भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Addition Compound

ಸಂಕಲಿತ ಸಂಧಿಸಿದ ಸಂಯುಕ್ತ ವಸ್ತು.
ಸಂಕಲನಾ ಪ್ರತಿಕ್ರಿಯೆಯಿಂದುಂಟಾದ ಸಂಯುಕ್ತ ವಸ್ತು.

Addition Reaction

ಸಂಕಲನಾಪ್ರತಿಕ್ರಿಯೆ; ಸಂಧಿ ಪ್ರತಿಕ್ರಿಯೆ.
ಎರಡು ಅಥವಾ ಹೆಚ್ಚು ಅಣುಗಳು ಒಟ್ಟುಗೂಡಿ ಒಂದು ವಸ್ತುವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ.
ಉದಾಹರಣೆ : ಗಂಧಕ ಮತ್ತು ಆಮ್ಲಜನಕ ಒಟ್ಟುಗೂಡಿ ಗಂಧಕದ ಡೈಆಕ್ಸೈಡ್ ಆಗುವಿಕೆ.

Adsorption

ಅಡ್ ಸಾರ್ ಪ್ ಷನ್, ಮೇಲ್ಮೈಗ್ರಹಣ; ಅನಿಲ ಮಂದಗಟ್ಟುವಿಕೆ.
ಪದರದ ಎಲ್ಲೆಯಲ್ಲಿ ವಸ್ತು ಮಂದಗಟ್ಟುವಿಕೆ. ಮಂದಗಟ್ಟಲು ಎಡೆಮಾಡಿ ಕೊಡುವ ಭಾಗಕ್ಕೆ ಅಡ್ ಸಾರ್ಬೆಂಟ್ ಎಂದು ಹೆಸರು.

Aeolian Soil

ಗಾಳಿಸಾಗು ಮಣ್ಣು.
ಗಾಳಿಯಿಂದ ಸಾಗಿಸಲ್ಪಟ್ಟು, ಬೇರೊಂದೆಡೆನಿಂತ ಮಣ್ಣು.

Aeration

ವಾಯುಪೂರಣ.
ಮಣ್ಣಿನಲ್ಲಿರುವ ಗಾಳಿ, ವಾತಾವರಣದಲ್ಲಿರುವ ಗಾಳಿಯೊಡನೆ ವಿನಿಮಯವಾಗುವಿಕೆ.

Aerobic Respirtion

ವಾಯುಸನ್ನಿಧಿ ಉಸಿರಾಡುವಿಕೆ.
ವಾಯುವಿನಲ್ಲಿರುವ ಆಮ್ಲಜನಕವನ್ನು ಉಪಯೋಗಿಸಿಕೊಂಡು ಉಸಿರಾಡುವಿಕೆ.

Affinity

ಆಕರ್ಷಣೆ.
ಮೂಲಧಾತುಗಳು ಒಂದರೊಡನೊಂದು ರಾಸಾಯನಿಕ ಸಂಯೋಗವಾಗುವ ಪ್ರವೃತ್ತಿ.

Agent

ಕಾರಕ.
ರಾಸಾಯನಿಕ ಪ್ರಕ್ರಿಯೆಗಳನ್ನು ಕ್ರಿಯಾಶಕ್ತಗೊಳಿಸುವ ವಸ್ತು.

Agglutinin

ಪ್ರತಿಜೀವಿ ಅಂಟುಕಾರಕತೆ.
ಬ್ಯಾಕ್ಟೀರಿಯಾ ಅಥವಾ ಇತರ ಕಣಗಳನ್ನು ಅಂಟು ಪದಾರ್ಥವನ್ನಾಗಿ ಮಾರ್ಪಡಿಸುವ ಸಾಮರ್ಥ್ಯ.

Aggregate

ಸಮಷ್ಟಿ.
ಮಣ್ಣುಕಣಗಳ ಒಕ್ಕೂಟ.

Aggregation

ಸಮಷ್ಟೀಕರಣ.
ಮಣ್ಣು ಕಣಗಳು ಒಟ್ಟಾಗಿ ಸೇರುವ ಅಥವಾ ಸಂಯುಕ್ತ ಕಣಗಳಾಗುವ ವಿಧಾನ.

Agricultural Geology

ಕೃಷಿ ಭೂಗರ್ಭ ಶಾಸ್ತ್ರ.
ಶಿಲಾ ಗುಣಧರ್ಮ, ಮಣ್ಣು ಉತ್ಪಾದನೆಯಲ್ಲಿ ಖನಿಜಗಳ ಪಾತ್ರ ಮುಂತಾದ ವಿಷಯಗಳನ್ನು ಚರ್ಚಿಸುವ ಭೂಗರ್ಭ ಶಾಸ್ತ್ರದ ವಿಭಾಗ.

Air Capacity

ಹವಾ ಸಾಮರ್ಥ್ಯ.
ಮಣ್ಣು ನೀರಿನಲ್ಲಿ ಪೂರ್ತಿ ತೊಯ್ದಾಗ ಅದರಲ್ಲಿ ಉಳಿಯುವ ಗಾಳಿಯ ಮೊತ್ತ. ಇದು ಸಾಮಾನ್ಯವಾಗಿ ಮಣ್ಣಿನ ಸಂಯುಕ್ತಗಳ ಮಧ್ಯಾಂತರವನ್ನು ಸೂಚಿಸುತ್ತದೆ.

Alcohol

ಆಲ್ಕೋಹಾಲ್; ಮಧ್ಯಸಾರ.
ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳಿಂದ ಉತ್ಪತ್ತಿಯಾಗುವ ವಸ್ತು. ಅದರಲ್ಲಿ ಒಂದು ಅಥವಾ ಹೆಚ್ಚು ‘H’ ಬದಲು ‘OH’ ಅಥವಾ ಹೈಡ್ರಾಕ್ಸಿಲ್ ಗುಂಪು ಇರುತ್ತದೆ.

Aldehyde

ಆಲ್ಡಿಹೈಡ್.
ಆಲ್ಕೋಹಾಲ್ ಗಳಿಂದ ಉತ್ಪತ್ತಿಯಾದ ಹಾಗೂ ‘CHO’ ಕ್ರಿಯಾಸಮುದಾಯವುಳ್ಳ ಒಂದು ವರ್ಗದ ಸಾವಯವ ಸಂಯುಕ್ತ ವಸ್ತು.

Allotropy

ಬಹುರೂಪತೆ.
ಪರಮಾಣುಗಳ ಅಥವಾ ಅಣುಗಳ ವಿನ್ಯಾಸ ವ್ಯತ್ಯಾಸದಿಂದಾಗಿ ಕೆಲವು ಮೂಲ ವಸ್ತುಗಳು ಒಂದಕ್ಕಿಂದ ಹೆಚ್ಚು ರೂಪದಲ್ಲಿರುವ ವಿಶಿಷ್ಟ ಗುಣ.

Alloys

ಮಿಶ್ರಲೋಹಗಳು.
ಎರಡು ಅಥವಾ ಹೆಚ್ಚು ಲೋಹಗಳ ಮಿಶ್ರಣದಿಂದುಂಟಾದ ಸಂಯುಕ್ತ ವಸ್ತುಗಳು.

Alkali

ಕ್ಷಾರ.
ನೀರಿನಲ್ಲಿ ಕರಗಿ ಸುಡುವ ಗುಣವುಳ್ಳ, ಆಮ್ಲವನ್ನು ನಿರಾಮ್ಲಗೊಳಿಸುವ ವಸ್ತು.
ಇದು ಸಾಬೂನಿನಂತೆ ನುಣುಪುಳ್ಳ ಕೆಂಪುಲಿಟ್ ಮಸ್ ಕಾಗದವನ್ನು ನೀಲಿಯಾಗಿ ಪರಿವರ್ತಿಸುತ್ತದೆ.

Alkali Soil

ಕ್ಷಾರಮಣ್ಣು.
ಸಸ್ಯಗಳ ಬೆಳವಣಿಗೆಗೆ ತೊಂದರೆಯಾಗುವಂತೆ ಹೆಚ್ಚಿನ ಮಟ್ಟದ ಕ್ಷಾರೀಯತೆ ಇರುವ ಮಣ್ಣು. ಇದರಲ್ಲಿ ಶೇಕಡ 15 ಕ್ಕೂ ಹೆಚ್ಚು ಕ್ಷಾರದ ವಿನಿಮಯ ಸಾಧ್ಯ.
ಉದಾಹರಣೆ : ಸೋಡಿಯಂ ಇರುವ ಮಣ್ಣು.

Alkaline Soil

ಕ್ಷಾರೀಯ ಮಣ್ಣು.
ಕ್ಷಾರ ಪ್ರತಿಕ್ರಿಯೆಯುಳ್ಳ ಅಂದರೆ 7 ಕ್ಕಿಂತ ಹೆಚ್ಚು pH ಆಮ್ಲಸೂಚಿಯುಳ್ಳ (ಆಮ್ಲಾಂಶ) ಮಣ್ಣು.

Search Dictionaries

Loading Results

Follow Us :   
  Download Bharatavani App
  Bharatavani Windows App