भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಆಕೀರ್ಣ

ತುಂಬಿದುದು.

ಆಕುಂಚನ

ಮುದುರುವುದು.

ಆಕುಂಚಿತ

1. ಕುಗ್ಗಿದುದು.

2. (ಗದಾಯುದ್ಧದಲ್ಲಿ) ಒಂದುಬಗೆಯ ಹೊಡೆತ.

3. ನಾಟ್ಯದ ಆರು ವಿಧವಾದ ಸುಪ್ತಸ್ಥಾನಕಗಳಲ್ಲಿ ಒಂದು.

ಆಕುಂಚಿತ

ಕುಗ್ಗಿದ.

ಆಕುಲ(ಳ)

1. ವ್ಯಾಕುಲ.

2. ತುಂಬಿರುವುದು.

ಆಕುಲ(ಳ)

1. ಅಸ್ತವ್ಯಸ್ತವಾದ.

2. ಚಿಂತೆಯಿಂದ ಕೂಡಿದ.

3. ತುಂಬಿದ.

ಆಕುಲಿಸು

ಆವರಿಸು.

ಆಕೂತ

1. ಅಭಿಪ್ರಾಯ.

2. ಅಭಿಪ್ರಾಯವುಳ್ಳವನು.

ಆಕೃತಿ

1. ಆಕಾರ.

2. ಜೀವಿಗಳ ಬಾಹ್ಯಾಕಾರ.

3. ದೇಹ.

4. ಬುಡಕಟ್ಟು.

5. ವರ್ಣವೃತ್ತಗಳಲ್ಲಿ ಇಪ್ಪತ್ತೆರಡನೆಯ ಛಂದಸ್ಸು.

6. ಆಕೃತಿಮ.

ಆಕೃತಿಮ(ಮಾ)

ಒಂದು ಭಾಷೆಯ ಅರ್ಥಪೂರ್ಣವಾದ ಅತ್ಯಂತ ಚಿಕ್ಕಘಟಕ.

ಆಕೃಷ್ಟ

1. ಆಕರ್ಷಿತವಾದುದು.

2. ಆಕರ್ಷಿತನಾದವನು.

ಆಕೃಷ್ಟ

ಆಕರ್ಷಿಸಲ್ಪಟ್ಟ.

ಆಕೆ

1. ಊರೆ.

2. ಎದುರಿಸುವಿಕೆ.

ಆಂಕೆಗೆಯ್

1. ಊರೆಯಾಗಿ ಕೊಡು.

2. ನಮಸ್ಕರಿಸು.

ಆಂಕೆಗೊಡು

ಊರೆಕೊಡು.

ಆಕೆವಾಳ

1. ಪ್ರತಿಭಟಿಸುವವನು.

2. ಶೌರ್ಯ.

ಆಕ್ರಂದನ

ಗಟ್ಟಿಯಾಗಿ ಅಳುವುದು.

ಆಕ್ರಂದಿಸು

ಗಟ್ಟಿಯಾಗಿ ಅಳು.

ಆಕ್ರಮಣ(ಣೆ)

1. ಮೇಲೆ ಬೀಳುವುದು.

2. ದಾಳಿ ನಡೆಸುವುದು.

3. (ಮೇಲೆಬಿದ್ದು) ಕಿತ್ತುಕೊಳ್ಳುವುದು.

4. ಅತಿಕ್ರಮಿಸುವುದು.

5. ಆಕ್ರಮಿಸುವುದು.

ಆಕ್ರಮಿಸು

1. ಮೇಲೆಬೀಳು.

2. ವ್ಯಾಪಿಸು.

3. ಮೀರು.

4. ಹೆಜ್ಜೆಯಿಡು.

Search Dictionaries

Loading Results

Follow Us :   
  Download Bharatavani App
  Bharatavani Windows App