भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Normal Oxide

ನಾರ್ ಮಲ್ ಆಕ್ಸೈಡ್.
ಸಂಯೋಗ ಸಾಮರ್ಥ್ಯದ ನಿಯಮಗಳಂತೆ ತಯಾರಾದ ಲೋಹ ಮತ್ತು ಅಲೋಹಗಳ ಆಕ್ಸೈಡುಗಳು.

Normal Salts

ನಾರ್ ಮಲ್ ಲವಣಗಳು.
ಆಮ್ಲದ ಅಣುವಿನಲ್ಲಿರುವ, ತೆಗೆದಿರಿಸಬಹುದಾದ ಎಲ್ಲಾ ಹೈಡ್ರೊಜನ್ ಪರಮಾಣುಗಳು, ಲೋಹದ ಪರಮಾಣುಗಳಿಂದ ಅಥವಾ ರ್ಯಾಡಿಕಲ್ಸ್ ಗಳಿಂದ ಹೊರದೂಡಲ್ಪಟ್ಟಾಗ ಉಂಟಾಗುವ ಲವಣಗಳಿಗೆ ಸಾಮಾನ್ಯ ಲವಣಗಳೆಂದು ಹೆಸರು.

Normal Solution

ನಾರ್ ಮಲ್ ದ್ರಾವಣ.
ಒಂದು ಲೀಟರ್ ದ್ರಾವಣದಲ್ಲಿ ಒಂಗು ಗ್ರಾಂ ಸಮಾನ ತೂಕದ ದ್ರಾವಕವನ್ನು ಕರಗಿಸುವುದರಿಂದುಂಟಾಗುವ ದ್ರಾವಣಕ್ಕೆ ಸಮಾನ ದ್ರಾವಣವೆಂದು ಹೆಸರು.

Normal Profile

ಸಾಮಾನ್ಯ ಪ್ರೊಫೈಲ್.
ಸಸ್ಯ ಸಂಗ್ರಹ ಮತ್ತು ವಾಯುಗುಣಗಳೆರಡು ಸಮತೋಲನವಾಗಿದ್ದು, ಮೂಲ ವಸ್ತು ಮತ್ತು ಕಾಲಾವಧಿ ತಟಸ್ಥವಾಗಿರುವ ಸನ್ನಿವೇಶದಲ್ಲಿ ರಚನೆಯಾಗುವ ಮಣ್ಣಿನ ಪ್ರೊಫೈಲ್.

Nutrient Cycle

ಪೋಷಕ ವೃತ್ತ.
ಸಸ್ಯ ಪೋಷಕಗಳ ಬಹುಭಾಗ ಪ್ರಕೃತಿ ಸ್ವಾಭಾವಿಕ ವೃತ್ತ. ಅಂದರೆ, ಸಸ್ಯ ವರ್ಗ, ಮಣ್ಣು, ಗಾಳಿ ಮತ್ತು ಮಳೆ ಇವುಗಳಿಗೆ ಸಂಭವಿಸಿದ ಹಾಗೆ ಮಾರ್ಪಾಟಿಗೊಳಗಾಗುತ್ತದೆ. ಉದಾಹರಣೆಗೆ ಗಾಳಿಯಲ್ಲಿನ ಸಾರಜನಕವು ಮಿಂಚು, ಗುಡುಗು ಇವುಗಳಿಂದೊದಗಿದ ಶಕ್ತಿಯಿಂದ ಜಲಜನಕ ಇಲ್ಲವೇ ಆಮ್ಲಜನಕದೊಡನೆ ಸಂಯೋಗವಾಗಿ ಅಮೋನಿಯ ಇಲ್ಲವೇ ನೈಟ್ರೇಟ್ ರೂಪದಲ್ಲಿ ಭೂಮಿಯನ್ನು ಸೇರುತ್ತದೆ. ಅದು ಸಸ್ಯದಿಂದ ಹೀರಲ್ಪಡುತ್ತದೆ. ಸಸ್ಯ ಸತ್ತ ಮೇಲೆ ವಿಘಟನೆಯಾಗಿ ಸಾರಜನಕ ಪುನಃ ಗಾಳಿಯನ್ನು ಸೇರುತ್ತದೆ.

Search Dictionaries

Loading Results

Follow Us :   
  Download Bharatavani App
  Bharatavani Windows App