भारतीय भाषाओं द्वारा ज्ञान

Knowledge through Indian Languages

Dictionary

Sankshipta Kannada Nighantu (Kannada Sahitya Parishattu)

Kannada Sahitya Parishattu

ಟೀಕುವರೆ

ವ್ಯಾಖ್ಯಾನವನ್ನು ಬರೆ.

ಟೀಕೆ

1. ಟೀಕು.

2. ಗುಣದೋಷ ವಿಮರ್ಶೆ.

3. ತಪ್ಪನ್ನು ಎತ್ತಿ ತೋರಿಸುವಿಕೆ.

4. ಕೊರಳಲ್ಲಿ ಧರಿಸುವ ಒಂದು ಬಗೆಯ ಚಿನ್ನದ ಆಭರಣ.

ಟೀಪಾಯಿ

1. ಮೂರುಕಾಲಿನ ಮಣೆ.

2. ಒಂದು ಬಗೆಯ ಕಾಲುಮಣೆ.

ಟೀವ

ಉದ್ದವಾದ ಬಾಲವುಳ್ಳ ಒಂದು ಬಗೆಯ ಪಕ್ಷಿ.

ಟುಂಟುಕ

ಕೆಳಮಟ್ಟದ.

ಟುಂಟುಕ

ಕ್ರೂರಿ.

ಟುಮಕಿ

1. ಒಂದು ಬಗೆಯ ಚರ್ಮ ವಾದ್ಯ.

2. ನೀರಿನಲ್ಲಿ ಎರಡೂ ಕೈಗಳಿಂದ ಸದ್ದಾಗುವಂತೆ ಹೊಡೆಯುವಿಕೆ.

ಟುಮುಕ

ಕುಳ್ಳಾಗಿ ದಪ್ಪನಾಗಿರುವವನು.

ಟುಮುಕು

ಒಂದು ಬಗೆಯ ಚರ್ಮವಾದ್ಯ.

ಟೆಕ್ಕೆ

1. ಬಾವುಟ.

2. ಖೋಟಾ ರತ್ನ.

ಟೆಕ್ಕೆಯ

ಟಕ್ಕೆಯ.

ಟೆಂಟಣಿಸು

1. ವಿರೋಧಿಸು.

2. ಉತ್ಸಾಹಪಡು.

3. ಅಂಜು.

4. ಆಧಾರವಾಗು.

5. ಒತ್ತಾಗಿ ಸೇರು.

6. ಉಂಟುಮಾಡು.

7. ಶೋಭಿಸು.

ಟೆಂಠಣಿಸು

1. ವಿರೋಧಿಸು.

2. ಅಂಜು.

3. ಒಟ್ಟಾಗಿ ಸೇರು.

4. ವ್ಯಾಕುಲಗೊಳ್ಳು.

ಟೆಪ್ಪರ

1. ಕುದುರೆ ಮೊದಲಾದುವುಗಳ ನಾಗಾಲೋಟ.

2. ಹಿಂಸೆ.

ಟೆಬ್ಬರ

ಹಿಂಸೆ.

ಟೆಬ್ಬರಿಸು

1. ಶಕ್ತಿಗುಂದಿಸು.

2. ಗಾಯಪಡಿಸು.

3. ಶಕ್ತಿಗುಂದು.

4. ಅಸಹ್ಯಪಡು.

ಟೇಕ

ಮೃದಂಗ, ತಬಲ, ಮದ್ದಳೆ ಮುಂತಾದ ವಾದ್ಯಗಳನ್ನು ಬಾರಿಸುವಾಗ ಬೆರಳಿನಿಂದ ಹಾಕುವ ಪೆಟ್ಟು.

ಟೊಂಕ

ಸೊಂಟ.

ಟೊಂಕಕಟ್ಟು

ಅಣಿಯಾಗು.

ಟೊಕಳಿ

1. ಪೊಳ್ಳಾದ ಹೊರಮರ.

2. ಕೈಲಾಗದವನು.

Search Dictionaries

Loading Results

Follow Us :   
  Download Bharatavani App
  Bharatavani Windows App