भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Chemical Combination

ರಾಸಾಯನಿಕ ಸಂಯೋಗ.
ಎರಡು ಅಥವಾ ಹೆಚ್ಚು ವಸ್ತುಗಳು ಸೇರಿ ಒಂದೇ ಒಂದು ವಸ್ತುವನ್ನು ಕೊಡುವ ರಾಸಾಯನಿಕ ಬದಲಾವಣೆಗೆ, ರಾಸಾಯನಿಕ ಸಂಯೋಗ ಎಂದು ಹೆಸರು.

Chemical Decomposition

ರಾಸಾಯನಿಕ ವಿಘಟನೆ.
ಒಂದು ವಸ್ತುವನ್ನು ಕಾಯಿಸಿದಾಗ ಅದು ವಿಭಜನೆಯಾಗಿ ಎರಡು ಅಥವಾ ಹೆಚ್ಚಿನ ವಸ್ತುಗಳುಂಟಾದರೆ, ಆ ರಾಸಾಯನಿಕ ಕ್ರಿಯೆಗೆ ರಾಸಾಯನಿಕ ವಿಘಟನೆಯೆಂದು ಹೆಸರು.

Chestnut Soils

ಚೆಸ್ಟ್ ನಟ್ ಮಣ್ಣುಗಳು; ಕಂದು ಮಣ್ಣುಗಳು.
ಜೋನಲ್ ವಲಯದ ಪಂಗಡಕ್ಕೆ ಸೇರಿದ ಈ ಮಣ್ಣು ಕಂದು ಬಣ್ಣದ ಮೇಲ್ಪದರವನ್ನು ಹೊಂದಿದ್ದು, ತಳದಲ್ಲಿ ಸಾಧಾರಣವಾದ ಬಣ್ಣದ ಮಣ್ಣಿನಿಂದ ಕೂಡಿರುತ್ತದೆ.

Chlorophyll

ಪತ್ರಹರಿತ್ತು.
ಸಸ್ಯದ ಹಸಿರು ಬಣ್ಣಕ್ಕೆ ಮೂಲಕಾರಣವಾದ ಈ ವಸ್ತು, ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಸಹಾಯಕವಾಗುತ್ತದೆ.

Chlorosis

ಹರಿತ್ ರೋಗ.
ಅವಶ್ಯವಾದಷ್ಟು ಪೋಷಕ ದೊರೆಯದಿರುವ ಕಾರಣ, ಸಸ್ಯಗಳಲ್ಲಿ ಪತ್ರಹರಿತ್ತು ಅಭಿವೃದ್ಧಿಯಾಗದಿರುವ ಸ್ಥಿತಿ. ಎಲೆಗಳು ಹಳದಿಯಾಗುವ ಸ್ಥಿತಿ.

Clay

ಜೇಡಿ.
ಮಣ್ಣಿನ ಅತಿ ಸೂಕ್ಷ್ಮ ಕಣ. ಈ ಕಣಗಳ ವ್ಯಾಸ 0.002 ಮಿ. ಮೀ. ಗಿಂತ ಕಡಿಮೆ ಇದ್ದು, ಈ ವಸ್ತು ಅಸ್ಫಟಿಕ ಗುಣಗಳನ್ನು ಪ್ರದರ್ಶಿಸುತ್ತದೆ.

Clay Loam

ಜೇಡಿಗೋಡು.
ಶೇಕಡ 27 ರಿಂದ 40 ರಷ್ಟು ಜೇಡಿ ಮತ್ತು 20 ರಿಂದ 40 ರಷ್ಟು ಮರಳನ್ನುಳ್ಳ ಮಣ್ಣು.

Clay Minerals

ಜೇಡಿ ಖನಿಜಗಳು.
ಇವು ಹೈಡ್ರಸ್ ಅಲ್ಯೂಮಿನಿಯಂ ಸಿಲಿಕೇಟ್ ಗಳಾಗಿರುತ್ತವೆ. ಸಿಲಿಕಾ ಮತ್ತು ಅಲ್ಯೂಮಿನಗಳು ಇರುವಿಕೆಯ ಆಧಾರದ ಮೇಲೆ, ಜೇಡಿ ಖನಿಜಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ;
ಮಾಂಟ್ ಮೊರಿಲ್ಲೊನೈಟ್, ಕೆಯೋಲಿನೈಟ್, ಇಲ್ಲೈಟ್ ಮತ್ತು ವರ್ಮಿಕ್ಕು ಲೈಟ್.

Clay Pan

ಜೇಡಿ ಪದರ.
ಗಟ್ಟಿಯಾದ, ಬಿಕ್ಕಟ್ಟಾದ ಮತ್ತು ಸಾಧಾರಣ ಅವ್ಯಾಪ್ಯತೆಯುಳ್ಳ ಜೇಡಿ ಶೇಖರಣೆಯ ಪದರ. ಇದು ಸಾಧಾರಣವಾಗಿ ಉಳುಮೆಯ ಆಳಕ್ಕಿಂತ ಕೆಳಗಡೆ ಕಂಡು ಬರುತ್ತದೆ.

Co-efficient of Viscosity

ಸಿರುಗ್ದತ್ವದ ಗುಣಕ.
ದ್ರವದ ಮಾಧ್ಯಮದಲ್ಲಿ ಒಂದು ಸೆಂಟಿಮೀಟರ್ ಅಂತರವಿರುವ ಎರಡು ಸಮಾನಾಂತರ ಸಮತಲಗಳ ಮಧ್ಯೆ ವೇಗ ವ್ಯತ್ಯಾಸದ ಎಕಮಾನತೆಯನ್ನುಳಿಸಿಕೊಂಡು ಬರಲು ಏಕ ಮಾನ ಕ್ಷೇತ್ರಕ್ಕೆ ಬೇಕಾಗುವ ಬಲ.

Co-efficient of Compressibility

ಕುಗ್ಗುವಿಕೆಯ ಗುಣಕ.
ಒಂದು ವಸ್ತುವಿನ ಮೇಲೆ ಒಂದು ನಿರ್ದಿಷ್ಟ ಶಕ್ತಿಯ ಒತ್ತಡವನ್ನು ಪ್ರಯೋಗಿಸಿದಾಗ, ಆ ವಸ್ತುವಿನ ಸ್ಥಿತಿಯಲ್ಲಿ ಉಂಟಾಗುವ ಗಾತ್ರ ಬದಲಾವಣೆ.

Co-efficient of Thermal Conductivity

ಉಷ್ಣವಾಹಕತ್ವದ ಗುಣಕ.
ಒಂದು ಸೆಕೆಂಡಿಗೆ ಏಕಮಾನ ಪ್ರಮಾಣದಲ್ಲಿ ಏಕಮಾನ ಖಂಡ ವಿಸ್ತಾರದ ಮೂಲಕ ಸಮಸ್ಥಿತಿಯಲ್ಲಿ ಹರಿಯುವ ಉಷ್ಣಕ್ಕೆ, ವಸ್ತುವಿನ ಉಷ್ಣವಾಹಕತ್ವದ ಗುಣಕವೆಂದು ಹೆಸರು.

Coagulation

ಹೆಪ್ಪುಗಟ್ಟುವಿಕೆ.
ರಾಡಿಯಾಗಿರುವ ಮಣ್ಣಿನ ಸೂಕ್ಷ್ಮಕಣಗಳು ವಿದ್ಯುದ್ವಿಭಜನೀಯಗಳ ಪ್ರಭಾವದಿಂದ, ಉದಾಹರಣೆಯಾಗಿ ಸೋಡಿಯಂ ಕ್ಲೋರೈಡ್ ಉಪ್ಪನ್ನು ಸೇರಿಸಿದಾಗ ಗರಣೆಗಟ್ಟುತ್ತದೆ. ಇಂಥ ಕ್ರಿಯೆಗೆ ಹೆಪ್ಪುಗಟ್ಟುವಿಕೆ ಎಂದು ಹೆಸರು.

Colligative Property

ಸಮಾವೇಶ ಗುಣ.
ಕೆಲವು ವಸ್ತುಗಳ ಗುಣಧರ್ಮಗಳು ಅವುಗಳಲ್ಲಿರುವ ಕಣ (ಅಣು ಅಥವಾ ಪರಮಾಣು) ಗಳ ಪ್ರಕೃತಿ ಮತ್ತು ಗಾತ್ರವನ್ನು ಅವಲಂಬಿಸಿರದೆ, ಸಂಖ್ಯೆಯನ್ನು ಮಾತ್ರ ಅವಲಂಬಿಸಿರುತ್ತವೆ. ಉದಾಹರಣೆ : ದ್ರವಬಾಷ್ಪಒತ್ತಡ, ಕುದಿಯುವ ಬಿಂದುವಿನ ಏರಿಕೆ ಇತ್ಯಾದಿ.

Colloid

ಕಲಿಲ ಅಥವಾ ಅಸ್ಫಟಿಕ ಕಣ.
0.001 ಮಿ. ಮೀ. ಗಿಂತ ಕಡಿಮೆ ವ್ಯಾಸವಿರುವ ಕಣಗಳು. ಕಣಗಳು ಚದುರಿ ವಿಕಿರಣವಾಗಿದ್ದು, ಮೇಲ್ಮೈಕ್ರಿಯೆ ಅದರ ಪ್ರಧಾನ ಗುಣ.

Colloidal Phosphate

ಕಲಿಲ ಅಥವಾ ಅಸ್ಫಟಿಕ ಫಾಸ್ಪೇಟ್.
ಸೂಕ್ಷ್ಮ ಕಣಗಳಿಂದೊಡಗೂಡಿದ ಒಂದು ಕಚ್ಚಾ ಖನಿಜದ ಪಾಸ್ಫೇಟ್ ಅಥವಾ ಪಾಸ್ಫೇಟ್ ಜೇಡಿ.

Colluvium

ಜಾರುಮಣ್ಣು ; ಗಾಳಿಮಣ್ಣು.
ಹೆಚ್ಚು ಇಳಿಜಾರು ಪ್ರದೇಶದಲ್ಲಿ ಶೇಖರವಾಗಿರುವ ಶಿಲೆಯ ಹರಳುಗಳನ್ನುಳ್ಳ ಮಣ್ಣು.

Coloumb

ಕೊಲಂಬ್.
ಒಂದು ಆಂಪಿಯರ್ ವಿದ್ಯುತ್ ಪ್ರವಾಹವು ಒಂದು ಸೆಕೆಂಡಿನಲ್ಲಿ ಪ್ರವಹಿಸುವ ವಿದ್ಯುಚ್ಛಕ್ತಿಯ ಮೊತ್ತ.

Cohesion

ಸಂಸಕ್ತಿ.
ಒಂದು ದ್ರವದಲ್ಲಿರುವ ಕಣಗಳ ಪರಸ್ಪರ ಆಕರ್ಷಣೆಯಿಂದಾಗಿ ಪಲ್ಲಟಕ್ಕೆ ತೋರುವ ಪ್ರತಿಭಟನೆಯ ಗುಣ.

Compost

ಕಾಂಪೋಸ್ಟ್.
ಸಸ್ಯ ಹಾಗೂ ಪ್ರಾಣಿಗಳ ಉಳಿಕೆಗಳನ್ನೊಳಗೊಂಡ, ಕಳಿತ, ತುಂಬುಸಾವಯವ ಗೊಬ್ಬರ.

Search Dictionaries

Loading Results

Follow Us :   
  Download Bharatavani App
  Bharatavani Windows App