भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಆಚೆ

1. ಅತ್ತ ಕಡೆ.

2. ಹೊರಭಾಗ.

ಆಚ್ಛನ್ನ

ಮುಚ್ಚಲ್ಪಟ್ಟ.

ಆಚ್ಛಾದನ

1. ಮುಚ್ಚುವುದು.

2. ಹೊದಿಕೆ.

3. ಬಟ್ಟೆ.

4. ಮನೆಯ ಮೇಲ್ಛಾವಣಿಗೆ ಆಧಾರ ವಾದ ಮರದ ಪಟ್ಟಿ.

ಆಚ್ಛಾದಿತ

ಮರೆ ಮಾಡಿದ.

ಆಚ್ಛಾದಿಸು

ಮುಚ್ಚು.

ಆಜನ್ಮ

1. ಹುಟ್ಟಿದಂದಿನಿಂದ.

2. ಜೀವಿತಾವಧಿಯವರೆಗೆ.

ಆಜವಂಜವ

ಹುಟ್ಟುಸಾವುಗಳ ಪರಂಪರೆ.

ಆಜಾನುಬಾಹು

1. ನೇರವಾಗಿ ನಿಂತು ಇಳಿಬಿಟ್ಟರೆ ತನ್ನ ಮಂಡಿಯನ್ನು ಮುಟ್ಟುವಷ್ಟು ನೀಳವಾದ ತೋಳು.

2. ಮಂಡಿಯನ್ನು ಮುಟ್ಟುವಷ್ಟು ನೀಳ ತೋಳುಗಳುಳ್ಳವನು.

ಆಜಾನೇಯ

ಉತ್ತಮ ಜಾತಿಯ ಕುದುರೆ.

ಆಜಾರಿ

ರೋಗ.

ಆಜಿ

1. ಯುದ್ಧ.

2. ಯುದ್ಧರಂಗ.

3. ಪಣಕಟ್ಟಿ ಸ್ಪರ್ಧೆಯಿಂದ ಓಡುವುದು.

4. ಬೈಗುಳು.

ಆಜಿರಂಗ

ಯುದ್ಧಭೂಮಿ.

ಆಜೀವ

1. ಜೀವನೋಪಾಯ.

2. ಜೈನಸಾಧು.

ಆಜೀವ

ಜೀವವಿರುವವರೆಗೆ.

ಆಜೀವಕ

1. ಭಿಕ್ಷುಕ.

2. ಬೆತ್ತಲೆಯಾಗಿರುವ ಪರಿವ್ರಾಜಕ.

ಆಜೀವಪರ್ಯಂತ

ಜೀವವಿರುವವರೆಗೆ.

ಆಜೀವಸದಸ್ಯ

(ಸಂಘ ಸಂಸ್ಥೆಗಳಿಗೆ) ಬದುಕಿರುವವರೆಗೂ ಸದಸ್ಯನಾಗಿರುವವನು.

ಆಜುಬಾಜು

ಅಕ್ಕಪಕ್ಕ.

ಆಜ್ಞಾಪತ್ರ

ಅಪ್ಪಣೆ ಚೀಟಿ.

ಆಜ್ಞಾಪನ

ಅಪ್ಪಣೆ ಕೊಡುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App