भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Dendritic Rock

ವೃಕ್ಷಾಕಾರ ಶಿಲೆ.
ವೃಕ್ಷದ ಆಕಾರದಲ್ಲಿರುವ, ತಾಮ್ರ ಅಥವಾ ಮ್ಯಾಂಗನೀಸ್ ಗಳ ಲೋಹದ ಆಕ್ಸೈಡ್ ಗಳು ಕೂಡಿ ಬಿದ್ದ ಶಿಲೆ.

Desalinization

ಚೌಳು ಲಯವಾಗುವಿಕೆ; ಲವಣ ರಹಿತವಾಗುವಿಕೆ.
ಮಣ್ಣಿನಲ್ಲಿರುವ ಕರಗುವ ಲವಣಗಳು ತೊಳೆದು, ಹೋಗುವಿಕೆ ಅಥವಾ ಕೊಚ್ಚಿ ಹೋಗುವಿಕೆ.

Desert Soil

ಮರುಭೂಮಿ ಮಣ್ಣು.
ಈ ಮಣ್ಣು, ಮೇಲ್ಭಾಗದಲ್ಲಿ ಸಾಧಾರಣ ಬಣ್ಣವುಳ್ಳದ್ದಾಗಿದ್ದು, ತಳದಲ್ಲಿ ಸುಣ್ಣದ ವಸ್ತುಗಳಿಂದ ಕೂಡಿರುತ್ತದೆ. ಕೆಲವೆಡೆ ಮಣ್ಣಿನ ತಳದಲ್ಲಿ ಗಟ್ಟಿ ಪದರ ಕಂಡು ಬರುತ್ತದೆ.

Dielectric Constant

ವಿದ್ಯುನ್ನಿಶ್ಚಿತಸ್ಥಿರ.
ಎರಡು ಧನ ಇಲ್ಲವೆ ಋಣ ಅಯಾನ್ ಗಳ ಮಧ್ಯದ ಆಕರ್ಷಣೆಯ ಬಲವನ್ನು ಕಡಿಮೆ ಮಾಡಲು ಒಂದು ವಸ್ತುವಿಗಿರುವ ಸಾಮರ್ಥ್ಯ.

Diffusion

ವ್ಯಾಪನ; ವಿಸರಣ.
ಅನಿಲಗಳು ಹರಡಿ, ಸುತ್ತ ಮುತ್ತಲಿನ ವಾತಾವರಣದೊಂದಿಗೆ ಬೆರೆಯುವಿಕೆ.

Displacement

ಸ್ಥಾನಪಲ್ಲಟ.
ಒಂದು ಮೂಲವಸ್ತು ಒಂದು ಸಂಯುಕ್ತದೊಡನೆ ವರ್ತಿಸಿ, ಆ ಸಂಯುಕ್ತದಲ್ಲಿ ಒಂದು ಮೂಲವಸ್ತುವನ್ನು ಹೊರಗೆಡಹಿ, ಅದರ ಸ್ಥಾನವನ್ನು ತಾನು ಆಕ್ರಮಿಸಿಕೊಂಡಿದ್ದರೆ, ಅಂತಹ ಕ್ರಿಯೆಯನ್ನು ಸ್ಥಾನ ಪಲ್ಲಟ ಎಂದು ಕರೆಯುತ್ತಾರೆ.

Dispersed Phase

ಪ್ರಸರಿಸಿದ ಹಂತ.
ನೈಜದ್ರಾವಣದಲ್ಲಿ ಅಸ್ಫಟಿಕ ಕಣಗಳು ಹೆಚ್ಚು ಚದುರಿರುವ ಹಂತ.

Dispersion

ಪ್ರಸರಣೆ.
ಸಂಯುಕ್ತ ವಸ್ತುಗಳಲ್ಲಿರುವ ಮೂಲವಸ್ತುಗಳು, ಬೇರೆ ಬೇರೆಯಾಗಿ ಚದುರಿರುವ ಸ್ಥಿತಿ.

Dissociation Constant

ವಿಯೋಗ ಸ್ಥಿರ.
ಸಮತೆಯನ್ನುಳಿಸಿಕೊಂಡು ಬರಲು, ಒಂದು ವಸ್ತುವಿನ ಅಣುಗಳ ಸಾಮರ್ಥ್ಯ ಮತ್ತು ಅವುಗಳ ವಿಯೋಗಜನಿತ ಅಯಾನ್ ಗಳ ಸಾಮರ್ಥ್ಯಗಳ ಮಧ್ಯೆ ಕಂಡು ಬರುವ ಸ್ಥಿರತೆಗೆ, ವಿಯೋಗ ಸ್ಥಿರ ಎಂದು ಹೆಸರು.

Distillation

ಭಟ್ಟಿ ಇಳಿಸುವಿಕೆ
ಒಂದು ದ್ರಾವಣದಲ್ಲಿನ ಬಹಳ ಮಟ್ಟಿನ ಕಶ್ಮಲಗಳನ್ನು, ದ್ರವವನ್ನು ಆವಿಯಾಗಿ ಪರಿವರ್ತಿಸುವ ಮೂಲಕ ಬೇರ್ಪಡಿಸುವ ಮತ್ತು ಆ ಆವಿಯನ್ನು ತಂಪುಮಾಡಿ ದ್ರವವನ್ನು ಪುನಃ ಪಡೆಯುವ ವಿಧಾನಕ್ಕೆ, ಭಟ್ಟಿ ಇಳಿಸುವಿಕೆ ಎಂದು ಹೆಸರು.

Disintegration

ವಿಘಟನಾಕ್ರಿಯೆ.
ಸ್ವಾಭಾವಿಕ ವಸ್ತುಗಳು, ಮಣ್ಣು, ಸಸ್ಯಉಳಿಕೆ ಮುಂತಾದವು ಭೌತಿಕ ಇಲ್ಲವೇ ರಾಸಾಯನಿಕ ಕ್ರಿಯೆಗಳಿಂದ ಒಡೆದು ಶಿಥಿಲವಾಗುವಿಕೆ.

Dispersion Ratio

ಪ್ರಸರಣ ಅನುಪಾತ
ಸಾಧಾರಣ ನೀರಿನಲ್ಲಿ ಪ್ರಸರಿಸಿ ಕಂಡುಹಿಡಿದ ಮಣ್ಣಿನ ಜೇಡಿಗೋಡುಗಳ ಮೊತ್ತವನ್ನು, ಭೌತಿಕ ವಿಶ್ಲೇಷಣೆಯಿಂದ ಕಂಡುಹಿಡಿದ ಜೇಡಿಗೋಡುಗಳ ಮೊತ್ತದಿಂದ ಭಾಗಿಸುವುದರಿಂದ ಸೂಚಿತವಾಗುವ ಪರಸ್ವರ ಸಂಬಂಧ. ಇದನ್ನು ಶೇಕಡ ರೀತಿಯಲ್ಲಿ ಸೂಚಿಸುವುದು ವಾಡಿಕೆಯಲ್ಲಿದೆ.

Dolomite

ಡೊಲೊಮೈಟ್; ಕ್ಯಾಲ್ಸಿಯಂ ಮೆಗ್ನೀಸಿಯಂ ಕಾರ್ಬೊನೇಟ್.
ಸ್ವಾಭಾವಿಕವಾಗಿ ದೊರೆಯುವ ಈ ಖನಿಜ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟ್ ಗಳಿಂದ ಕೂಡಿರುತ್ತದೆ.

Double Salt

ದ್ವಿಲವಣ.
ಸಮಾನ ಲವಣಗಳ ಪ್ರಬಲ ಮಿಶ್ರಣಗಳನ್ನು ಕೂಡಿಸಿ, ಸ್ಫಟಿಕೀಕರಣದಿಂದ ದೊರಕಿಸಿಕೊಳ್ಳುವ ಲವಣಗಳಿಗೆ ದ್ವಿಲವಣಗಳೆಂದು ಕರೆಯುತ್ತಾರೆ.

Drainage

ಬಸಿಯುವಿಕೆ; ಚರಂಡಿ; ಗಟಾರ.
ಜೌಗು ಭೂಮಿಗಳಲ್ಲಿ ಆಳವಾದ ಚರಂಡಿಗಳನ್ನು ತೋಡಿದಾಗ, ನೀರು ಬಸಿದು ಭೂಮಿ ಸುಧಾರಿಸುತ್ತದೆ.

Dried Blood

ಒಣರಕ್ತ
ಒಣಗಿಸಿದ ಈ ರಕ್ತ, ಶೇಕಡ 1

Drought

ಅನಾವೃಷ್ಟಿ ; ಶುಷ್ಕತೆ.
ಒಂದೇ ಸಮನೆ 1-2 ತಿಂಗಳು ಮಳೆ ಬಾರದಿದ್ದಲ್ಲಿ ಖುಷ್ಕಿ ಬೆಳೆಗಳು ಒಣಗಿ ನಷ್ಟವಾಗುತ್ತದೆ. ಇಂತಹ ಪರಿಸ್ಥಿತಿಗೆ, ಅನಾವೃಷ್ಟಿ ಎಂದು ಹೆಸರು.

Dry Farming

ಖುಷ್ಕಿ ಬೇಸಾಯ; ಒಣ ಬೇಸಾಯ.
ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ, ತೇವ ಶೇಖರಣೆ ಮತ್ತು ಸೂಕ್ತ ಸಸ್ಯ ಜಾತಿಗಳ ಬಳಕೆಯಿಂದ ಮಾಡುವ ಬೇಸಾಯ.

Duff

ಡಫ್; ಕಾಡುಮಣ್ಣು ಸಾವಯವ ಮೇಲ್ಫದರ.
ಸಾವಯವ ಪದಾರ್ಥಗಳ ಹೊದಿಕೆಯುಳ್ಳ ಭೂಮಿಯ ಮೇಲ್ಪದರ.

Dyre

ಕಡಿದು ಅಡ್ಡಗೋಡೆ ಅಥವಾ ಬಂಡೆ; ಭೂಸರಣ ಬಿರುಕು.
ಅಗ್ನಿ ಶಿಲೆಯ ಗೋಡೆಯಾಕಾರದ ವಸ್ತು; ಭೂಮಿಯಲ್ಲಿ ಸಾಗಿಬಂದ ವಸ್ತುಗಳಿಂದ ತುಂಬಿದ ಬಂಡೆಬಿರುಕುಗಳು.

Search Dictionaries

Loading Results

Follow Us :   
  Download Bharatavani App
  Bharatavani Windows App