भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Boiling Point

ಕುದಿಯುವ ಬಿಂದು.
ದ್ರಾವಣದ ಬಾಷ್ಪ ಒತ್ತಡವು ಹೊರಗಿನ ಒತ್ತಡಕ್ಕೆ ಸಮನಾಗಿರುವ ಉಷ್ಣತೆ.

Boyle’s Law

ಬಾಯಲ್ ನ ನಿಯಮ.
ಉಷ್ಣವು ನಿಯತವಾಗಿದ್ದಾಗ, ಒಂದು ನಿರ್ದಿಷ್ಟ ಜಡತ್ವದ ಅನಿಲದ ಗಾತ್ರವು ಅದರ ಒತ್ತಡಕ್ಕೆ ವಿಲೋಮಾನುಪಾತವಾಗಿರುತ್ತದೆ. ಸೂತ್ರರೂಪದಲ್ಲಿ ಈ ಕೆಳಗಿನಂತೆ ಹೇಳಬಹುದು.
V α 1/p
V = ನಿರ್ದಿಷ್ಟ ಜಡತ್ವ ಅನಿಲದ ಗಾತ್ರ.
P = ಒತ್ತಡ.

Bog Soil

ಬಾಗ್ ಮಣ್ಣು ; ಕೊಳಚೆ ಮಣ್ಣು.
ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು ಮೇಲ್ಭಾಗದಲ್ಲಿ ಕಸ ಅಥವಾ ದರಗು ಮಣ್ಣನ್ನು ಹೊಂದಿದ್ದು, ಕೆಳಭಾಗದಲ್ಲಿ ದರಗು ಮಣ್ಣಿನಿಂದ ಕೂಡಿರುತ್ತದೆ. ಶೀತವಲಯಗಳಲ್ಲಿ, ಜೌಗು ಅಥವಾ ಕೊಳಚೆ ಪ್ರದೇಶಗಳಲ್ಲಿ, ಈ ಮಣ್ಣು ಹೆಚ್ಚಾಗಿ ಕಂಡು ಬರುತ್ತದೆ.

Bone Meal

ಮೂಳೆ ಪುಡಿ.

Bone Meal, Raw

ಕಚ್ಚಾ ಮೂಳೆ ಪುಡಿ.
ಕಚ್ಚಾ ಮೂಳೆಗಳನ್ನು ಚೆನ್ನಾಗಿ ಪುಡಿಮಾಡಿ ತಯಾರಿಸಿದ ಗೊಬ್ಬರ.

Bone Meal, Steamed

ಹಬೆ (ಉಗಿ) ಗೊಳಿಸಿದ ಮೂಳೆಪುಡಿ.
ಒತ್ತಡ ತುಂಬಿದ ಹಬೆ (ಉಗಿ)ಯಲ್ಲಿ ಸಂಸ್ಕರಿಸಿದ ಮೂಳೆಯನ್ನು ಪುಡಿ ಮಾಡುವುದರಿಂದ ದೊರೆಯುವ ಗೊಬ್ಬರ.

Broad Base Terrace

ವಿಶಾಲತಳಜಗತಿಭೂಮಿ,
ಮಣ್ಣು ಕೊಚ್ಚಣೆಯನ್ನು ತಡೆಯಲು ಇಳಿಜಾರಿಗೆ ಅಡ್ಡಲಾಗಿ ಎತ್ತರ ಸ್ವಲ್ಪವೇ ಇದ್ದು ಅಗಲ ಹೆಚ್ಚಿರುವ ಜಗತಿ ಭೂಮಿ.

Brown Soils

ಕಂದುಮಣ್ಣುಗಳು.
ಇವುಗಳು ಮೇಲ್ಭಾಗದಲ್ಲಿ ಕಂದುಮಣ್ಣಿನ ತೆಳುವಾದ ಪದರವನ್ನು ಹೊಂದಿದ್ದು, ತಳದಲ್ಲಿ ಕಾರ್ಬೊನೇಟ್ ಶೇಖರವಾಗಿರುವ ಪದರವನ್ನುಳ್ಳದ್ದಾಗಿರುತ್ತವೆ.

Brown Forest Soils

ಕಾಡಿನ ಕಂದುಮಣ್ಣುಗಳು.
ಇಂಟ್ರಸೋನಲ್ ಗುಂಪಿಗೆ ಸೇರಿದ ಈ ಮಣ್ಣು, ಕಂದು ಬಣ್ಣದ ಮೇಲ್ಮಣ್ಣನ್ನು ಹೊಂದಿದ್ದು, ಹೇರಳವಾಗಿ ಹ್ಯೂಮಸ್ ನಿಂದ ಕೂಡಿರುತ್ತದೆ. ಈ ಮಣ್ಣು ಸ್ವಲ್ಪ ಹುಳಿಯಾಗಿದ್ದು, ಕಬ್ಬಿಣ ಮತ್ತು ಅಲ್ಯೂಮಿನಿಯಂಗಳ ಪ್ರಮಾಣ ಕಡಿಮೆ ಇರುತ್ತದೆ.

Buffer Capacity

ಕಾಪುತಡೆಸಾಮರ್ಥ್ಯ.
ಹುಳಿ ಅಥವಾ ಕ್ಷಾರ ಹೆಚ್ಚುವಿಕೆಗೆ ಪ್ರತಿಯಾಗಿ ತೋರುವ, ಕಾಪುತಡೆ ಕ್ರಿಯೆಯ ಸಾಮರ್ಥ್ಯ.

Buffer Solution

ಕಾಪುದ್ರವ.
ಕಾದಿರಿಸಿದ ಆಮ್ಲತೆ ಮತ್ತು ಪ್ರತ್ಯಾಮ್ಲತೆಯನ್ನು ಹೊಂದಿರುವ ಈ ದ್ರವ, ಒಂದು ಕಾಲದವರೆಗೆ ಸ್ಥಿರಪ್ರಮಾಣದ ಪಿ.ಎಚ್ ಅನ್ನು ಉಳಿಸಿಕೊಂಡು ಬರುತ್ತದೆ.

Buoyancy

ಪ್ಲವನತೆ.
ತನ್ನಲ್ಲಿ ಮುಳುಗಿರುವ ವಸ್ತುವಿನ ಮೇಲೆ ದ್ರವವು ಅರೋಪಿಸುವ ಮೇಲ್ಮುಖ ಒತ್ತಡ ಬಲಕ್ಕೆ, ಹೆಪ್ಲವನತೆ ಎಂದು ಹೆಸರು.

Bulk Density

ಸ್ಥೂಲಸಾಂದ್ರತೆ.
ಏಕಮಾನ ಗಾತ್ರದ ದ್ರವ್ಯ ಪರಿಮಾಣ. ಸ್ಥೂಲ ಗಾತ್ರದ ಮಣ್ಣನ್ನು 105°C ಶಾಖಕ್ಕೆ ಒಣಗಿಸಿದ ಮೇಲೆ ಕಂಡುಹಿಡಿಯಲ್ಪಡುತ್ತದೆ.

Bulk Specific Gravity

ಸ್ಥೂಲ ವಿಶಿಷ್ಟ ಸಾಂದ್ರತೆ.
ಮಣ್ಣಿನ ಸ್ಥೂಲಸಾಂದ್ರತೆಗೂ ಮತ್ತು ಅದೇ ಗಾತ್ರದ ನೀರಿನ ಪರಿಮಾಣಕ್ಕೂ ಇರುವ ಪರಸ್ಪರ ಸಂಬಂಧ.

Burried Profile

ಹೂತಪ್ರೊಫೈಲ್.
ಮಣ್ಣು ಕೊರೆಯುವಿಕೆಯಿಂದಾಗಿ, ಅಕ್ಕ ಪಕ್ಕದ ಮಣ್ಣಿನ ವಸ್ತುಗಳು ಚಲಿಸಿ ಬಂದು ಶೇಖರವಾಗಿ ಮುಚ್ಚಿಹೋಗಿರುವ, ಒಂದು ಮಣ್ಣಿನ ಸಾಮಾನ್ಯ ಪ್ರೊಫೈಲ್.

Search Dictionaries

Loading Results

Follow Us :   
  Download Bharatavani App
  Bharatavani Windows App