भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಆಘೂರ್ಮಿಸು

ಅತಿಯಾಗಿ ಶಬ್ದವಾಗು.

ಆಘೋಷಣ

1. ಗಟ್ಟಿಯಾಗಿ ಕೂಗಿ ಸಾರುವುದು.

2. ಒಂದು ಬಗೆಯ ಚರ್ಮವಾದ್ಯ.

ಆಘೋಷಿಸು

ಗಟ್ಟಿಯಾಗಿ ಕೂಗು.

ಆಘ್ರಾಣ

ವಾಸನೆ ನೋಡುವುದು.

ಆಘ್ರಾಣಿತ

ವಾಸನೆ ನೋಡಿದ.

ಆಘ್ರಾಣಿಸು

ಮೂಸಿ ನೋಡು.

ಆಘ್ರಾತ

ಮೂಸಿ ನೋಡಿದುದು.

ಆಘ್ರಾತ

ವಾಸನೆ ನೋಡಿದ.

ಆಚಂದ್ರಾರ್ಕ

ಚಂದ್ರನೂ ಸೂರ್ಯನೂ ಇರುವವರೆಗೆ ಇರುವಂತಹುದು.

ಆಚಮನ

ಸಂಧ್ಯಾವಂದನೆ ಮುಂತಾದ ವೈದಿಕ ಕರ್ಮಗಳನ್ನು ಮಾಡುವ ಸಮಯದಲ್ಲಿ ಶುದ್ಧಿಗಾಗಿ ಅಂಗೈ ಗುಳಿಯಲ್ಲಿ ಶುದ್ಧೋದಕವನ್ನು ಮಂತ್ರಪೂರ್ವಕವಾಗಿ ಕುಡಿಯುವುದು.

ಆಚರಣ

1. ಅನುಸರಿಸುವುದು.

2. ಅಭ್ಯಾಸ.

ಆಚರಣೆ

ಅನುಸರಿಸುವುದು.

ಆಚರಿಸು

1. ನಡೆಸು.

2. ನಡೆ.

ಆಚಾರ

1. ಕಟ್ಟುಪಾಡು.

2. ಒಳ್ಳೆಯ ನಡತೆ.

ಆಚಾರದೂರ

ನಡತೆಗೆಟ್ಟವನು.

ಆಚಾರವಂತ

ಸಂಪ್ರದಾಯದ ಕಟ್ಟುಪಾಡುಗಳನ್ನು ಅನುಸರಿಸುವವನು.

ಆಚಾರಿ

1. ಆಚಾರವುಳ್ಳವನು.

2. ಕಮ್ಮಾರ, ಬಡಗಿ, ಅಕ್ಕಸಾಲಿಗ, ಶಿಲ್ಪಿ ಮುಂತಾದ ಕೆಲಸಗಾರರ ಕುಲಕ್ಕೆ ಸೇರಿದವನು ಮತ್ತು ಆ ಕಸುಬಿನವರ ಹೆಸರಿನ ಕೊನೆಗೆ ಸೇರುವ ಶಬ್ದ.

3. ಆಚಾರ್ಯ.

ಆಚಾರ್ಯ

1. ಗುರು.

2. ಪುರೋಹಿತ.

3. ವಿದ್ವಾಂಸರು, ಮತ ಪ್ರವರ್ತಕರು ಮೊದಲಾದವರ ಹೆಸರಿನ ಕೊನೆಯಲ್ಲಿ ಗೌರವ ಸೂಚಕವಾಗಿ ಸೇರಿಸುವ ಶಬ್ದ.

ಆಚಾರ್ಯಪುರುಷ

ಯಾವುದಾದರೂ ಒಂದು ಪದ್ಧತಿ ಅಥವಾ ಸಂಪ್ರದಾಯಕ್ಕೆ ಮೂಲಪುರುಷ.

ಆಚುಪೇಚು

ತೊಡಕು.

Search Dictionaries

Loading Results

Follow Us :   
  Download Bharatavani App
  Bharatavani Windows App