भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Hard Pan

ಗಟ್ಟಿ ಪದರ; ಮಣ್ಣಿನ ಗಟ್ಟಿಸ್ತರ.
ಗಟ್ಟಿ ಅಥವಾ ಜಿಗಟು ಮಣ್ಣಿನ ಪದರ. ಈ ಮಣ್ಣು ಮರಳು, ಜೇಡಿ ಕಬ್ಬಿಣದ ಆಕ್ಸೈಡ್, ಸಿಲಿಕಾ ಅಥವಾ ಕ್ಯಾಲ್ಸಿಯಂ ಕಾರ್ಬೊನೇಟ್ ಗಳಿಂದ ಕೂಡಿರುತ್ತದೆ.

Half Bog Soils

ಅರೆಬಾಗ್ ಮಣ್ಣುಗಳು
ಇಂಟ್ರಾಸೋನಲ್ ಗುಂಪಿಗೆ ಸೇರಿದ ಈ ಮಣ್ಣು, ಮೇಲ್ಭಾಗದಲ್ಲಿ ಎಲೆಕಸ ಅಥವಾ ದರಗಿನಿಂದ ಕೂಡಿರುತ್ತದೆ.

Heat of Combustion

ದಹನಶಾಖ; ದಹನೋಷ್ಣ.
ಒಂದು ಗ್ರಾಂ ಅಣುಮೊತ್ತದ ಮೂಲ ವಸ್ತು ಇಲ್ಲವೆ ಸಂಯುಕ್ತ ವಸ್ತುವು ಸಂಪೂರ್ಣವಾಗಿ ದಹಿಸಿದಾಗ ಉತ್ಪತ್ತಿಯಾಗುವ, ಉಷ್ಣತೆಯ ಮೊತ್ತ.

Heat of Reaction

ಪ್ರತಿಕ್ರಿಯಾ ಶಾಖ; ಪ್ರತಿ ಕ್ರಿಯೋಷ್ಣ.
ಒಂದು ರಾಸಾಯನಿಕ ಕ್ರಿಯೆಯು ಒಂದು ಗ್ರಾಂ ಅಣು ಮೊತ್ತದ ವರ್ತಿಸುವ ವಸ್ತುಗಳಲ್ಲಿ ಉತ್ಪತ್ತಿಯಾಗುವ ಉಷ್ಣತೆ.

Heat of Solution

ದ್ರಾವಣಶಾಖ; ದ್ರಾವಣೋಷ್ಣ.
ಒಂದು ಗ್ರಾಂ ಅಣುವಿಲೀನಕ ವಸ್ತು ಸಾಕಷ್ಟು ಪ್ರಮಾಣದ ದ್ರಾವಕದಲ್ಲಿ ವಿಲೀನವಾದಾಗ, ಆ ವಸ್ತುವಿನಿಂದ ಉತ್ಪತ್ತಿಯಾಗುವ ಅಥವಾ ಹೀರಲ್ಪಡುವ ಉಷ್ಣತೆಯ ಮೊತ್ತ.

Henry’s Law

ಹೆನ್ರಿಯ ನಿಯಮ.
ಉಷ್ಣತೆ ಸ್ಥಿರವಿದ್ದಾಗ ಕ್ಲುಪ್ತ ಗಾತ್ರದ ದ್ರವದಲ್ಲಿ ಕರಗುವ ಅನಿಲದ ತೂಕವು ಆ ಅನಿಲದ ಒತ್ತಡಕ್ಕೆ ಸಮನಾಗಿರುತ್ತದೆ.

Heterotrophic Organisms

ಪರಪೋಷಕೀಯ ಜೀವಿಗಳು.
ಸಾವಯವ ವಸ್ತುವನ್ನು ಆಹಾರವಾಗಿ ಬಳಸಿ ಜೀವಿಸುವ ಜೀವಿಗಳು.

Herbicides

ಸಸ್ಯನಾಶಕಗಳು
ಬೇಡವಾದ ಸಸ್ಯಗಳನ್ನು ನಾಶಮಾಡಲು ಬಳಸುವ ರಾಸಾಯನಿಕ ವಸ್ತುಗಳು.

Homologous Series

ಸಮಾನ ಸ್ಥಾನ ಶ್ರೇಣಿ.
ಒಂದು ಸೂತ್ರಕ್ಕೆ ಹೊಂದಿಕೊಂಡಿರುವ ಒಂದೇ ವಿಧವಾದ ಇಂಗಾಲ ವಸ್ತುಗಳ ಶ್ರೇಣಿ.

Hook’s Law

ಹುಕ್ ನ ನಿಯಮ.
ಸ್ಥಿರಸ್ಥಾಪಕತ್ವದ ಮಿತಿಯಲ್ಲಿ ಒಂದು ವಸ್ತುವಿನ ಒತ್ತಡ, ಅದರ ಎಳೆತಕ್ಕೆ ಅನು ಲೋಮವಾಗಿರುತ್ತದೆ.

Horizon Soil

ಮಣ್ಣು ವಲಯ.
ಮಣ್ಣಿನ ಮೇಲ್ಭಾಗದಲ್ಲಿ ಸಮಾನಾಂತರವಾಗಿ ಹರಡಿರುವ, ಒಂದು ನಿರ್ದಿಷ್ಟ ಎಲ್ಲೆಯ ಮಣ್ಣಿನ ಭಾಗ.

Horizon ‘A’

‘ಎ’ ವಲಯ.
ಇದು ಮಣ್ಣಿನ ಮೇಲ್ಪದರು. ಈ ವಲಯದಿಂದ, ಕೆಲವು ವಸ್ತುಗಳು ಕರಗಿ ಕೆಳಗೆ ಹೋಗಿರುತ್ತವೆ. ಇದನ್ನು ತೊಳೆದ ಪದರ ಅಥವಾ ಎಲ್ಯೂವಿಯೇಷನ್ ವಲಯ ಎಂದು ಕರೆಯುತ್ತಾರೆ.

Horizon – ‘B’

‘ಬಿ’ ವಲಯ.
ಇದು ಕೆಳಮಣ್ಣಿನ ಪದರ. ಮೇಲ್ಮಣ್ಣಿನಿಂದ ತೊಳೆದು ಬಂದ ವಸ್ತು ಇಲ್ಲಿ ಶೇಖರವಾಗಿರುತ್ತದೆ.

Horizon – ‘C’

‘ಸಿ’ ವಲಯ.
ಇದು ಶಿಥಿಲವಾಗಿರುವ ಬಂಡೆ ಮತ್ತು ಖನಿಜಗಳನ್ನುಳ ಮಣ್ಣಿನ ತಳಭಾಗದಲ್ಲಿರುವ ವಲಯ.

Hormone

ಹಾರ್ಮೋನ್; ಚೋದಕ.
ಕಡಿಮೆ ಮೊತ್ತದಲ್ಲಿದ್ದಾಗ್ಗ್ಲೂ ಕೂಡ, ಜೀವ ವಸ್ತುವಿನ ಸಂವರ್ಧನ ಕ್ರಿಯೆಯ ಮೇಲೆ ಹತೋಟಿ ಪರಿಣಾಮವನ್ನು ಬೀರುವ ಸಾವಯವ ಸಂಯುಕ್ತ ವಸ್ತು.

Humid Climate

ಶೀತ ವಾಯುಗುಣ.
ಕಾಡಿನ ಸಸ್ಯಗಳ ಪೋಷಣೆಗೆ ಸಾಕಾಗುವಷ್ಟು ಮಳೆಯಾಗುವ ವಾಯುಗುಣ. ಪ್ರದೇಶಗಳಲ್ಲಿ ಆವಿಯಾಗುವ ನೀರಿಗಿಂತ ಹೆಚ್ಚು ಮಳೆ ಬೀಳುತ್ತದೆ.

Humin

ಹ್ಯೂಮಿನ್.
ದುರ್ಬಲ ಆಮ್ಲದಲ್ಲಿ ಮಣ್ಣನ್ನು ಹಾಕಿದಾಗ ಕರಗದೆ ಉಳಿಯುವ ಸಾವಯವ ವಸ್ತು.

Humus

ಹ್ಯೂಮಸ್.
ಹಲವು ಜೀವಾಣುಗಳ ಕ್ರಿಯೆಯಿಂದಾಗಿ ಮೂಲತರವಾದ ಸಾವಯವ ಕಣಸಮೂಹ ನಶಿಸಿ ಉಂಟಾಗುವ ಬೂದು ಅಥವಾ ಕಪ್ಪು ಬಣ್ಣದ ಅಸ್ಫಟಿಕ ಕಣಗಳ ಸಮ್ಮಿಶ್ರಣ.

Humification

ಹ್ಯೂಮಸ್ಸೀಕರಣ.
ಸಾವಯವವಸ್ತು ಕೊಳೆತು, ಹ್ಯೂಮಸ್ ಆಗಿ ಪರಿವರ್ತನೆ ಹೊಂದುವ ವಿಧಾನ.

Hydration of Colloid

ಅಸ್ಫಟಿಕ ಜಲ ಕಲಿಲ ಜಲತ್ವ.
ಅಸ್ಫಟಿಕ ಕಣಗಳಿಂದ ಹಿಡಿದಿಡಲ್ಪಟ್ಟಿರುವಂತಹ ನೀರಿನ ಮೊತ್ತ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App