भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Ecology

ಜೀವ ಪರಿಸ್ಥಿತಿ ಶಾಸ್ತ್ರ.
ಸಸ್ಯ ಮತ್ತು ಪ್ರಾಣಿಗಳಿಗೆ ಹಾಗೂ ಅವುಗಳ ಸುತ್ತಲ ಸನ್ನಿವೇಶದೊಡನೆ ಇರುವ ಸಂಬಂಧ. ಅವುಗಳ ಶೀಲ ಸ್ವಭಾವ, ಜೀವನ ರೀತಿ ಮುಂತಾದವುಗಳನ್ನು ಕುರಿತ ವಿಮರ್ಶೆ.

Edaphology

ಸಸ್ಯೋಪಯೋಗ ಅಥವಾ ಸಸ್ಯಾಧಾರ ಮಣ್ಣು ಶಾಸ್ತ್ರ.
ಸಸ್ಯಗಳ ಬೆಳವಣಿಗೆಯ ಮೇಲೆ ಮಣ್ಣಿನ ಪ್ರಭಾವವನ್ನು ವಿವರಿಸುವ ಮಣ್ಣು ವಿಜ್ಞಾನ.

Elasticity

ಸ್ಥಿತಿಸ್ಥಾಪಕತ್ವ; ಸ್ಥಿತಿಸ್ಥಾಪನಾಶಕ್ತಿ.
ಒಂದು ವಸ್ತು ತನ್ನ ಆಕಾರ ಬದಲಾವಣೆಯನ್ನು ವಿರೋಧಿಸುವ ಮತ್ತು ಪುನರ್ ಪಡೆಯುವ ಗುಣ.

Elastic Limit

ಸ್ಥಿತಿಸ್ಥಾಪನಾಮಿತಿ.
ಸ್ಥಿರವಾದ ಬದಲಾವಣೆಯನ್ನುಂಟುಮಾಡುವ ತೀರಾ ಕಡಿಮೆ ಒತ್ತಡ.

Electric Field

ವಿದ್ಯುತ್ ಕ್ಷೇತ್ರ.
ಒಂದು ಕ್ಷೇತ್ರದ ಮೇಲೆ ಹೇರಲ್ಪಟ್ಟ ವಿದ್ಯುತ್ ಬಲ.

Electrical Potential

ವಿದ್ಯುತ್ ಪ್ರಚ್ಛನ್ನತೆ.
ವಿದ್ಯುತ್ ಕ್ಷೇತ್ರದಲ್ಲಿ ಒಂದು ಏಕಮಾನ ವಿದ್ಯುತ್ಕಣವು ಹೊಂದಿರುವ ಪ್ರಚ್ಛನ್ನ, ಶಕ್ತಿಗೆ ವಿದ್ಯುತ್ ಪ್ರಚ್ಛನ್ನತೆ ಎಂದು ಹೆಸರು.

Electro Potential Difference

ವಿದ್ಯುತ್ ಪ್ರಚ್ಛನ್ನಾಂತರ.
ವಿದ್ಯುತ್ ಕ್ಷೇತ್ರದಲ್ಲಿ ಒಂದು ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಏಕಮಾನ ವಿದ್ಯುತ್ ಕಣವನ್ನು ಚಲಿಸಲು ಪ್ರಯೋಗಿಸಬೇಕಾದ ಕೆಲಸಕ್ಕೆ ವಿದ್ಯುತ್ ಪ್ರಚ್ಛನ್ನಾಂತರ ಎಂದು ಹೆಸರು.

Electro Valency

ವಿದ್ಯುತ್ ಸಂಯೋಗ ಸಾಮರ್ಥ್ಯ.
ರಾಸಾಯನಿಕ ಕ್ರಿಯೆಯಲ್ಲಿ ಪರಮಾಣುಗಳಲ್ಲಿ ಇಲೆಕ್ಟ್ರಾನ್ ಗಳ ವರ್ಗಾವಣೆಯಿಂದ, ಪರಸ್ಪರ ವಿರುದ್ಧ ವಿದ್ಯುದಂಶವುಳ್ಳ ಪರಮಾಣುಗಳಲ್ಲಿ ಆಕರ್ಷಣದಿಂದುಂಟಾದ ಸಂಯೋಗ ಶಕ್ತಿ.

Electromotive Force

ವಿದ್ಯುಚ್ಛಾಲಕ ಶಕ್ತಿ ; ವಿದ್ಯುದ್ವಾಹಕ ಬಲ.
ಒಂದು ಆಕಾರದಿಂದ ಒಂದು ಏಕಮಾನ ವಿದ್ಯುತ್ ಪ್ರವಾಹವನ್ನು ಎಳೆಯುವಾಗ, ಅದು ಒದಗಿಸುವ ಶಕ್ತಿಯ ದರಕ್ಕೆ ವಿದ್ಯುದ್ವಾಹಕ ಶಕ್ತಿ ಎಂದು ಹೆಸರು.

Electrolysis

ವಿದ್ಯುದ್ವಿಭಜನೆ ; ವಿದ್ಯುದ್ವಿಶ್ಲೇಷಣೆ.
ಕೆಲವು ಸಂಯುಕ್ತ ಪದಾರ್ಥಗಳು ದ್ರಾವಣ ರೂಪದಲ್ಲಿದ್ದಾಗ, ವಿದ್ಯುದ್ವಾಹಕಗಳಾಗಿ ವರ್ತಿಸುತ್ತವೆ. ಹೀಗೆ ದ್ರಾವಣಗಳ ಮೂಲಕ ವಿದ್ಯುತ್ ಹರಿದಾಗ, ಕೆಲವು ರಾಸಾಯನಿಕ ಕ್ರಿಯೆಗಳುಂಟಾಗಿ ಸಂಯುಕ್ತ ವಸ್ತುಗಳು ವಿಭಜಿಸಲ್ಪಡುತ್ತವೆ. ವಿದ್ಯುಚ್ಛಕ್ತಿಯಿಂದಾಗುವ ಈ ರಾಸಾಯನಿಕ ವಿಭಜನೆಗೆ ವಿದ್ಯುದ್ವಿಭಜನೆ, ಎಂದು ಹೆಸರು.

Electrolyte

ವಿದ್ಯುದ್ವಿಭಜನೀಯ ; ವಿದ್ಯುದ್ವಿಶ್ಲೇಷ್ಯ
ವಿದ್ಯುದ್ವಿಭಜನೆಯಲ್ಲಿ ಉಪಯೋಗಿಸುವ ದ್ರಾವಣಕ್ಕೆ, ವಿದ್ಯುದ್ವಿಭಜನೀಯ ಎಂದು ಹೆಸರು.

Electrodes

ವಿದ್ಯುದ್ವಾರಗಳು; ವಿದ್ಯುದ್ವಾಹಗಳು.
ದ್ರಾವಣದಲ್ಲಿ ಅದ್ದಿದ ವಿದ್ಯುತ್ ಪ್ರವಾಹವು, ಪ್ರವೇಶಿಸುವ ಮತ್ತು ನಿರ್ಗಮನ ಸಾಗುವ ಫಲಕಗಳು.

Electro motive Series

ವಿದ್ಯುತ್ ವಾಹಕ ಶ್ರೇಣಿ.
ಋಣಾಂಶಗಳನ್ನು ಕಳೆದುಕೊಂಡು, ಅಯಾನ್ ರೂಪಕ್ಕೆ ಬರುವ ಲೋಹಗಳ ಅವರೋಹಣ ಪ್ರವೃತ್ತಿ ಈ ಕೆಳಗಿನಂತೆ ಇದೆ.
K>Ca>Na>Mg>Al Zn>Fe>Sn>Pb>H>Cu>Ag>Hg>Au.

Electron

ಋಣ ವಿದ್ಯುತ್ ಕಣ ಅಥವಾ ಋಣಾಣು
9.038X10-²⁸ ಗ್ರಾಂ ಭಾರ, 2X10-¹³ ಸೆಂಟಿ ಮೀಟರ್ ತ್ರಿಜ್ಯ ಮತ್ತು 4.774X10-¹⁰ ವಿದ್ಯುತ್ ಸ್ಥಿರ ಪ್ರಮಾಣದ ಮೌಲ್ಯವುಳ್ಳ, ವಿರೋಧ ಶಕ್ತಿಯುಳ್ಳ ಪರಮಾಣುಗಳ ಉಪಕರಣಗಳು.

Electro Static Bond

ಸ್ಥಿರ ವಿದ್ಯುತ್ ಬಂಧನ.
ವಿದ್ಯುತ್ ಕ್ಷೇತ್ರದ ಪ್ರತಿಕ್ರಿಯೆಯಿಂದಾಗಿ ಒಟ್ಟಾಗಿರುವ ಅಥವಾ ಚದುರಿರುವ ಅಣುಗಳಲ್ಲಿ ಕಂಡುಬರುವ ಎರಡು ಪರಮಾಣುಗಳು ಅಥವಾ ಎರಡು ಗುಂಪಿನ ಪರಮಾಣುಗಳಲ್ಲಿ ಬಂಧನ.

Electro Static Unit

ಸ್ಥಿರ ವಿದ್ಯುತ್ ಮೂಲಮಾನ.
ಎಲೆಕ್ಟ್ರಾನ್ ಮತ್ತು ಪ್ರೋಟಾನ್ ಗಳ ಪೂರಣವನ್ನು ವ್ಯಕ್ತಪಡಿಸುವ ಮೂಲಮಾನ.

Element

ಮೂಲವಸ್ತು.
ಒಂದೇ ಪರಮಾಣು ಸಂಖ್ಯೆಯ ಪರಮಾಣುಗಳಿಂದ ಮಾತ್ರವೇ ರಚಿತವಾಗಿರುವ, ಒಂದು ವಸ್ತು.

Eluviation

ಎಲ್ಯೂವಿಯೇಷನ್; ಅಧೋಗಮನ.
ಬಸಿಯುವ ನೀರಿನ ಮೂಲಕ, ಮಣ್ಣಿನ ವಸ್ತುಗಳು ಅಧೋಮುಖವಾಗಿ ಚಲಿಸುವಿಕೆ.

Elutriation Method

ಎಲ್ಯೂಟ್ರಿಯೇಷನ್ ವಿಧಾನ.
ನೀರಿನ ಚಲನೆಯಿಂದ ಮಣ್ಣಿನ ಕಣಗಳನ್ನು ಬೇರೆ ಬೇರೆ ಗಾತ್ರದ ಗುಂಪುಗಳಾಗಿ ಬೇರ್ಪಡಿಸುವ ಒಂದು ಯಾಂತ್ರಿಕ ವಿಶ್ಲೇಷಣೆ.

Emulsoid

ಪಯಸ್ಯತೆ.
ಅಸ್ಫಟಿಕ ಕಣಗಳ ಚದುರಿಕೆ ವಿಭಜನೆಯ ವಾಹಕಕ್ಕೆ ಆಕರ್ಷಣೆ ತೋರಿ ದ್ರಾವಣವಾದಾಗ, ಅಂತಹ ವ್ಯವಸ್ಥೆಗೆ ಪಯಸ್ಯತೆ ಎಂದು ಹೆಸರು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App