भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಆಕಲ್ಪಾಂತಸ್ಥಾಯಿ

ಕಲ್ಪದ ಕಡೆಯವರೆಗೂ ಸ್ಥಿರವಾಗಿರುವುದು.

ಆಕಸ್ಮಿಕ

1. ಅನಿರೀಕ್ಷಿತವಾದ ಘಟನೆ.

2. ಅಪಘಾತ.

ಆಕಸ್ಮಿಕ

ಅನಿರೀಕ್ಷಿತವಾದ.

ಆಕಸ್ಮಿಕ ರಜೆ

ಸಾಂದರ್ಭಿಕ ರಜೆ.

ಆಕಳಿ

ಆರಿಸಿಕೊಂಡಮೇಲೆ ಉಳಿದದ್ದು.

ಆಕಳಿಸು

1. ನಿದ್ರೆ, ಆಲಸ್ಯ, ಅಸ್ವಸ್ಥತೆ ಮುಂತಾದುವುಗಳಿಂದ `ಆ’ ಎಂದು ಬಾಯಿತೆರೆ.

2. ಆವರಿಸು.

ಆಕಳ್(ಳ)(ಳು)

1. ಹಸು.

2. ದನಕರು.

ಆಕಾಂಕ್ಷಿಸು

ಬಯಸು.

ಆಕಾಂಕ್ಷೆ

ಬಯಕೆ.

ಆಕಾರ

1. `ಆ’ ಎಂಬ ವರ್ಣ.

2. ರೂಪ.

3. ಆಕೃತಿ.

4. ಮನಸ್ಸಿನ ಭಾವಗಳನ್ನು ಹೊರಗೆಡಹುವ ಮುಖಚರ್ಯೆ, ಅಂಗಚೇಷ್ಟೆ ಮುಂತಾದುವು.

5. ಸೂಚನೆ.

6. ಹೊಲ, ಗದ್ದೆ, ತೋಟ ಮುಂತಾದ ಕೃಷಿಕ್ಷೇತ್ರದ ವಿಸ್ತಾರ.

7. ಸರಕಾರಕ್ಕೆ ಕೊಡಬೇಕಾದ ಜಮೀನಿನ ಕಂದಾಯ ಅಥವಾ ತೆರಿಗೆ.

8. ಉತ್ಪತ್ತಿ.

ಆಕಾಲಿ(ಳಿ)ಕಿ

1. ಕ್ಷಣಿಕವಾದುದು.

2. ಮಿಂಚು.

ಆಕಾಶ

1. ಪಂಚಭೂತಗಳಲ್ಲಿ ಒಂದು.

2. ಬಯಲು.

3. ಬಿಂದು.

ಆಕಾಶಕೇಶ

ಆಕಾಶವೇ ತಲೆಗೂದಲಾಗುಳ್ಳವನು.

ಆಕಾಶಗಂಗೆ

1. ದೇವಗಂಗಾನದಿ.

2. ತಿರುಪತಿ ಮುಂತಾದ ಕ್ಷೇತ್ರಗಳಲ್ಲಿಯ ಜಲಪ್ರಪಾತದ ಹೆಸರು.

3. (ಅಸಂಖ್ಯಾತ ನಕ್ಷತ್ರಗಳು ಮತ್ತು ಧೂಳು ಬಹು ಒತ್ತಾಗಿರುವುದರಿಂದ) ಆಕಾಶದಲ್ಲಿ ಹಾಲು ಚೆಲ್ಲಿದಂತೆ ಸುತ್ತುವರಿದು ಕಾಣುವ ತೇಜಃಪುಂಜ.

ಆಕಾಶಗಾಮಿ

ಅಂತರಿಕ್ಷದಲ್ಲಿ ಸಂಚರಿಸುವವನು.

ಆಕಾಶದೀಪ

ದೀಪಾವಳಿ ಮುಂತಾದ ಹಬ್ಬದ ದಿನಗಳಲ್ಲಿ ಎತ್ತರವಾದ ಕಂಬದ ತುದಿಯಲ್ಲಿ ತೂಗು ಬಿಡುವ ದೀಪ.

ಆಕಾಶಪುರಾಣ

ನಿರಾಧಾರವಾದ ಕಥೆ.

ಆಕಾಶಯಾನ

1. ಆಕಾಶಮಾರ್ಗದಲ್ಲಿ ಮಾಡುವ ಪ್ರಯಾಣ.

2. ಆಕಾಶದಲ್ಲಿ ಪ್ರಯಾಣ ಮಾಡುವ ಸಾಧನ.

ಆಕಾಶವಾಣಿ

1. ಗಗನದಲ್ಲಿ ಅಗೋಚರವಾದ ಮೂಲದಿಂದ ಕೇಳಿಬರುವ ಶಬ್ದ.

2. ತಂತಿಯಿಲ್ಲದೆ ಬರುವ ಸಮಾಚಾರ ಮುಂತಾದುವು.

3. ರೇಡಿಯೋ.

ಆಕೀರ್ಣ

ಹರಡಿದ.

Search Dictionaries

Loading Results

Follow Us :   
  Download Bharatavani App
  Bharatavani Windows App