भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲೋಹೀಯ ಬಂಧ

(ರ) ಘನಲೋಹ ಅಥವಾ ಮಿಶ್ರಲೋಹವೊಂದರ ಪರಮಾಣುಗಳನ್ನು ಒಟ್ಟಿಗೆ ಹಿಡಿದು ಇರಿಸುವಂಥ ಬಂಧದ ಮಾದರಿಯ ರಾಸಾಯನಿಕ ಬಂಧ. ಅಂಥ ಘನವಸ್ತುಗಳಲ್ಲಿ ಪರಮಾಣುಗಳು ಅಯಾನೀಕೃತವಾಗಿದ್ದು ಧನಾತ್ಮಕ ಅಯಾನ್‌ಗಳು ಜಾಲಕ ಸ್ಥಾನಗಳಲ್ಲಿರುತ್ತವೆ. ವೇಲೆನ್ಸ್ ಎಲೆಕ್ಟ್ರಾನ್‌ಗಳು ಜಾಲಕದ ಮೂಲಕ ಮುಕ್ತವಾಗಿ (ಅಥವಾ ಬಹುಮಟ್ಟಿಗೆ ಮುಕ್ತವಾಗಿ) ಚಲಿಸುತ್ತ ‘ಎಲೆಕ್ಟ್ರಾನ್ ಅನಿಲ’ವನ್ನು ರೂಪಿಸುತ್ತವೆ. ಧನಾತ್ಮಕ ಲೋಹ ಅಯಾನ್‌ಗಳ ಮತ್ತು ಎಲೆಕ್ಟ್ರಾನ್‌ಗಳ ನಡುವಿನ ಸ್ಥಾಯೀವಿದ್ಯುತ್ ಆಕರ್ಷಣೆಯೇ ಬಂಧಕ ಶಕ್ತಿ. ಮುಕ್ತ ಎಲೆಕ್ಟ್ರಾನ್‌ಗಳ ಅಸ್ತಿತ್ವವೇ ಲೋಹಗಳಲ್ಲಿ ಉತ್ತಮ ವಿದ್ಯುತ್ ಹಾಗೂ ಉಷ್ಣವಾಹಕತೆಯ ಗುಣಗಳನ್ನು ಉಂಟುಮಾಡುವಂತಹುದು

ಲೋಳೆ

(ಭೂವಿ) ಪುಡಿಗುಟ್ಟಿದ ಅದಿರಿನ ತೀರ ಸಣ್ಣ ಗಾತ್ರದ ಕಣಗಳು ನಿಧಾನವಾಗಿ ನೀರಿನಲ್ಲಿಳಿದು ತಲದಲ್ಲಿ ಸಂಚಯಿಸಿ ಆದ ಕೆಸರಿನಂಥ ಅರೆದ್ರವ ಅರೆಘನ ಮಿಶ್ರಣ

ಲೋಳೆಗಟ್ಟಿದ

(ರ) ದಪ್ಪವಾದ ಎಳೆಗಳಂತೆ ಹೊರಗೆ ಎಳೆಯಲು ಸಾಧ್ಯ ಮಾಡಿಕೊಡುವಷ್ಟು ಅಂಟಂಟಾದ (ದ್ರವ)

ಲೋಳೆಮೀನು

(ಪ್ರಾ) ನೋಡಿ : ಅಂಬಲಿಮೀನು

ಲ್ಯಾಕರ್

(ರ) ಆವಿಶೀಲ ದ್ರವದಲ್ಲಿ ಗೋಂದಿನಂಥ ವಸ್ತುವಿನ ದ್ರಾವಣ. ಮರ, ಲೋಹ, ಬಣ್ಣಗೆಲಸ ಇತ್ಯಾದಿಗಳಿಗೆ ತಿಳಿಯಾದ, ಗಡಸಾದ ಹೊರಲೇಪನ ನೀಡಲು ಬಳಕೆ. ವಾರ್ನಿಷ್. ಮೆರುಗು

ಲ್ಯಾಕೊಲಿತ್

(ಭೂವಿ) ಸಾಮಾನ್ಯವಾಗಿ ಗುಮ್ಮಟದಂಥ ಮೇಲುಭಾಗ ಹಾಗೂ ಸಮತಟ್ಟು ಪಾದವಿರುವ ಅಂತಃಸರಣ ಅಗ್ನಿಶಿಲೆ, ಕೆಳಭಾಗದಿಂದ ಶಿಲಾಪಾಕ ಉಬ್ಬುವುದರಿಂದ ಈ ರಚನೆ

ಲ್ಯಾಕ್ಕೇಸ್

(ರ) ಬ್ಯಾಕ್ಟೀರಿಯಗಳಲ್ಲೂ ಕೆಲವು ಶಿಲೀಂಧ್ರ ಗಳಲ್ಲೂ ಇರುವ ಒಂದು ಕಿಣ್ವ

ಲ್ಯಾಕ್ಟಾಲ್ಬುಮಿನ್

(ರ) ಹಾಲಿನಲ್ಲಿರುವ ಒಂದು ಸರಳ ಪ್ರೋಟೀನ್. ಸೀರಮ್ ಆಲ್ಬುಮಿನ್ನನ್ನು ಹೋಲುತ್ತದೆ; ಹೆಚ್ಚು ಪೌಷ್ಟಿಕಾಂಶ ಇದೆ

ಲ್ಯಾಕ್ಟಿಕ್ ಆಮ್ಲ

(ರ) CH3 CH (OH). COOH ನಿರ್ವರ್ಣ ಸ್ಫಟಿಕ ರೂಪಿ ಘನ. ಹುಳಿ ರುಚಿ, ಸಾಸಾಂ ೧. ೨೦೬, ದ್ರಬಿಂ ೧೮0ಸೆ. ಕುಬಿಂ ೧೨೨0ಸೆ. ಡಿ, ಎಲ್ ಮತ್ತು ಡಿಎಲ್ ಎಂಬ ಮೂರು ಘನ ಸಮಾಂಗಿಗಳುಂಟು. ಹಾಲು ಹುಳಿ ಹಿಡಿದಾಗ ಅದರಲ್ಲಿರುವ ಲಾಕ್ಟೋಸ್ ಸಕ್ಕರೆಯನ್ನು ಬ್ಯಾಕ್ಟೀರಿಯಗಳು ಎಲ್-ರೂಪಿ ಲ್ಯಾಕ್ಟಿಕ್ ಆಮ್ಲಕ್ಕೆ ಪರಿವರ್ತಿಸುತ್ತವೆ. ಇದು ಎಡಮುರಿ. ಏಕಕಾಲದಲ್ಲಿ ಬಲಮುರಿ ರೂಪವೂ ಉಂಟಾಗು ವುದರಿಂದ ಮಿಶ್ರಣಕ್ಕೆ ಡಿಎಲ್ ಲ್ಯಾಕ್ಟಿಕ್ ಆಮ್ಲ ಎಂದು ಹೆಸರು. ಇದು ದ್ಯುತಿಪಟುತ್ವಹೀನ. ಬಣ್ಣ ಹಾಕುವ ಮತ್ತು ಚರ್ಮ ಹದ ಮಾಡುವ ಕೈಗಾರಿಕೆಗಳಲ್ಲಿ ಬಳಕೆ. ಡಿ-ರೂಪಿ ಸಾರ್ಕೊಲ್ಯಾಕ್ಟಿಕ್ ಆಮ್ಲ ಸ್ನಾಯು ಊತಕದಲ್ಲುಂಟು. ಪ್ರಯಾಸಕರ ಅಂಗಸಾಧನೆ ಯಲ್ಲಿ ಸ್ನಾಯುಗಳಲ್ಲಿ ಉಂಟಾಗಿ ಸೆಡೆತ ನೋವುಂಟುಮಾಡುತ್ತದೆ

ಲ್ಯಾಕ್ಟಿಯಲ್

(ಜೀ) ಇದು ಸಣ್ಣಕರುಳಿನ ವಿಲಸ್‌ಗಳಲ್ಲಿ ಇರುವ ಸೂಕ್ಷ್ಮ ದುಗ್ಧನಾಳ. ಜೀರ್ಣಗೊಂಡ ಕೊಬ್ಬಿನ ಪದಾರ್ಥ ಹೀರುವಲ್ಲಿ ಸಹಾಯಕ. ಅನ್ನಕ್ಷೀರ ವಾಹಕ (ನಾಳ)

ಲ್ಯಾಕ್ಟೇಟ್

(ರ) ಲ್ಯಾಕ್ಟಿಕ್ ಆಮ್ಲದ ಲವಣ ಅಥವಾ ಎಸ್ಟರ್‌ನ ಅಯಾನ್. ಇದರಲ್ಲಿ ಕಾರ್ಬಾಕ್ಸಿಲ್ ಗುಂಪಿನ ಆಮ್ಲೀಯ ಹೈಡ್ರೊಜನ್‌ಅನ್ನು ಯಾವುದೇ ಲೋಹ ಅಥವಾ ಆರ್ಗ್ಯಾನಿಕ್ ರ‍್ಯಾಡಿಕಲ್ ಸ್ಥಾನಪಲ್ಲಟಗೊಳಿಸಿರುತ್ತದೆ. (ವೈ) ಹಾಲನ್ನು ಸ್ರವಿಸು

ಲ್ಯಾಕ್ಟೊಟಾಕ್ಸಿನ್

(ರ) ಹಾಲು ಅಥವಾ ಗಿಣ್ಣಿನಲ್ಲಿ ಕಂಡುಬರುವ ವಿಷ. ಕ್ಷೀರವಿಷ

ಲ್ಯಾಗ್

(ಭೂವಿ) ಸ್ತರಭಂಗದಲ್ಲಿ ಒಂದು ಪಕ್ಕದ ಸಾಮಗ್ರಿ ಮತ್ತೊಂದು ಪಕ್ಕದ ಸಾಮಗ್ರಿಯ ಕೆಳಕ್ಕೆ ತಳ್ಳಲ್ಪಟ್ಟಿರುವುದು

ಲ್ಯಾಂಥನಮ್

(ರ) ೧೮೩೯-೪೧ರಲ್ಲಿ ಶೋಧಿಸಲಾದ ವಿರಳ ಲೋಹಧಾತು. ಆವರ್ತಕೋಷ್ಟಕದಲ್ಲಿ ಮೂರನೆಯ ಗುಂಪಿನಲ್ಲಿದೆ. ಪ್ರತೀಕ la. ಪರಮಾಣು ಸಂಖ್ಯೆ ೫೭. ಸಾಪರಾ ೧೩೮.೯೧. ದ್ರಬಿಂ ೯೨೦0ಸೆ. ಬೆಳ್ಳಿಯಂತೆ ಹೊಳಪಿದೆ

ಲ್ಯಾಂಥನೈಡ್ ಶ್ರೇಣಿ

(ರ) ಲ್ಯಾಂಥನಮ್ ಅನಂತರ ೫೭-೭೧ ನಡುವಿನ ಪರಮಾಣು ಸಂಖ್ಯೆಗಳಿರುವ ವಿರಳಧಾತುಗಳು. ರಾಸಾಯನಿಕ ಗುಣಗಳಲ್ಲಿ ಲ್ಯಾಂಥನಮ್‌ಅನ್ನು ಹೋಲುತ್ತವೆ

ಲ್ಯಾಂಥನೈಡ್‌ಗಳು

(ರ) ವಿರಳ ಧಾತುಗಳು. ಪಸಂ. ೩೯ ಇರುವ ಯಿಟ್ರಿಯಮ್ ಹಾಗೂ (ಕೆಲವು ವೇಳೆ ಇದನ್ನು ಬಿಟ್ಟು) ಪಸಂ ೫೭ ಇರುವ ಲ್ಯಾಂಥನಮ್‌ನಿಂದ ಪಸಂ ೭೧ ಇರುವ ಲುಟೀಸಿಯಮ್‌ವರೆಗಿನ ೧೫ ಲೋಹ ಧಾತುಗಳು. ರಾಸಾಯನಿಕ ಗುಣದಲ್ಲಿ ಅಲ್ಯೂಮಿನಿಯಮ್‌ಅನ್ನು ಹೋಲುತ್ತವೆ. ಮೊನಜೈಟ್ ಮತ್ತು ಕೆಲವು ವಿರಳ ಖನಿಜಗಳಲ್ಲಿ ಲಭ್ಯ

ಲ್ಯಾನೊಲಿನ್

(ರ) ಕುರಿಯ ತುಪ್ಪಟದಿಂದ ತೆಗೆಯುವ ಹಳದಿ ಬಣ್ಣದ ಜಿಡ್ಡಿನ ಸಾರ. ಮುಲಾಮುಗಳಿಗೆ ಆಧಾರ

ಲ್ಯಾನ್ಸೆಟ್

(ವೈ) ಶಸ್ತ್ರಕ್ರಿಯೆಯಲ್ಲಿ ಸಣ್ಣ ಕಚ್ಚುಗಳನ್ನು ಮಾಡಲು ಬಳಸುವ, ರಕ್ತ ಹೊರಡಿಸಲು, ಚುಚ್ಚಲು ಅನುಕೂಲಿಸುವಂತೆ ಎರಡೂ ಕಡೆ ಹರಿತದ ಏಣುಳ್ಳ, ಮೊನಚು ತುದಿಯ ಈಟಿಯಂಥ ಶಸ್ತ್ರ. ಶೂಲ, ಈಟಿಕೆ

ಲ್ಯಾನ್ಸ್‌ಲೆಟ್

(ಪ್ರಾ) ೧. ಸೆಫಾಲೊಕಾರ್ಡೇಟ ಉಪವಿಭಾಗದ ಪ್ರಾಣಿಗಳ ಸಾಮಾನ್ಯ ಹೆಸರು. ೨. ಬ್ರ್ಯಾಂಕಿಯೊ ಸ್ಟಮಿಡೀ ವಂಶಕ್ಕೆ ಸೇರಿದ, ತೀರಪ್ರದೇಶಗಳ ಮರಳಿನಲ್ಲಿ ಬಿಲ ಕೊರೆಯುವ, ಮೀನಿನಂಥ ಚಿಕ್ಕ ಅಕಶೇರುಕ ಕಡಲಜೀವಿ

ಲ್ಯಾಪರೊಸ್ಕೋಪ್

(ವೈ) ಕಿಬ್ಬೊಟ್ಟೆಯ ಅಂಗಗಳನ್ನು ನೋಡಿ ಪರಿಶೀಲಿಸಲು ಕಿಬ್ಬೊಟ್ಟೆಯ ಹೊರಪದರದೊಳಕ್ಕೆ ತೂರಿಸುವ ದರ್ಶಕ ತಂತು. ನೋಡಿ : ಉದರದರ್ಶಕ

Search Dictionaries

Loading Results

Follow Us :   
  Download Bharatavani App
  Bharatavani Windows App