भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Anion

ಋಣ ಅಯಾನ್
ಋಣ ವಿದ್ಯುತ್ತನ್ನು ಹೊಂದಿರುವ ಕಣ.

Anaerobic Respiration

ನಿರ್ವಾತ ಶ್ವಾಸೋಚ್ಛ್ವಾಸ.
ಆಮ್ಲಜನಕವಿಲ್ಲದೆ ಉಸಿರಾಡುವಿಕೆ.

Antagonism

ಪ್ರತಿಜೀವಿ ನಿರೋಧತ್ವ.
ಕೆಲವು ಅಸಹಾಯಕ ಸ್ಥಿತಿಗಳಿಂದ ಸೂಕ್ಷ್ಮಜೀವಿಗಳು ತಮ್ಮ ಪ್ರತಿಜೀವಿಗಳ ಬೆಳವಣಿಗೆಗೆ ಅಥವಾ ಚಟುವಟಿಕೆಗೆ ಅಡಚಣೆಯನ್ನುಂಟುಮಾಡುವ ಘಟನೆ.

Antagonist

ಪ್ರತಿಜೀವಿ ನಿರೋಧಿ.
ಒಂದು ಜೀವಿಯ ಬೆಳವಣಿಗೆಗೆ ಅಥವಾ ಚಟುವಟಿಕೆಗಳಿಗೆ ಅಡಚಣೆಯನ್ನುಂಟು ಮಾಡುವ ಜೀವಿ.

Antagonistic Substance

ನಿರೋಧಕ ವಸ್ತು
ಪ್ರತಿ ಜೀವಿಯ ಕ್ರಿಯೆಯನ್ನು ತಟಸ್ಥಗೊಳಿಸುವ ವಸ್ತು.

Anti-auxin

ಆ್ಯಂಟಿ ಆಕ್ಸಿನ್; ಪ್ರತಿಸಸ್ಯಚೇತಕ; ಪ್ರತಿ ಚೋದಕ ಸ್ರಾವ.
ಸಸ್ಯಗಳ ಮೇಲೆ ಸಾವಯವ ಚೋದಕ ಸ್ರಾವ ಉಂಟುಮಾಡುವ ಪರಿಣಾಮವನ್ನು ತಡೆಯುವ ವಸ್ತು.

Anti-biosis

ಪ್ರತಿಜೀವನ.
ಎರಡು ಜೀವಿಗಳು ಒಂದೆಡೆ ಇರುವಲ್ಲಿ, ಒಂದರ ಇರುವಿಕೆ ಮತ್ತೊಂದರ ಬೆಳೆವಣಿಗೆಗೆ ಹಾನಿಕರವಾಗಿರುವ ಪರಿಸ್ಥಿತಿ.

Anti-biotic

ಜೀವಿಮಾರಕ; ಪ್ರತಿಜೀವಿ.
ಸೂಕ್ಷ್ಮ ಜೀವಿಗಳಿಂದ ಉತ್ಪತ್ತಿಯಾಗುವ ಈ ವಸ್ತು ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕುಂದಿಸುವ ಹಾಗೂ ನಾಶಮಾಡುವ ಶಕ್ತಿಯುಳ್ಳದ್ದಾಗಿರುತ್ತದೆ.

Anti-body

ಪ್ರತಿದೇಹ.
ಪ್ರತಿವಿಷಜನಕವನ್ನು ಪ್ರಾಣಿಯ ದೇಹಕ್ಕೆ ಸೇರಿಸಿದಾಗ ಪ್ರತಿಯಾಗಿ ಆ ಪ್ರಾಣಿಯಲ್ಲಿ ಉತ್ಪತ್ತಿಯಾಗುವ ಒಂದು ನಿರ್ದಿಷ್ಟ ಸಂರಕ್ಷಕ ವಸ್ತು.

Antigen

ಪ್ರತಿವಿಷಜನಕ.
ಪ್ರತಿವಿಷಜನಕವನ್ನು ಪ್ರಾಣಿಯ ದೇಹಕ್ಕೆ ಸೇರಿಸಿದಾಗ ಪ್ರತಿದೇಹ ಉತ್ಪತ್ತಿಯಾಗುತ್ತದೆ.

Antidotic

ವಿಷಹಾರಿ ; ಪ್ರತಿವಿಷ.
ಸೂಕ್ಷ್ಮ ಜೀವಿಗಳಿಂದ ಉತ್ಪತ್ತಿಯಾಗುವ ಈ ವಸ್ತು, ವಿಷಪೂರಿತ ಬ್ಯಾಕ್ಟೀರಿಯಾಗಳ ಹಾನಿಯನ್ನು ತಡೆಗಟ್ಟುವ ಶಕ್ತಿಯುಳ್ಳದ್ದಾಗಿರುತ್ತದೆ.

Anti serum

ರಕ್ತನೀರು.
ಪ್ರತಿದೇಹ ವಸ್ತುವನ್ನೊಳಗೊಂಡ ಒಂದು ಪ್ರಾಣಿಯ ರಕ್ತನೀರು.

Apo-enzyme

ಅಪೋಕಿಣ್ವ.
ಕಿಣ್ವದಲ್ಲಿರುವ ಪ್ರೋಟೀನ್ ಭಾಗ. ಇದು ಕಿಣ್ವದ ನಿರ್ದಿಷ್ಟ ಕ್ರಿಯೆಯನ್ನು ನಿರ್ಣಯಿಸುವುದರಲ್ಲಿ ಸಹಾಯಕವಾಗುತ್ತದೆ.

Apparent Specific Gravity

ದೃಷ್ಟಸಾಪೇಕ್ಷ ಸಾಂದ್ರತೆ.
ಒಂದು ನಿರ್ದಿಷ್ಟ ಗಾತ್ರದ ರಂಧ್ರ ಸ್ಥಳಸಹಿತ ಮಣ್ಣಿನಸಾಂದ್ರತೆ. ಇದು ಯಾವಾಗಲೂ ನೈಜ ಸಾಪೇಕ್ಷ ಸಾಂದ್ರತೆಗಿಂತ ಕಡಿಮೆಯಾಗಿರುತ್ತದೆ.

Arable Land

ಸಾಗುವಳಿ ಭೂಮಿ.
ಬೆಳೆ ತೆಗೆಯಲು ಉಪಯೋಗಕ್ಕೆ ಬರುವ ಭೂಮಿ.

Arid Climate

ಶುಷ್ಕ ವಾಯುಗುಣ.
ಕಡಿಮೆ ಮಳೆಯಾಗುವ ಪ್ರದೇಶದ ವಾಯುಗುಣ. ಮರಳುಗಾಡು ಭೂಮಿಯ ವಾಯುಗುಣ.

Atom

ಪರಮಾಣು
ರಾಸಾಯನಿಕ ಕ್ರಿಯೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಭಾಗವಹಿಸುವ ಅತ್ಯಂತ ಸಣ್ಣ ಮೂಲಕಣ.

Atomic Theory

ಪರಮಾಣು ಸಿದ್ಧಾಂತ.
ಪ್ರಪಂಚದಲ್ಲಿರುವ ಎಲ್ಲ ಪದಾರ್ಥಗಳೂ ಕೆಲವು ಮೂಲವಸ್ತುಗಳ ಸಂಯೋಗದಿಂದ ಆಗಿವೆ; ಪ್ರತಿಯೊಂದು ಮೂಲವಸ್ತುವೂ ಒಂದು ನಿರ್ದಿಷ್ಟ ಭಾರವುಳ್ಳ ಕಣಗಳ ಸಮುದಾಯ; ಈ ಕಣಗಳೇ ರಸಾಯನ ಕ್ರಿಯೆಯಲ್ಲಿ ಭಾಗವಹಿಸುವುವು. ಇವು ಪರಮಾಣುವಾದದ ಮುಖ್ಯ ಅಂಶಗಳು.

Atomic Number

ಪರಮಾಣು ಸಂಖ್ಯೆ.
ಎಲ್ಲ ಮೂಲವಸ್ತುಗಳ ಪರಮಾಣು ಕೇಂದ್ರಗಳು ಧನ ವಿದ್ಯುದಂಶಗಳನ್ನು ಹೊಂದಿವೆ. ನಿರ್ದಿಷ್ಟ ಸಂಖ್ಯೆಯ ಪ್ರೋಟಾನುಗಳನ್ನು ಹೊಂದಿವೆ. ಈ ಸಂಖ್ಯೆಗೆ ಅನುಗುಣವಾಗಿ ಪರಮಾಣುವಿನ ವ್ಯೂಹದಲ್ಲಿ ಎಲೆಕ್ಟ್ರಾನ್ ಗಳಿರುತ್ತವೆ. ಇವುಗಳ ಸಂಖ್ಯೆಗೆ ಪರಮಾಣು ಸಂಖ್ಯೆ ಎಂದು ಹೆಸರು.

Autolysis

ಆಟೋಲೈಸಿಸ್ ; ಸ್ವಯಂಜೀರ್ಣತೆ; ಸ್ವಯಂನಾಶನ.
ಸಜೀವ ಸೂಕ್ಷಜೀವಿಗಳು, ಮಣ್ಣಿನಲ್ಲಿರುವ ನಿರ್ಜೀವ ಸೂಕ್ಷ್ಮಜೀವಿಗಳನ್ನು ತಿಂದು ಜೀರ್ಣಿಸಿಕೊಳ್ಳುವ ವಿಧಾನ.

Search Dictionaries

Loading Results

Follow Us :   
  Download Bharatavani App
  Bharatavani Windows App