भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲೊರಿಕ

(ಪ್ರಾ) ಕೆಲವು ಅಕಶೇರುಕಗಳಲ್ಲಿ ಬೆಳೆದಿರುವ ಗಡಸು ಚಿಪ್ಪು ಅಥವಾ ಆವರಣ. ಬಾಹ್ಯಾಸ್ಥಿಯಾಗಿ ಕಾರ್ಯ ನಿರ್ವಹಿಸುತ್ತದೆ. ಉದಾ : ಪ್ರೊಟೊಜೋವ

ಲೋಕಸ್

(ಜೀ) ಕ್ರೋಮೊಸೋಮ್‌ನಲ್ಲಿ ಜೀನ್‌ನ ಸ್ಥಿರ ಸ್ಥಾನ

ಲೋಕೊಮೊಟಿವ್

(ತಂ) ರೈಲು ಕಂಬಿಗಳ ಮೇಲೆ ಬಂಡಿಗಳ ಸಾಲನ್ನು ಎಳೆದುಕೊಂಡು ಹೋಗಲು ಬಳಸುವ ಎಂಜಿನ್. ಇದು ತೈಲ, ವಿದ್ಯುತ್, ಉಗಿ ಶಕ್ತಿಯಿಂದ ಚಲಿಸುತ್ತದೆ. ಪ್ರಯಾಣಿಕರನ್ನೂ ಸರಕನ್ನೂ ಸಾಗಿಸಲು ಉಪಯುಕ್ತ

ಲೋಟಿಕ್

(ಜೀ) ಹರಿಯುವ ನೀರಿನಲ್ಲಿ ವಾಸಿಸುವ. ಜಲವಾಸಿ. (ಪವಿ) ವೇಗವಾಗಿ ಹರಿಯುತ್ತಿರುವ ನೀರಿನ, ಅಂತಹ ನೀರಿಗೆ ಸಂಬಂಧಿಸಿದ

ಲೋಡ್

(ಭೌ) ಒಂದು ಸಂರಚನೆಯು ಆಧರಿಸಿರುವ ತೂಕ/ಹೊರೆ. ವಸ್ತುವಿಗೆ ಅನ್ವಯಿಸಲಾಗುವ ಯಾಂತ್ರಿಕ ಬಲ. ವಿದ್ಯುನ್ಮಂಡಲ / ಯಂತ್ರದಲ್ಲಿರುವ /ಅದರಿಂದ ಸರಬರಾಜಾಗುವ ಸಾಮರ್ಥ್ಯ. ಬಲಕ್ಕೆ ಎದುರಾಗುವ ಯಂತ್ರದ ಪ್ರತಿರೋಧ

ಲೋಪ

(ಭೌ) ಸ್ಫಟಿಕದ ಪರಿಪೂರ್ಣ ಜಾಲಕಕ್ಕೆ ವಿಭಿನ್ನ ಧಾತುವನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇರಿಸುವುದರಿಂದ ಉಂಟಾಗ ಬಹುದಾದ ಜಾಲಕ ದೋಷ. ಉದಾ: ಜರ್ಮೇನಿಯಮ್

ಲೋಫ್

(ಪ್ರಾ) ದವಡೆ ಹಲ್ಲಿನ ಮೊನಚು ಕೊನೆಗಳನ್ನು ಕೂಡಿಸುವ ಏಣು

ಲೋಬ್

(ತಂ) ಕ್ಷಿತಿಜೀಯ ಅಥವಾ ಲಂಬೀಯ ಸಮತಲದಲ್ಲಿ ಆಂಟೆನಾ ತೋರುವ ವರ್ಧಿತ ಪ್ರತಿವರ್ತನೆ. ಆಂಟೆನಾದ ವಿಕಿರಣ ಪ್ರರೂಪದಲ್ಲಿಯ ಲೋಬ್ ಅಥವಾ ಕುಣಿಕೆ ಇದನ್ನು ಸೂಚಿಸುತ್ತದೆ

ಲೋಮನಾಳ

(ಭೌ) ಸೂಕ್ಷ್ಮತೆಯಲ್ಲಿಯೂ ನಮ್ಯತೆ ಯಲ್ಲಿಯೂ ವ್ಯಾಸದಲ್ಲಿಯೂ ಕೂದಲಿನಂತಿರುವ ನಳಿಕೆ ಕೇಶಿಕೆ. (ವೈ) ಲೋಮರಕ್ತನಾಳ. ಧಮನಿ ಕೊನೆಗೊಂಡು ಸಿರೆ ಪ್ರಾರಂಭ ವಾಗುವ ಮುನ್ನ ಕಾಣಬರುವ, ಕೂದಲಿಗಿಂತ ತೆಳುವಾದ ರಕ್ತನಾಳ. ಲೋಮನಾಳಗಳು ರಕ್ತವನ್ನು ಧಮನಿಗಳಿಂದ ಎಲ್ಲ ಜೀವಕೋಶ ಗಳಿಗೂ ಒಯ್ಯುತ್ತವೆ. ಅವುಗಳ ಭಿತ್ತಿಗಳು ಒಂದು ಕೋಶಸ್ತರದಷ್ಟು ಅಷ್ಟೆ ದಪ್ಪ. ಹಾಗಾಗಿ ಆಕ್ಸಿಜನ್ ಹಾಗೂ ಪೋಷಕಗಳು ಅವುಗಳ ಮೂಲಕ ಸುತ್ತಮುತ್ತಲ ಊತಕಗಳಿಗೆ ಸಾಗಬಲ್ಲವು. ಲೋಮನಾಳ ಗಳು ವ್ಯರ್ಥ ಸಾಮಗ್ರಿಯನ್ನೂ (ಯೂರಿಯ ಮತ್ತು ಕಾರ್ಬನ್ ಡೈ ಆಕ್ಸೈಡ್) ಅಂತಿಮವಾಗಿ ತ್ಯಾಜ್ಯಗೊಳಿಸುವ ಕಿರುಸಿರೆಗಳಿಗೆ ಸಾಗಿಸುತ್ತವೆ. ಲೋಮನಾಳಗಳು ಸ್ಥಳೀಯ ಊತಕಗಳ ಆವಶ್ಯಕತೆ ಗಳಿಗೆ ಅನುಗುಣವಾಗಿ ಸಂಕೋಚನ/ವ್ಯಾಕೋಚನಗೊಳ್ಳಬಲ್ಲವು

ಲೋಮನಾಳತ್ವ

(ಭೌ) ವ್ಯಾಸ ತೀರ ಕಿರಿದಾಗಿರುವ ನಳಿಕೆಗಳಲ್ಲಿ ಮೇಲ್ಮೈ ಕರ್ಷಣದ ಕಾರಣವಾಗಿ ಉಂಟಾಗುವ ವಿದ್ಯಮಾನ. ಉದಾ : ಲೋಮನಾಳ ನಳಿಕೆಗಳಲ್ಲಿ ದ್ರವಗಳ ಮಟ್ಟ ಏರುವುದು/ಇಳಿಯುವುದು, ಒತ್ತುಕಾಗದ, ಹೀರುಬತ್ತಿಗಳ ಕ್ರಿಯೆ

ಲೋಮ್

(ತಂ) ಜೇಡಿ, ನೀರು, ಮರಳು ಹಾಗೂ ಕೊಚ್ಚಿದ ಹುಲ್ಲುಗಳ ಮಿಶ್ರಣ. ಇಟ್ಟಿಗೆ ಹಾಗೂ ಗಿಲಾವು ಮಾಡಲು ಬಳಕೆ. ಕಳಿ ಮಣ್ಣು. ಕಡುಮಣ್ಣು. ಕೊಳೆತ ಸಸ್ಯಪದಾರ್ಥ. ಜೇಡಿ ಮತ್ತು ಮರಳುಗಳಿಂದ ಕೂಡಿದ ಫಲವತ್ತಾದ ಮಣ್ಣು

ಲೋಲಕ

(ಭೌ) ದಾರ ಅಥವಾ ತಂತಿಯ ತುದಿಯಲ್ಲಿ ಕಟ್ಟಿದ್ದು ಗುರುತ್ವಬಲದಿಂದಾಗಿ ಮಾಧ್ಯ ಸ್ಥಾನದ ಅತ್ತ ಇತ್ತ ಅನಿರ್ಬಂಧಿತವಾಗಿ ತೂಗಾಡುವ ತೂಕ ಅಥವಾ ಗುಂಡು ಇರುವ ಸಾಧನ. ಆದರ್ಶ ಲೋಲಕದಲ್ಲಿ ಆಂದೋಲನ ಕೋನ ಕಿರಿದು, ದಾರದ ರಾಶಿ ನಗಣ್ಯ. ಲೋಲಕದ ರಾಶಿ ಒಂದು ಬಿಂದುವಿನಲ್ಲಿ ಕೇಂದ್ರೀಕೃತ. ಇಂಥ ಲೋಲಕದ ಒಂದು ಪೂರ್ಣ ಆಂದೋಲನ ಕಾಲ ಗೆ ಸಮ. ಇಲ್ಲಿ l ದಾರದ ಉದ್ದ, g ಗುರುತ್ವ (ಮುಕ್ತಪತನ) ವೇಗೋತ್ಕರ್ಷ

ಲೋಷನ್

(ವೈ) ಹುಣ್ಣನ್ನು ಮಾಯಿಸಲು, ಚರ್ಮರೋಗ ವನ್ನು ವಾಸಿಮಾಡಲು, ಮುಖದ ಬಣ್ಣ ಮೊದಲಾದವನ್ನು ಸ್ವಚ್ಛಗೊಳಿಸಲು ಬಳಸುವ ದ್ರವ ಲೇಪ. ದ್ರವೌಷಧ

ಲೋಹ

(ರ) ಧಾತುಗಳಲ್ಲಿ ಒಂದು ಬಗೆ. ಧಾತುಗಳ ಪೈಕಿ ಶೇಕಡಾ ೮೦ರಷ್ಟು ಲೋಹಗಳು. ಲೋಹಗಳು ಹಾಗೂ ಅವುಗಳ ಆಕ್ಸೈಡುಗಳು ಆಮ್ಲದೊಡನೆ ವರ್ತಿಸಿ ಲವಣಗಳನ್ನು ನೀಡುವುದು ಸಾಮಾನ್ಯ. ಘನ ಹಾಗೂ ದ್ರವರೂಪದ ಲೋಹಗಳಲ್ಲಿ (ಪಾದರಸ) ವಿಶಿಷ್ಟ ಲೋಹಬಂಧವಿರುವ ಕಾರಣ ತನ್ಯತೆ, ಕುಟ್ಯತೆ, ವಿದ್ಯುತ್ ವಾಹಕತೆ, ಉಷ್ಣವಾಹಕತೆ ಇರುತ್ತದೆ. ಹೊಳಪು ಇರುವುದಾದರೂ ಅಪವಾದಗಳುಂಟು

ಲೋಹ ಸಿರ

(ಭೂವಿ) ಲೋಹದ ಅದಿರಿನ ಎಳೆಗಳಿಂದ ಕೂಡಿದ ಖನಿಜ ನಿಕ್ಷೇಪ

ಲೋಹಭಸ್ಮ

(ರ) ಅದಿರೊಂದನ್ನು ಗಾಳಿಯಲ್ಲಿ ಕಾಸಿದಾಗ ರೂಪುಗೊಳ್ಳುವ ಲೋಹದ ಆಕ್ಸೈಡ್. ನೋಡಿ : ಕ್ಯಾಲ್ಕ್ಸ್

ಲೋಹರಚನಾ ಶಾಸ್ತ್ರ

(ತಂ) ದ್ಯುತಿ ಹಾಗೂ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು, ಎಕ್ಸ್-ಕಿರಣ ವಿವರ್ತನೆ ಇತ್ಯಾದಿ ಗಳನ್ನು ಬಳಸಿಕೊಂಡು ಲೋಹಗಳ, ಮಿಶ್ರ ಲೋಹಗಳ ಸ್ಫಟಿಕೀಯ ರಚನೆಯನ್ನು ಅಧ್ಯಯನ ಮಾಡುವ ವಿಜ್ಞಾನ ಶಾಖೆ

ಲೋಹವಿಜ್ಞಾನ

(ತಂ) ಅದಿರುಗಳಿಂದ ಲೋಹಗಳ ತಯಾರಿಕೆ, ಲೋಹಗಳ ಶುದ್ಧೀಕರಣ, ಮಿಶ್ರಲೋಹಗಳ ತಯಾರಿಕೆ, ಎಂಜಿನಿಯರಿಂಗ್ ಕಾರ್ಯಗಳಲ್ಲಿ ಲೋಹಗಳ ಬಳಕೆ ಕಾರ್ಯನಿರ್ವಹಣೆ – ಇವುಗಳಿಗೆ ಸಂಬಂಧಿಸಿದ ಆನ್ವಿತ ವಿಜ್ಞಾನ ಶಾಖೆ. ಲೋಹಗಳ ಆಹರಣ (ನಿಷ್ಕರ್ಷಣ) ಹಾಗೂ ಉತ್ಪಾದನೆಗೆ ಸಂಬಂಧಿಸಿದ್ದು ಪ್ರಕ್ರಿಯಾ ಲೋಹವಿಜ್ಞಾನ. ಯಾಂತ್ರಿಕ ವರ್ತನೆಗೆ ಸಂಬಂಧಿಸಿದ್ದು ‘ಭೌತಿಕ ಲೋಹವಿಜ್ಞಾನ’

ಲೋಹಾಭ

(ರ) ಲೋಹಗಳಿಗೂ ಅಲೋಹಗಳಿಗೂ ಮಧ್ಯವರ್ತಿ ಲಕ್ಷಣಗಳಿರುವ ರಾಸಾಯನಿಕ ಧಾತು. ಬೋರಾನ್, ಸಿಲಿಕಾನ್, ಜರ್ಮೇನಿಯಮ್, ಆರ್ಸೆನಿಕ್ ಮತ್ತು ಟೆಲ್ಲೂರಿಯಮ್‌ಗಳು ಮಾದರಿ ಲೋಹಾಭಗಳು. ಇವು ವಿದ್ಯುತ್ ಅರೆವಾಹಕಗಳು ಮತ್ತು ಇವುಗಳ ಆಕ್ಸೈಡ್‌ಗಳು ಉಭಯ ವರ್ತಿಗಳು – ಆಮ್ಲೀಯವಾಗಿಯೂ, ಪ್ರತ್ಯಾಮ್ಲೀಯವಾಗಿಯೂ ವರ್ತಿಸುತ್ತವೆ. ಅರೆಲೋಹ

ಲೋಹಾಯಾಸ

(ತಂ) ಅಂತಿಮ ಕರ್ಷಕ ತ್ರಾಣದ ಮಿತಿಯನ್ನು ಮೀರದಂತೆ ಲೋಹವನ್ನು ಏಕಪ್ರಕಾರವಾಗಿ ತುಯ್ತಕ್ಕೆ ಒಳಪಡಿಸಿದಾಗ ಲೋಹದ ಮೇಲಾಗುವ ಒಟ್ಟಾರೆ ಪರಿಣಾಮ ದಿಂದಾಗಿ ಲೋಹ ತೋರುವ ದುರ್ಬಲತೆ. ಸಂಕ್ಷಾರಣದಂಥ (ಕೊರೆತ) ಇತರ ಅಂಶಗಳೂ ಲೋಹದ ಆಯಾಸದ ಆಯುಷ್ಯವನ್ನು ಕಡಿಮೆ ಮಾಡುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App