भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Ideal Gas

ಆದರ್ಶ ಅನಿಲ.
ಬಾಯಲ್ಸ್ ಮತ್ತು ಚಾರ್ಲ್ಸ್, ಅನಿಲ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವ ಅನಿಲಗಳು.

Ideal Solution

ಆದರ್ಶ ದ್ರಾವಣ.
ಎಲ್ಲಾ ಪ್ರಬಲತೆ ಮತ್ತು ಉಷ್ಣತೆಗಳಲ್ಲಿಯೂ ವ್ಹಾಂಟ್ ಹಾಫ್ ನ ತತ್ವವನ್ನು ಪರಿಪಾಲಿಸುವ ದ್ರಾವಣ.
PV = RT
P = ಒತ್ತಡ; V = ಗಾತ್ರ; R = ಸ್ಥಿರ; T = ಉಷ್ಣತೆ.

Igneous Rock

ಅಗ್ನಿಶಿಲೆ.
ಭೂಮಿಯಲ್ಲಿ ಕರಗಿದ ಶಿಲಪಾಕವು ತಂಪಾಗುವುದರಿಂದ ಉಂಟಾಗುವ ಶಿಲೆಯ ಲಾವಾರಸದ ಘನೀಕಣದಿಂದುಂಟಾಗುವ ಶಿಲೆ.

Illuviation

ಇಲ್ಯೂವಿಯೇಷನ್; ಅಧೋಗಮನ; ಶೇಖರಣೆ; ವಸ್ತುಸಂಚಯ.
ದ್ರಾವಣದ ಮುಖಾಂತರ ಮಣ್ಣಿನ ವಸ್ತುಗಳು ಕೆಳವಲಯಗಳಲ್ಲಿ ಸಂಗ್ರಹಣೆಯಾಗುವ ವಿಧಾನ.

Immature Soil

ಅಪಕ್ವ ಮಣ್ಣು.
ವಲಯಗಳನ್ನು ಹೊಂದಿರದ, ಮೇಲಿನಿಂದ ಕೊಚ್ಚಿಬಂದು ಶೇಖರಣೆಯಾಗುವುದರಿಂದುಂಟಾಗುವ ಮಣ್ಣು.

Impulsive Force

ಅಘಾತ ಬಲ.
ಅತ್ಯಲ್ಪ ಕಾಲ ಪ್ರಯೋಗವಾಗುವ ಅತ್ಯಧಿಕ ಪ್ರಮಾಣದ ಜಲಗಳಿಗೆ ಅಘಾತ ಬಲಗಳೆಂದು ಹೆಸರು.

Indicator

ಸೂಚಕ.
ತನ್ನ ಬಣ್ಣದ ತೀವ್ರ ಬದಲಾವಣೆಯಿಂದ ನಿಶ್ಚಿತವಾದ ರಾಸಾಯನಿಕ ಕ್ರಿಯೆಯ ಪೂರ್ಣತೆಯನ್ನು ಸೂಚಿಸುವ, ಗಾತ್ರ ವಿಶ್ಲೇಷಣದಲ್ಲಿ ಉಪಯೋಗಿಸುವ ವಸ್ತುವಿಗೆ, ‘ಸೂಚಕ’ ವೆಂದು ಹೆಸರು.

Infiltration

ಇಳಿಯುವಿಕೆ; ಬಸಿಯುವಿಕೆ.
ಮಣ್ಣಿನ ಮೇಲೆ ಬಿದ್ದ ನೀರು ಭೂಮಿಯಲ್ಲಿ ಕೆಳ ಮುಖವಾಗಿ ಇಳಿದು ಹೋಗುವುದು.

Infiltration Capacity

ಇಳಿಯುವಿಕೆಯ ಸಾಮರ್ಥ್ಯ; ಬಸಿಯುವಿಕೆಯ ಸಾಮರ್ಥ್ಯ.
ನೀರು ಭೂಮಿಯಲ್ಲಿ ಇಳಿಯುವಿಕೆಯ ಸಾಮರ್ಥ್ಯ.

Internal Energy

ಆಂತರಿಕ ಶಕ್ತಿ.
ಪ್ರತಿಯೊಂದು ವಸ್ತುವಿನ ಅಂತರ್ಗತ ನಿರ್ದಿಷ್ಟ ಶಕ್ತಿ.

Internal Stability

ಆಂತರಿಕ ಸ್ಥಿರತೆ.
ಅಕ್ಕಪಕ್ಕದ ಕಣಗಳ ಪರಸ್ಪರ ಆಕರ್ಷಣೆಯಿಂದ ಕೂಡಿದ ಹರಳಾಕೃತಿಯಲ್ಲಿರುವ ದ್ರವ್ಯ ಸ್ಥಾನಪಲ್ಲಟಕ್ಕೆ ತೋರುವ ಪ್ರತಿಭಟನಾಗುಣ.

Inter Tilled Crops

ಅಂತರ್ಬೇಸಾಯ ಬೆಳೆಗಳು.
ಸಾಲುಗಳ ಮಧ್ಯೆ ಪದೇ ಪದೇ ಉಕ್ಕೆ ಹೊಡೆದು ಬೆಳೆಸಬೇಕಾದ ಬೆಳೆಗಳು.

Intrazonal Soils

ವಲಯಾಂತರ್ಗತ ಮಣ್ಣುಗಳು.
ವಾತಾವರಣ ಮತ್ತು ಸಸ್ಯ ಬೆಳವಣಿಗೆಯ ಮೇಲೆ ಕೆಲವು ಅಂಶಗಳ ಕ್ರಿಯೆಯಿಂದ ಉಂಟಾಗಿರುವ ಹೆಚ್ಚು ಕಡಿಮೆ ಪರಿಪೂರ್ಣ ಗುಣಧರ್ಮಗಳನ್ನುಳ್ಳ ಮಣ್ಣುಗಳು.

Ion

ಅಯಾನ್ ವಿದ್ಯುತ್ ವಾಹಿಕಣ;
ಇದು ವಿದ್ಯುತ್ ಅಂಶವುಳ್ಳ ಕಣ. ಋಣಾಂಶಗಳ ಲೋಪ ಮತ್ತು ಆಗಮದಿಂದಾಗಿ ಪರಮಾಣುಗಳು, ಕ್ರಮವಾಗಿ ಧನ ಮತ್ತು ಋಣ ಅಯಾನುಗಳಾಗುತ್ತವೆ.

Ionic Bond

ಅಯಾನ್ ಬಂಧ; ವಿದ್ಯುದಣುಬಂಧ; ವಿದ್ಯುದ್ವಾಹಿಕಣಬಂಧ.
ಧನ ಅಯಾನ್ ಮತ್ತು ಋಣ ಅಯಾನ್ ಗಳ ಮಧ್ಯೆ ಚಲನೆಯಲ್ಲಿರುವ ಬಲವಾದ ಸ್ಥಿರ ವಿದ್ಯುತ್ ಶಕ್ತಿ ಎಳೆತಗಳಿಂದ ಉಂಟಾದ ಬಂಧನ.

Ionisation Potential

ಅಯಾನೀಕರಣಶಕ್ತಿ; ವಿದ್ಯುದನುಕರಣಶಕ್ತಿ.
ಸಾಧಾರಣ ಮೊತ್ತದಿಂದ ಅನಂತವಾದ ಮೊತ್ತಕ್ಕೆ ಋಣಾಂಶಗಳನ್ನು ಕೊಂಡೊಯ್ಯಲು ಬೇಕಾಗುವ ಸಾಮರ್ಥ್ಯ.

Isotope

ಸಮಸ್ಥಾನಿ.
ಒಂದೇ ಮೂಲವಸ್ತುವಿನ ಪರಮಾಣುಗಳು ಭಾರದಲ್ಲಿ ಬೇರೆ ಬೇರೆಯಾಗಿದ್ದು ಪರಮಾಣುವಿನ ಸಂಖ್ಯೆಯಲ್ಲಿ ಸಮನಾಗಿದ್ದರೆ, ಆ ವಿಧದ ಪರಮಾಣುಗಳಿಗೆ ಆ ಮೂಲ ವಸ್ತುವಿನ ಸಮಸ್ಥಾನಿಗಳೆನ್ನುವರು.

Isobar

ಐಸೋಬಾರ್; ಸಮವಾಯುಭಾರರೇಖೆ; ಸಮಭಾರವಸ್ತು; ಸಮಒತ್ತಡದ ವಸ್ತು.
ಪರಮಾಣು ಭಾರ ಸಮನಾಗಿದ್ದು ಪರಮಾಣು ಸಂಖ್ಯೆ ಬೇರೆ ಬೇರೆಯಿರುವ ಮೂಲ ವಸ್ತುಗಳು.

Isomers

ಸಮಾನಾವಯವಗಳು.
ರಚನೆಯಲ್ಲಿ ಒಂದೇ ಆಗಿದ್ದು, ಆಕೃತಿ ಮತ್ತು ಗುಣಗಳಲ್ಲಿ ವ್ಯತ್ಯಾಸವಿರುವ ಸಂಯುಕ್ತ ವಸ್ತುಗಳು.

Search Dictionaries

Loading Results

Follow Us :   
  Download Bharatavani App
  Bharatavani Windows App