भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಆಖ್ಯಾತ

1. ಹೇಳಲ್ಪಟ್ಟ.

2. ಪ್ರಸಿದ್ಧವಾದ.

ಆಖ್ಯಾತಪದ

ಧಾತುವಿಗೆ ಆಖ್ಯಾತಪ್ರತ್ಯಯವು ಸೇರುವುದರಿಂದ ಆಗುವ ಪದ.

ಆಖ್ಯಾತಪ್ರತ್ಯಯ

ಪುರುಷ, ವಚನ ಮತ್ತು ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುಗಳಿಗೆ ಕಾಲವಾಚಕ ಪ್ರತ್ಯಯಗಳ ಮೇಲೆ ಹತ್ತುವ ಪ್ರತ್ಯಯ.

ಆಖ್ಯಾನ

1. ಹೇಳುವುದು.

2. ಹೆಸರು.

3. ಕಲ್ಪಿತ ಕಥೆ.

4. ಪುರಾಣ,ಇತಿಹಾಸಗಳಲ್ಲಿಯ ಕಥೆ,- ವೃತ್ತಾಂತ ವಿಶೇಷ.

5. ಮಹಾಭಾರತ ಮುಂತಾದ ಪೌರಾಣಿಕ ಗ್ರಂಥ.

ಆಖ್ಯಾಯಿಕೆ

ವಾಸ್ತವಿಕವಾಗಿ ಜರುಗಿದ ಕಥೆಯನ್ನು ಯಥಾರ್ಥವಾಗಿ ನಿರೂಪಿಸುವ ಒಂದು ಗದ್ಯಪ್ರಕಾರ.

ಆಖ್ಯೆ

1. ಹೆಸರು.

2. ಪ್ರಖ್ಯಾತಿ.

ಆಖ್ಯೇಯ

ಹೇಳಬೇಕಾದುದು.

ಆಗ

ಆ ಸಮಯದಲ್ಲಿ.

ಆಗಡ

ಕೆಟ್ಟ ಕೆಲಸ.

ಆಗಂತುಕ

1. ಹೊಸದಾಗಿ ಬಂದ ಅಪರಿಚಿತ.

2. ಅನಿರೀಕ್ಷಿತವಾಗಿ ಬಂದವನು.

ಆಗಂತುಕ

ಅನಿರೀಕ್ಷಿತವಾಗಿ ಬಂದ.

ಆಗಮ

1. ಬರುವುದು.

2. ಪೂರ್ವದಿಂದಲೂ ಬಂದ ಸಂಪ್ರದಾಯದ ಸಿದ್ಧಾಂತ ಗ್ರಂಥ,- ಶಾಸ್ತ್ರ.

3. ದೇವಪೂಜಾ ತಂತ್ರ ವಿಧಾನವನ್ನು ತಿಳಿಸುವ ಶಾಸ್ತ್ರ.

4. ಜ್ಞಾನ.

5. ಹಕ್ಕಿನ ದಸ್ತಾವೇಜು.

6. ವ್ಯಾಕರಣದಲ್ಲಿಸಂಧಿಯಾಗುವಾಗ ನಡುವೆ ಒಂದು ವರ್ಣ ಅಥವಾ ವರ್ಣಸಮುದಾಯವು ಹೊಸದಾಗಿ ಬಂದು ಸೇರುವುದು.

ಆಗಮಜ್ಞ

ಶಾಸ್ತ್ರಗಳನ್ನು ಚೆನ್ನಾಗಿ ತಿಳಿದವನು.

ಆಗಮನ

ಬರುವುದು.

ಆಗಮಿಕ

1. ಆಗಮಗಳನ್ನು ತಿಳಿದವನು.

2. ವಿಗ್ರಹ ಪ್ರತಿಷ್ಠೆ ಮೊದಲಾದ ಆಗಮ ಶಾಸ್ತ್ರವನ್ನು ಅರಿತವನು.

3. ದೇವಾಲಯದ ಅರ್ಚಕ.

4. ಆಗಮಕ್ಕೆ ಸಂಬಂಧಿಸಿದುದು.

ಆಗಮಿಕ

ಧಾರ್ಮಿಕ.

ಆಗಮಿಸು

ಬರು.

ಆಗಮೆ

ವ್ಯವಸಾಯ.

ಆಗರ

1. ಆಧಾರವಾದ ಸ್ಥಳ.

2. (ಉಪ್ಪಿನ) ಗಣಿ.

3. ಮನೆ.

4. ಸ್ಥಳ.

5. ತೋಟ.

ಆಗರ್ಭಶ್ರೀಮಂತ

ಹುಟ್ಟಿದಂದಿನಿಂದಲೂ ಐಶ್ವರ್ಯವಂತನಾಗಿರುವವನು.

Search Dictionaries

Loading Results

Follow Us :   
  Download Bharatavani App
  Bharatavani Windows App