भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Gay Lussac’s Law

ಗೇಲುಸ್ಸಾಕನ ನಿಯಮ.
ಒಂದೇ ಉಷ್ಣತೆ ಹಾಗೂ ಒತ್ತಡಗಳ ಪರಿಸ್ಥಿತಿಯಲ್ಲಿ ಅನಿಲಗಳು ತಮ್ಮಲ್ಲಿ ವರ್ತಿಸಿದರೆ, ವರ್ತಿಸಿದ ಹಾಗೂ ಸಿದ್ಧ ಅನಿಲಗಳ ಗಾತ್ರಗಳ ಪ್ರಮಾಣ (ಅನುಪಾತ) ಗಳು ಪೂರ್ಣಾಂಕಗಳಲ್ಲಿರುತ್ತವೆ.

Geology

ಭೂ ವಿಜ್ಞಾನ.
ಭೂಮಿ ಮತ್ತು ಇತರ ಗ್ರಹಗಳಿಗೆ ಹಾಗೂ ಸೂರ್ಯನಿಗೆ ಇರುವ ಸಂಬಂಧವನ್ನು ಬಿಟ್ಟು, ಭೂಮಿಯ ವಿವಿಧ ವಿಷಯಗಳನ್ನು ಚರ್ಚಿಸುವ ವಿಜ್ಞಾನ.

Germicide

ಕ್ರಿಮಿನಾಶಕ.
ರೋಗಕಾರಕ ಜೀವಿಗಳನ್ನು ಕೊಲ್ಲುವ ವಸ್ತು.

Glacial Soil

ಹಿಮ ಮಣ್ಣು; ಮಂಜು ಮಣ್ಣು.
ಮಂಜು ಕರಗಿ ಪ್ರವಾಹವಾಗಿ ಹರಿಯುವುದರಿಂದ ಸಾಗಿಸಲ್ಪಟ್ಟ ವಸ್ತುಗಳಿಂದುಂಟಾದ ಮಣ್ಣು.

Gravitational Water

ಗುರುತ್ವಾಕರ್ಷಿತ ನೀರು.
ಭೂಮಿಯ ಆಕರ್ಷಣೆಯ ಪ್ರಭಾವದಿಂದಾಗಿ, ಮಣ್ಣಿನಲ್ಲಿ ನಿಲ್ಲದೆ ತಳಮುಖವಾಗಿ ಹರಿದು ಹೋಗುವ ನೀರು.

Ground Water

ಭೂ ಅಂತರ್ಗತಜಲ
ನೆಲಮಟ್ಟದ ಕೆಳಗಿನ ರಂಧ್ರಾವರಣವನ್ನು ತುಂಬಿರುವ ನೀರು.

Green Leaf Manure

ಹಸುರೆಲೆ ಗೊಬ್ಬರ.
6-8 ವಾರಗಳ ಕಾಲ ಬೆಳೆಸಿದ ಅಪ್ಸೆಣಬು, ಹುರುಳಿ, ಹಲಸಂದೆಯಂತಹ ಹಸುರು ಸಸ್ಯ ವಸ್ತು ಇಲ್ಲವೇ ಹೊಂಗೆ, ಗ್ಲಿರಿಸಿಡಿಯಾ ಮುಂತಾದ ಮರಗಳಿಂದ ಕತ್ತರಿಸಿದ ಹಸಿರೆಲೆ ವಸ್ತು ಇವನ್ನು ಭೂಮಿಗೆ ಸೇರಿಸಿದಾಗ ಅದರ ಫಲವತ್ತತೆ ಹೆಚ್ಚುತ್ತದೆ.

Great Soil Groups

ಮಣ್ಣಿನ ಪ್ರಧಾನ ಗುಂಪುಗಳು.
ಮಣ್ಣಿನ ವರ್ಗೀಕರಣದ ಒಂದು ಹಂತ. ಇದು ಒಂದೇ ವಿಧವಾದ ಗುಣಧರ್ಮಗಳನ್ನುಳ್ಳ ಒಂದು ಅಥವಾ ಹೆಚ್ಚು ಕುಟುಂಬಗಳನ್ನೊಳಗೊಂಡಿರುತ್ತದೆ.

Granular Fertilizer

ಹರಳಾಕೃತಿಯ ರಸಾಯನಿಕ ಗೊಬ್ಬರ.
ಸುಮಾರು 1/10 ಅಂಗುಲ ವ್ಯಾಸವುಳ್ಳ ಹರಳುಗಳಿಂದ ಕೂಡಿದ ರಾಸಾಯನಿಕ ಗೊಬ್ಬರ.

Ground Lime Stone

ಸುಣ್ಣ ಕಲ್ಲು ಪುಡಿ.
ಕ್ಯಾಲ್ಸಿಯಂ ಅಥವಾ ಡಾಲೊಮೈಟ್ ಸುಣ್ಣಕಲ್ಲನ್ನು ಪುಡಿಮಾಡಿ, 10 ಮೆಷ್ ಗಳಿರುವ ಜರಡಿಯಲ್ಲಿ ಸೋಸಿದಾಗ, ಜರಡಿಯ ಮೂಲಕ ಹಾದು ಹೋಗುವ ವಸ್ತು.

Guano

ಗುಆನೋ; ಹಕ್ಕಿ ಗೊಬ್ಬರ.
ಪೆರು ದೇಶದಲ್ಲಿ ದೊರೆಯುವ ಒಂದು ಜಾತಿಯ ಹಕ್ಕಿಗಳ ಹಿಕ್ಕೆ. ಇದು ಒಂದು ಉತ್ಕೃಷ್ಟ ಗೊಬ್ಬರ.

Search Dictionaries

Loading Results

Follow Us :   
  Download Bharatavani App
  Bharatavani Windows App