲ್ಲೂ ಅವಕಲನೀಯ ಆಗಿರುವ (ಡಿಫರೆನ್ಸಿಯೆಬಲ್) ಒಂದು ವಕ್ರರೇಖೆಯಲ್ಲಿ P(x,y) ಎಂಬುವುದು ಒಂದು ಬಿಂದು ವಾಗಿರಲಿ. QPT ಎಂಬುದು P ಬಿಂದುವಿನಲ್ಲಿ ದತ್ತ ವಕ್ರ ರೇಖೆಗೆ ಸ್ಪರ್ಶರೇಖೆಯೂ ಹಾಗೂ RPN ಎಂಬುದು ಅದಕ್ಕೆ ಲಂಬವಾಗಿರುವ ಲಂಬರೇಖೆಯೂ ಆಗಿರಲಿ. ಆಗ ಅದರ ಪ್ರೇಕ್ಷೇಪವಾಗಿರುವ SN ಎಂಬುದು ಲಂಬರೇಖಾ ಪ್ರಕ್ಷೇಪ. ನೋಡಿ : ಸ್ಪರ್ಶರೇಖಾ ಪ್ರಕ್ಷೇಪ

ಲಂಬಸೂತ್ರ

(ತಂ) ಗೋಡೆ ಮೊದಲಾದವುಗಳ ಲಂಬಮಾನವನ್ನು ಪರೀಕ್ಷಿಸಲು ಉಪಯೋಗಿಸುವ ತೂಗುಗುಂಡು ದಾರ

ಲಂಬಾಕ್ಷೀಯ

(ಭೂವಿ) ಪರಸ್ಪರ ಲಂಬವಾದ ಅಕ್ಷಗಳಿರುವ (ಸ್ಫಟಿಕ)

ಲಂಬಾನುವರ್ತನೆ

(ಸ) ಉದ್ದೀಪನ ಆಕರದ ದಿಶೆಗೆ ಸಸ್ಯ ಅಥವಾ ಅದರ ಭಾಗ ಲಂಬಕೋನದಲ್ಲಿ ಪ್ರತಿಕ್ರಿಯಿಸುವುದು

ಲಂಬಾಪಾತನ

(ಭೌ) ಬೆಳಕು ಒಂದು ವಸ್ತುವಿನ ತಲದ ಮೇಲೆ ಸೊನ್ನೆ ಡಿಗ್ರಿ ಕೋನದಲ್ಲಿ ಅಥವಾ ತಲಕ್ಕೆ ಲಂಬವಾಗಿ ಆಪಾತಗೊಳ್ಳುವುದು

ಲಯ

(ಭೌ) ಕಣ ಮತ್ತು ಪ್ರತಿಕಣ ಹಠಾತ್ತನೆ ಸಂಯೋಜಿಸಿ ವಿಕಿರಣೋತ್ಪಾದನೆ ಆಗುವುದು. ಉದಾ: ಪಾಸಿಟ್ರಾನ್ ಮತ್ತು ಎಲೆಕ್ಟ್ರಾನ್‌ಗಳು ಡಿಕ್ಕಿ ಹೊಡೆದು ಲಯಿಸಿ ತಲಾ ೦.೫೧೧ Mev ಶಕ್ತಿ ಇರುವ ಎರಡು ಗ್ಯಾಮಕಿರಣ ಫೋಟಾನ್‌ಗಳ ಉತ್ಪಾದನೆ. ಸರ್ವನಾಶ

ಲಯ ವಿಕಿರಣ

(ಭೌ) ಯಾವುದೇ ಪ್ರಾಥಮಿಕ ಕಣ ಅದರ ಸಂವಾದೀ ಪ್ರತಿಕಣದೊಂದಿಗೆ ಡಿಕ್ಕಿ ಹೊಡೆದು ಲಯಿಸಿದಾಗ ಹೊಮ್ಮುವ ವಿಕಿರಣ. ಈ ವಿಕಿರಣವನ್ನು ಪ್ರೋಟಾನ್‌ಗಳು/ಮೀಸಾನ್‌ಗಳು ತಮ್ಮೊಂದಿಗೆ ಒಯ್ಯುತ್ತವೆ

ಲಯಕ್ಷೋಭೆ

(ವೈ) ಹೃದಯ ಮಿಡಿತದಲ್ಲಿ ತಾಳ ತಪ್ಪುವುದು, ಅಪಸಾಮಾನ್ಯ ಲಯ

ಲಯನಿಯಂತ್ರಿತ ವರ್ತನೆ

(ಮ) ಪ್ರಾಣಿಯ ನಡವಳಿಕೆಯನ್ನು ಯಾವುದೋ ಬಾಹ್ಯಲಯ (ಗಡಿಯಾರ) ನಿಯಂತ್ರಿಸುತ್ತಿದೆಯೋ ಎಂಬಂತೆ ಕಂಡುಬರುವ ಪ್ರರೂಪ. ಚಾಂದ್ರ ಕಲೆಗಳು, ಋತು ಪರಿಕ್ರಮಣ ಅಥವಾ ಹಗಲಿರುಳುಗಳ ಮುನ್ನಡೆ – ಇವುಗಳ ಪ್ರಭಾವದಡಿ ಪ್ರಾಣಿಗಳಲ್ಲಿ ಕಂಡುಬರುವ ವಾರ್ಷಿಕ ಲಯಬದ್ಧ ವರ್ತನೆ

ಲಯಬದ್ಧ ಲೇಸರ್

(ರ) ಲಯ-ಬದ್ಧವಾಗಿ ಲೇಸರ್ ಉಪಕರಣದಿಂದ ಹೊರಹೊಮ್ಮುವ ಬೆಳಕು. ಪ್ರತಿ ಲೇಸರ್ ಲಯಕ್ಕೆ ನಿರ್ದಿಷ್ಟ ಕಾಲಾವಧಿ ನಿಗದಿಯಾಗಿರುತ್ತದೆ. ಉದಾ : ನ್ಯಾನೊ ಸೆಕೆಂಡ್ ಲೇಸರ್‌ನಲ್ಲಿ, ಒಂದು ಲೇಸರ್ ಲಯದ ಬೆಳಕಿನ ಅವಧಿ ಕೆಲವು ನ್ಯಾನೊ ಸೆಕೆಂಡ್ ಮಾತ್ರ. ಇಂತಹ ನ್ಯಾನೊ ಕಾಲಾವಧಿಯಿರುವ ಲೇಸರ್ ಲಯವು ಒಂದು ಸೆಕೆಂಡಿಗೆ ಐದು ಬಾರಿ ಹೊರಹೊಮ್ಮಿದರೆ ಆಗ ಲೇಸರ್ ಉಪಕರಣದ ಆವರ್ತನ ದರ ಐದು ಹರ್ಟ್ಜ್ ಎನ್ನಲಾಗುತ್ತದೆ

ಲಯಬದ್ಧ ಲೇಸರ್ ಸಂಚಯನ

(ತಂ) ತೆಳುಫಿಲ್ಮುಗಳ ಸಂಚಯನ ತಂತ್ರ. ಇದರಲ್ಲಿ ಅತ್ಯುಚ್ಚ ಸಾಮರ್ಥ್ಯದ ಲಯಬದ್ಧ ಲೇಸರ್ ದೂಲವನ್ನು, ಅತ್ಯಧಿಕ ನಿರ್ವಾತದಲ್ಲಿರುವ ಗುರಿ ವಸ್ತುವಿನ ಮೇಲೆ ತಾಡಿಸಲಾಗುತ್ತದೆ. ಲೇಸರ್‌ನ ಕೇಂದ್ರೀಕೃತ ಶಕ್ತಿಶಾಲಿ ಬೆಳಕು, ಗುರಿ ವಸ್ತುವನ್ನು ಕೊರೆದು, ಅದರ ಬಾಷ್ಪವನ್ನು ಸಮೀಪದಲ್ಲಿರುವ ತಲಾಧಾರದ ಮೇಲೆ ಸಾಂದ್ರೀಕರಿಸಿ ಸಂಚಯಿ ಸುತ್ತದೆ. ತೆಳು ಫಿಲ್ಮುಗಳ ತಯಾರಿಕೆಯಲ್ಲಿ ಲಯಬದ್ಧ ಲೇಸರ್ ಸಂಚಯನಸ್ಥಾಪಿತ ತಂತ್ರವಾಗಿದ್ದು, ಇದರಿಂದ ಗುಣಮಟ್ಟದ ಅಧಿಪದರಣ ಕ್ರಮವಾಗಿ ಬೆಳೆದ ಫಿಲ್ಮುಗಳನ್ನು ಪಡೆಯಬಹುದಾಗಿದೆ

ಲವಣ

(ರ) ಆಮ್ಲವು ಪ್ರತ್ಯಾಮ್ಲದೊಂದಿಗೆ ಪ್ರತಿಕ್ರಿಯಿಸಿದಾಗ ಆಮ್ಲದ ಒಂದು ಅಥವಾ ಹೆಚ್ಚು ಹೈಡ್ರೊಜನ್ ಪರಮಾಣುಗಳ ಸ್ಥಾನದಲ್ಲಿ ಲೋಹ ಪರಮಾಣುಗಳು ಅಥವಾ ಎಲೆಕ್ಟ್ರೊ ಪಾಸಿಟಿವ್ (ವಿದ್ಯುತ್‌ಧನ) ರ‍್ಯಾಡಿಕಲ್‌ಗಳು ಸೇರಿ ಲಭಿಸುವ ಸಂಯುಕ್ತ. ಸಾಧಾರಣ ಉಷ್ಣತೆಗಳಲ್ಲಿ ಲವಣಗಳು ಸಾಮಾನ್ಯವಾಗಿ ಹರಳಾಗಿ ಇರುತ್ತವೆ. ನೀರಿನಲ್ಲಿ ವಿಲೀನವಾದಾಗ ಧನ ಮತ್ತು ಋಣ ಅಯಾನ್‌ಗಳು ರೂಪುಗೊಳ್ಳುತ್ತವೆ. ಉದಾ : ಕ್ಲೋರೈಡ್‌ಗಳು. ನೈಟ್ರೇಟ್‌ಗಳು, ಕಾರ್ಬೊನೇಟ್‌ಗಳು ಇತ್ಯಾದಿ. ಲವಣಗಳನ್ನು ಅವು ಯಾವ ಲೋಹ ಹಾಗೂ ಆಮ್ಲದಿಂದ ತಯಾರಿಸ ಲಾಗಿರುತ್ತದೋ ಅವುಗಳ ಹೆಸರುಗಳಿಂದ ಕರೆಯಲಾಗುತ್ತದೆ. ಉದಾ : ಸೋಡಿಯಮ್ ಸಲ್ಫೇಟ್ ಲವಣವು ಸೋಡಿಯಮ್ ಹಾಗೂ ಸಲ್ಫ್ಯೂರಿಕ್ ಆಮ್ಲಗಳಿಂದ ಆದುದು

ಲವಣ ಹಿಮಾನಿ

(ಭೂವಿ) ಉಪ್ಪಿನ ದಿಬ್ಬದ ಇಳಿಜಾರುಗಳಲ್ಲಿ ಗುರುತ್ವಾಕರ್ಷಣದ ಪ್ರಭಾವದಿಂದಾಗಿ ಚಲಿಸುವ ಉಪ್ಪಿನ ಹರಿವು. ಪರ್ಷಿಯನ್ ಗಲ್ಫ್‌ನ ಸಮೀಪದಲ್ಲಿ ಇರುವ ಅತಿಶುಷ್ಕ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App