भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲವಣತೆ

(ಸಾವಿ) ನೀರಿನಲ್ಲಿ ವಿಲೀನವಾಗಿರುವ ಲವಣದ ಪ್ರಮಾಣವನ್ನು ವಿವರಿಸಲು ಬಳಸುವ ಪದ. ಸಾವಿರದಷ್ಟು ನೀರಿನಲ್ಲಿ ಎಷ್ಟು ಲವಣಾಂಶವಿದೆ ಎಂಬುದರ ಸೂಚಕ. ತೆರೆದ ಸಮುದ್ರದಲ್ಲಿ ಸಾವಿರದಷ್ಟು ನೀರಿನಲ್ಲಿ ೩೫ ಭಾಗ ಲವಣ ಇರುತ್ತದೆ. ಅಳೆಯಲು ಲವಣಮಾಪಕ ಬಳಸುತ್ತಾರೆ

ಲವಣೀಕರಣ

(ರ) ನೀರಿನಲ್ಲಿ ವಿಲೇಯವಾಗಿರುವ ಜೈವಿಕ ಸಂಯುಕ್ತವನ್ನು ಬೇರೊಂದು ಲವಣದ ಪ್ರಯೋಗದಿಂದ ಹೊರತೆಗೆಯುವುದು. ಉದಾ : ಸೋಡಿಯಮ್ ಕ್ಲೋರೈಡ್‌ನ ಪ್ರಯೋಗದಿಂದ ಸಾಬೂನನ್ನು ಹೊರತೆಗೆಯುವುದು

ಲಸಿಕೆ

(ವೈ) ರೋಗಬಾರದಂತೆ ರಕ್ಷಣೆ ಪಡೆಯಲು ಮುಂಚಿತವಾಗಿ ನೀಡುವ ರಕ್ಷಣಾತ್ಮಕ ಔಷಧ. ಜೀವಂತ ರೋಗಕ್ರಿಮಿಗಳನ್ನು ದುರ್ಬಲಗೊಳಿಸಿ ಅಥವಾ ಮೃತ ರೋಗಕ್ರಿಮಿ ಗಳನ್ನು ಇಲ್ಲವೇ ರೋಗಕ್ರಿಮಿಗಳು ಉತ್ಪಾದಿಸುವ ವಿಷಗಳನ್ನು ಉಪಯೋಗಿಸಿಕೊಂಡು ವಿಶಿಷ್ಟ ಬಗೆಯಲ್ಲಿ ರೂಪಿಸಿದ, ಸಾಮಾನ್ಯವಾಗಿ ಚುಚ್ಚುಮದ್ದಿನ ರೂಪದ, ಅಪರೂಪಕ್ಕೆ ಕ್ಯಾಪ್ಸ್ಯೂಲು ರೂಪದಲ್ಲೂ ದೊರೆಯುವ ಔಷಧ.

ಲಸಿಕೆ ಹಾಕುವಿಕೆ

(ವೈ) ಯುಕ್ತ ವೈರಸ್ ಅಥವಾ ಬ್ಯಾಕ್ಟೀರಿಯದ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ಒಳಹೊಗಿಸಿ ಅಂಟುರೋಗ ತಗಲದಂತೆ ರಕ್ಷಣೆ ಒದಗಿಸುವ ಪ್ರಕ್ರಿಯೆ

ಲಾಕ್ಷಣಿಕ

(ಭೌ) ವಸ್ತುವಿನ ಗುಣಧರ್ಮ ಸೂಚಕ; ಅಳೆಯಬಹುದಾದ ಯಾವುದೇ ಗುಣ. ವೈಲಕ್ಷಣ್ಯ

ಲಾಕ್ಷಣಿಕ ವಕ್ರ

(ಭೌ) ಆನೋಡ್, ಗ್ರಿಡ್ ಮತ್ತು ಕ್ಯಾಥೋಡ್ ಎಂಬ ಮೂರು ವಿದ್ಯುತ್ ದ್ವಾರಗಳಿರುವ ಟ್ರಯೋಡ್ ಉಷ್ಣ ಅಯಾನಿಕ್ ಕವಾಟಗಳಲ್ಲಿ ಆನೋಡ್ (ವಿದ್ಯುತ್) ಪ್ರವಾಹ ಮತ್ತು ಗ್ರಿಡ್ ವೋಲ್ಟೇಜ್ ಮಧ್ಯೆ ಸಂಬಂಧವನ್ನು ಪ್ರತಿನಿಧಿಸುವ ವಕ್ರ

ಲಾಕ್ಷಣಿಕ ವಿಕಿರಣ

(ಭೌ) ಪರಮಾಣುವಿನಲ್ಲಿ ಒಂದು ಶಕ್ತಿಯ ಮಟ್ಟದಿಂದ ಇನ್ನೊಂದಕ್ಕೆ ಎಲೆಕ್ಟ್ರಾನ್ ಸಂಕ್ರಮಿಸುವಾಗ ಬೀರುವ ವಿಕಿರಣ. ಇದರ ಆವೃತ್ತಿ ಆಯಾ ಪರಮಾಣುವಿನ ವೈಲಕ್ಷಣ್ಯವನ್ನು ಅವಲಂಬಿಸಿದೆ

ಲಾಕ್ಷಣಿಕ ಸಮೀಕರಣ

(ಗ) ಒಂದು ಚೌಕ ಮಾತೃಕೆ Aಯ ಲಾಕ್ಷಣಿಕ ಸಮೀಕರಣವೆಂದರೆ |A-|I|=0 ಎಂಬ ನಿರ್ಧಾರಕ ಸಮೀಕರಣ. ಇಲ್ಲಿ ಎಂಬುದು ಒಂದು ಚರಾಂಕ ಹಾಗೂ I ಎಂಬುದು A ಮಾತೃಕೆಯ ದರ್ಜೆಯ (ಆರ್ಡರ್) ಏಕಕ (ಏಕಮಾನ, ಯುನಿಟ್) ಮಾತೃಕೆ. ಲಾಕ್ಷಣಿಕ ಸಮೀಕರಣದ ಮೂಲಗಳನ್ನು (ರೂಟ್ಸ್) ಲಾಕ್ಷಣಿಕ ಮೂಲಗಳೆನ್ನುತ್ತೇವೆ. ಉದಾ : ಆಗಿರಲಿ. ಆಗ ಅದರ ಲಾಕ್ಷಣಿಕ ಸಮೀಕರಣವು ಆಗಿರುತ್ತದೆ. ಇದನ್ನು ಸರಳೀಕರಿಸಿದಾಗ 2-7-+6 = 0. ಈ ಸಮೀಕರಣದ ಮೂಲಗಳಾದ =1, 6 ಎಂಬುವು A ಮಾತೃಕೆಯ ಲಾಕ್ಷಣಿಕ ಮೂಲಗಳಾಗಿರುತ್ತವೆ

ಲಾಕ್ಷಣಿಕಾಂಕ

(ಗ) ಯಾವುದೇ ಸಂಖ್ಯೆಯ ಪೂರ್ಣಾಂಕ ಭಾಗದಲ್ಲಿರುವ ಅಂಕೆಗಳ ಸಂಖ್ಯೆಗಿಂತ ೧ ಕಡಿಮೆ. ಪೂರ್ಣಾಂಕ ಭಾಗ ಶೂನ್ಯವಾಗಿರುವಾಗ ದಶಮಾಂಶ ಬಿಂದುವಿನ ಅದೇ ಬಲಕ್ಕಿರುವ ಶೂನ್ಯಗಳ ಸಂಖ್ಯೆಗಿಂತ ೧ ಹೆಚ್ಚು ಋಣಾತ್ಮಕವಾಗಿ; ಇಲ್ಲಿ ಋಣಚಿಹ್ನೆಯನ್ನು ಸಂಖ್ಯೆಯ ಮೇಲೆ ಗೀಟೆಳೆದು ಸೂಚಿಸುವುದು ವಾಡಿಕೆ. ಉದಾ : ೩೪೫.೫೪. ಇದರ ಲಾಕ್ಷಣಿಕಾಂಕ ೨; ೪೫ರದ್ದು ೧; ೩.೭ರದ್ದು ೦; ೦.೪೫೭ರದ್ದು ೧-; ೦.೦೧೨ರದ್ದು ೨- ಇತ್ಯಾದಿ. ನೋಡಿ : ಲಾಗರಿತಮ್

ಲಾಗರಿತಮ್

(ಗ) ಲಘುಗಣಕ. ವಿಘಾತ. ದತ್ತ ಧನಸಂಖ್ಯೆಯನ್ನು (n) ಪಡೆಯಲು ನಿರ್ದಿಷ್ಟ ಆಧಾರ ಸಂಖ್ಯೆಯನ್ನು (b)ಏರಿಸಬೇಕಾದ ಘಾತ (x). ಪ್ರತೀಕಗಳಲ್ಲಿ bx=nಆಗಿದ್ದರೆ ಆಗ logbn=x.ಆಧಾರ ಸಂಖ್ಯೆ b ಕುರಿತಂತೆ nನ ಲಾಗರಿತಮ್ x ಎನ್ನುತ್ತೇವೆ. ೩೪ = ೮೧, ೧೦೩ = ೧೦೦೦ ಎಂದು ಗೊತ್ತಿದೆ. ಆದ್ದರಿಂದ log3 81 = 4; log10 1000 = 3. ನೋಡಿ: ಆಂಟಿಲಾಗರಿತಮ್

ಲಾಗರಿತಮ್‌ನ ಲಾಕ್ಷಣಿಕಾಂಕ

(ಗ) ಯಾವುದೇ ಸಂಖ್ಯೆಯ ಲಾಗರಿತಮ್‌ನಲ್ಲಿರುವ ಪೂರ್ಣಾಂಕ ಭಾಗ. log10(10nK)=log1010n+log10. K= n+log10K ಎನ್ನುವಲ್ಲಿ ಪೂರ್ಣಾಂಕ n ಲಾಗರಿತಮ್‌ನ ಲಾಕ್ಷಣಿಕಾಂಕ. ನೋಡಿ : ಲಾಗರಿತಮ್

ಲಾಗೊಪೊಡಸ್

(ಪ್ರಾ) ಗರಿ ಅಥವಾ ಕೂದಲಿನಿಂದ ಆವೃತವಾದ ಪಾದವುಳ್ಳ

ಲಾಗ್

(ಸಾ) ಎಲ್ಲ ಸಂಗತಿಗಳನ್ನೂ ಬಹುಕಾಲವಿರುವಂತೆ ದಿನ ದಿನವೂ ಬರೆದಿಡುವ ದಾಖಲೆ ಪುಸ್ತಕ. ಅಭಿಲೇಖ. ದಾಖಲೆ. (ಗ) ಲಾಗರಿತಮ್ ಎಂಬುದರ ಸಂಕ್ಷಿಪ್ತ. (ಸ) ಒಡ್ಡೊಡ್ಡಾದ ಮರದ ತುಂಡು. ಕೊರಡು

ಲಾಘವ

(of a determinant) (ಗ) ನೋಡಿ : ಸಹಗುಣಕ

ಲಾಂಛನ ಪ್ರಭೇದ

(ಜೀವಿ) ಪರಿಸರದಲ್ಲಿ ನಶಿಸಿಹೋಗದಂತೆ ಕಾಪಾಡಿಕೊಂಡು ಬರಲು ಗುರುತಿಸಿರುವ ಪ್ರಮುಖ ಜೀವಿಪ್ರಭೇದಗಳು. ಇವುಗಳ ಸಂರಕ್ಷಣೆಯಿಂದ ಆವಾಸದ ಇತರ ಜೀವಿಗಳ ಸ್ಥಿತಿಯು ಸುಭದ್ರ. ಉದಾ : ಏಷ್ಯಾದ ಸಿಂಹ, ಬಂಗಾಳದ ಹುಲಿ, ಚೀನಾದ ಪಾಂಡಾ

ಲಾಜಿಸ್ಟಿಕ್ ವಕ್ರ

(ಸಂ) ಜೈವಿಕ ಸಮಷ್ಟಿಗಳ ಬೆಳವಣಿಗೆಯನ್ನು ವಿಶ್ಲೇಷಿಸಲು ಉಪಯುಕ್ತವಾಗಿರುವ ಈ ಪ್ರತಿರೂಪದ ಗಣಿತೀಯ ಸಮೀಕರಣ ಇಂತಿದೆ: ಇಲ್ಲಿ P(t) ಎಂಬುದು ಸಮಷ್ಟಿಯ ಗಾತ್ರವನ್ನು ಸೂಚಿಸುತ್ತದೆ; t ಸಮಯ ಸೂಚಿ; a, bಗಳು ಸ್ಥಿರಾಂಕಗಳು, K ಎಂಬುದು ಸಮಷ್ಟಿ ಗಾತ್ರಕ್ಕೆ ಗರಿಷ್ಠ ಮಿತಿ

ಲಾಡನಮ್

(ವೈ) ಆಲ್ಕಹಾಲ್‌ನಲ್ಲಿ ಬೆರೆಸಿ ಮಾಡಿದ ಅಫೀಮಿನ ಟಿಂಕ್ಚರ್. ಹಿಂದೆ ನಿದ್ರಾಜನಕವಾಗಿಯೂ ನೋವು ನಿವಾರಕವಾಗಿಯೂ ಬಳಕೆಯಲ್ಲಿದ್ದಿತು. ಅಫೀಮು ದ್ರಾವಣ

ಲಾಡಿಕ್ಯೂಲ್‌ಗಳು

(ಸ) ಹೆಚ್ಚಿನ ಹುಲ್ಲುಗಿಡಗಳ ಕಿರುಹೂಗಳಲ್ಲಿ ಕೇಸರಗಳ ಕೆಳಗೆ ತೂರಿಕೊಂಡ ಪುಟ್ಟ ಹುರುಪೆಗಳು ಉಬ್ಬಿ ಲೆಮ್ಮ ಮತ್ತು ಪೇಲಿಯಗಳನ್ನು ಬಲಾತ್ಕಾರದಿಂದ ಬೇರ್ಪಡಿಸುತ್ತವೆ ಮತ್ತು ಕೇಸರಗಳಿಗೂ ಶಲಾಕಾಗ್ರಗಳಿಗೂ ಬೆಳೆದು ಹೊರಬರಲು ಅವಕಾಶ ಮಾಡಿ ಕೊಡುತ್ತವೆ. ಬೀಜಕೋಶದ ಕಿರು ಹೊದಿಕೆ

ಲಾಂದ್ರ

(ತಂ) ಸ್ಥಳದಿಂದ ಸ್ಥಳಕ್ಕೆ ಒಯ್ಯಬಹುದಾದ, ಬೆಳಕು ನೀಡುವ ಸಾಧನ. ಇದರಲ್ಲಿ ಬೆಳಕಿನ ಆಕರ (ಜ್ವಾಲೆ ಇತ್ಯಾದಿ) ಗಾಜು, ಚಿಮಣಿಗಳಿಂದ ಸಂವೃತವಾಗಿರುತ್ತದೆ

ಲಾಪಿಸ್ ಲಜೂಲಿ

(ಭೂವಿ) ಸಣ್ಣ ಸಣ್ಣ ಗುಂಡುಗಳಾಗಿ ದೊರೆಯುವ, ಉಜ್ಜ್ವಲ ಆಕಾಶ ನೀಲಿವರ್ಣದ ಪ್ರಶಸ್ತ ರತ್ನ. ಫೆಲ್ಡ್‌ಸ್ಪಾರ್ ಲಾಸುರೈಟ್, ಕ್ಯಾಲ್ಸೈಟ್ ಹಾಗೂ ಪೈರೈಟ್‌ಗಳಿಂದ ಕೂಡಿರುತ್ತದೆ. ಅಲಂಕರಣ, ಆಭರಣಗಳಿಗಾಗಿ ಬಳಕೆ

Search Dictionaries

Loading Results

Follow Us :   
  Download Bharatavani App
  Bharatavani Windows App