भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Crop Residue

ಬೆಳೆಯುಳಿಕೆ (ಬೆಳೆ ಅವಶೇಷ).
ಸಸ್ಯ ಕೊಯ್ದ ಮೇಲೆ, ಭೂಮಿಯಲ್ಲಿ ಉಳಿಯುವ ಸಸ್ಯವಸ್ತು.

Cropping System

ಬೆಳೆ ಪದ್ಧತಿ.
ಒಂದು ಭೂಮಿಯಲ್ಲಿ, ಯೋಜಿತ ಕ್ರಮದಂತೆ ಒಂದಲ್ಲ ಒಂದು ಬೆಳೆ ತೆಗೆಯುವ ವ್ಯವಸ್ಥೆ.

Crumb Structure

ವಿಚೂರ್ಣಾಕೃತಿ.
ಮಣ್ಣಿನ ಸೂಕ್ಷ್ಮ ಕಣಗಳು ಒಟ್ಟುಗೂಡಿ, ಕಾಳುಕಾಳಾಗಿ, ಹದವಾದ ಮಣ್ಣಿನ ಸ್ಥಿತಿಗೆ ಕಾರಣವಾಗುತ್ತದೆ.

Crust Formation

ಹೆಕ್ಕಳಾಗುವಿಕೆ ; ಹೆಪ್ಪು ನಿರ್ಮಾಣ.
ತೇವವಾದ ಮಣ್ಣು ಒಣಗಿದಾಗ, ಅದರ ಮೇಲ್ಮೈಯಲ್ಲಿ ಹೆಪ್ಪುಗಟ್ಟಿದ ಪದರಕ್ಕೆ ಹೆಕ್ಕಳು ಎನ್ನುತ್ತಾರೆ ಜೇಡಿಮಣ್ಣಿನಲ್ಲಿ ಅಥವಾ ಕ್ಷಾರಭೂಮಿಗಳಲ್ಲಿ ಇಂಥ ಹೆಕ್ಕಳಿಕೆ ಉಂಟಾಗುವುದು ಸಾಮಾನ್ಯ.

Crystal

ಹರಳು; ಸ್ಫಟಿಕ.
ಖನಿಜಗಳು ಹೊಂದುವ, ಒಂದು ನಿರ್ದಿಷ್ಟವಾದ ಘನ ರೇಖಾ ರೂಪ.

Crystalattice Water

ಹರಳು ಜಾಲಂದ್ರ ನೀರು.
ಒಡೆದ ಹರಳ ಚೌಕಟ್ಟುಗಳ ತೆರೆದ ಮೊನೆಗಳ ಮೇಲಿರುವ, Al, Si, ಅಥವಾ O ಗಳ ನಿರ್ಬಂಧಾಕರ್ಷಕ ಶಕ್ತಿಗಳ ಸಹಾಯದಿಂದ ಹೀರಲ್ಪಟ್ಟಿರುವ ನೀರು.

Cumulose Soil

ಸಾವಯವ ಶೇಖರಣಾಮಣ್ಣು.
ವಿಘಟನೆಯಾದ ಸಾವಯವ ವಸ್ತುಗಳ ಶೇಖರಣೆಯಿಂದುಂಟಾದ ಮಣ್ಣು.

Curie

ಕ್ಯೂರಿ.
ಒಂದು ಸೆಕೆಂಡಿಗೆ 3.7 X 10¹⁰ ನಂತೆ ವಿದಳನವಾಗುವ ವಿಕಿರಣ ವಸ್ತುವಿನ ತೂಕ.

Cynamide

ಸೈನಮೈಡ್.
CaCn₂, Ca (OH)₂ ಮತ್ತು ವಿಮುಕ್ತ ಇಂಗಾಲದೊಂದಿಗೆ, ಸುಣ್ಣ ಕಲ್ಲು ಹಾಗೂ ಕಲ್ಲಿದ್ದಲಿನ ಅಶುದ್ಧ ವಸ್ತುಗಳನ್ನೊಳಗೊಂಡ ಪ್ರೋಟೀನ್ ರಹಿತ ಸಾವಯವ ಸಾರಜನಕ ವಸ್ತು.

Search Dictionaries

Loading Results

Follow Us :   
  Download Bharatavani App
  Bharatavani Windows App