भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಋಣಿ

1. ಸಾಲವುಳ್ಳವನು.

2. ಹಂಗಿಗೆ ಒಳಗಾದವನು.

ಋತ

1. ಸತ್ಯ.

2. ಧರ್ಮ.

ಋತು

1. ಎರಡೆರಡು ತಿಂಗಳುಗಳ ಕಾಲದ ಅವಧಿ.

2. ಸ್ತ್ರೀಯರ ಮುಟ್ಟು,- ರಜಸ್ಸು.

3. ಆರು ಎಂಬ ಸಂಖ್ಯೆಯ ಸಂಕೇತ.

ಋತುಶಾಂತಿ

(ಹಿಂದಿನ ಕಾಲದಲ್ಲಿ) ಮದುವೆಯಾದ ಹೆಣ್ಣು ಮೊದಲ ಬಾರಿಗೆ ಮುಟ್ಟಾದಾಗ ಮಾಡುತ್ತಿದ್ದ ಒಂದು ಶುಭ ಸಂಸ್ಕಾರ,- ಕರ್ಮ.

ಋತುಸಾರ್ವಭೌಮ

ಋತುಗಳ ಚಕ್ರವರ್ತಿ.

ಋತುಸ್ನಾತೆ

ಮುಟ್ಟಾದ ನಾಲ್ಕನೆಯ ದಿನ ಸ್ನಾನ ಮಾಡಿ ಶುದ್ಧಳಾದ ಹೆಂಗಸು.

ಋತುಸ್ರಾವ

ರಜಸ್ಸಿನ ಸ್ರಾವ.

ಋತ್ವಿಕ್ಕು

ಯಜ್ಞಪುರೋಹಿತ.

ಋತ್ವಿಜ

ಋತ್ವಿಕ್ಕು.

ಋದಂತ

ಋಕಾರಾಂತವಾದ ಶಬ್ದ.

ಋದ್ಧ

ಕೂಡಿ ಹಾಕಿದ ಅಥವಾ ರಾಶಿ ಮಾಡಿದ ಧಾನ್ಯ.

ಋದ್ಧ

ವೃದ್ಧಿ ಹೊಂದಿದ.

ಋದ್ಧಿ

1. ಅಭಿವೃದ್ಧಿ.

2. ಕೈಗೂಡುವಿಕೆ.

3. ಐಶ್ವರ್ಯ.

ಋದ್ಧಿಮಂತ

1. ಶ್ರೀಮಂತ.

2. (ಅಣಿಮಾದಿ ಸಿದ್ಧಿಗಳಿಂದ) ಪವಾಡಗಳನ್ನು ನಡೆಸುವ ಸಾಮಥ್ರ್ಯವುಳ್ಳವನು.

ಋಷಭ

1. ಗೂಳಿ.

2. (ಸಂಗೀತದ) ಸಪ್ತಸ್ವರಗಳಲ್ಲಿ ಎರಡನೆಯದು.

ಋಷಿ

1. ತಪಸ್ವಿ.

2. ಏಳು ಎಂಬ ಸಂಖ್ಯೆಯ ಸಂಕೇತ.

3. ಸಪ್ತರ್ಷಿ ಎಂಬ ನಕ್ಷತ್ರಮಂಡಲ.

ಋಷಿಋಣ

ಋಣತ್ರಯಗಳಲ್ಲಿ ಒಂದು.

ಋಷಿಧುರ್ಯ

ಋಷಿಗಳಲ್ಲಿ ಶ್ರೇಷ್ಠ.

ಋಷಿಪುತ್ರಿ

1. ಋಷಿಯ ಮಗಳು.

2. ಒಂದು ಬಗೆಯ ಸುಗಂಧ ಪತ್ರ.

ಋಷ್ಯಶೃಂಗ

1. ಜಿಂಕೆಯ ಕೋಡು.

2. ಒಬ್ಬ ಋಷಿಯ ಹೆಸರು.

Search Dictionaries

Loading Results

Follow Us :   
  Download Bharatavani App
  Bharatavani Windows App