भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Natural Erosion

ಸ್ವಾಭಾವಿಕ ಕೊಚ್ಚಣೆ; ಸ್ವಾಭಾವಿಕ ಭೂಸವಕಳಿ.
ಮನುಷ್ಯ ಮತ್ತು ಪ್ರಾಣಿಗಳ ಕಾರ್ಯದಿಂದಲ್ಲದೇ ಸ್ವಾಭಾವಿಕವಾಗಿ ನಡೆಯುವ ಭೂಕೊಚ್ಚಣೆ.

Natural Radioactivity

ಸ್ವಾಭಾವಿಕ ವಿಕಿರಣ ಕ್ರಿಯೆ.
ಸ್ವಾಭಾವಿಕವಾಗಿ ದೊರೆಯುವ ವಸ್ತುಗಳಿಂದುಂಟಾಗುವ ವಿಕಿರಣ ಕ್ರಿಯೆ.

Nephelometry

ನೆಫೆಲೋಮಿಟ್ರಿ.
ತೇಲಣದಲ್ಲಿ ಚದುರಿಸಲ್ಪಡುವ ಬೆಳಕಿನ ಪರಿಮಾಣದ ಅಳತೆಯ ಆಧಾರದ ಮೇಲೆ ನಡೆಸುವ ವಿಶ್ಲೇಷಣೆ.

Neutralisation

ತಟಸ್ಥೀಕರಣ.
ಆಮ್ಲ ಮತ್ತು ಪ್ರತ್ಯಾಮ್ಲಗಳ ಅನ್ಯೋನ್ಯ ಕ್ರಿಯೆಯಿಂದ ತಮ್ಮ ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಧರ್ಮಗಳನ್ನು ಕಳೆದುಕೊಂಡು, ಲವಣ ಮತ್ತು ನೀರನ್ನುಂಟು ಮಾಡುತ್ತದೆ. ಆಮ್ಲ ಮತ್ತು ಪ್ರತ್ಯಾಮ್ಲಗಳ ಇಂತಹ ಅನ್ಯೋನ್ಯ ಕ್ರಿಯೆಗೆ ತಟಸ್ಥೀಕರಣ ಎಂದು ಕರೆಯುತ್ತಾರೆ.

Neutral Soil

ಸಮಧಾತು ಅಥವಾ ತಟಸ್ಥ ಮಣ್ಣು.
ಹುಳಿ ಅಥವಾ ಕ್ಷಾರವಿಲ್ಲದ ಸಮಧಾತು ಮಣ್ಣು. ಈ ಮಣ್ಣಿನ ಪಿ. ಎಚ್. ಸರಿಯಾಗಿ 7 ಆಗಿರುತ್ತದೆ.

Neutral Oxides

ತಟಸ್ಥ ಆಕ್ಸೈಡ್ ಗಳು.
ಲಿಟ್ಮಸ್ ದ್ರಾವಣಕ್ಕೆ ತಟಸ್ಥತೆಯನ್ನು ತೋರುವ ಆಕ್ಸೈಡುಗಳು.

Newton’s Law of Motion

ನ್ಯೂಟನ್ನನ ಚಲನಾನಿಯಮಗಳು.
1) ಬಾಹ್ಯ ಬಲ ಪ್ರಯೋಗವಿಲ್ಲದಿದ್ದಾಗ, ಒಂದು ಸ್ಥಿರವಸ್ತುವು ಸ್ಥಿರವಾಗಿಯೇ ಇರುವುದು. ಚಲಿಸುತ್ತಿರುವ ವಸ್ತು ಸಮವೇಗದಿಂದ ಒಂದೇ ದಿಕ್ಕಿನಲ್ಲಿ ಚಲಿಸುತ್ತಲೇ ಇರುವುದು.
2) ಆ ವೇಗದಲ್ಲಿ ಉಂಟಾಗುವ ವ್ಯತ್ಯಾಸದ ದರವು ಆರೋಪಿತ ಬಲ ಸರಳಾನುಪಾತವಾಗಿರುತ್ತದೆ ಮತ್ತು ಬಲದ ದಿಕ್ಕಿನಲ್ಲೇ ಇರುತ್ತದೆ.
3) ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮಪ್ರಮಾಣವುಳ್ಳ ಮತ್ತು ವಿಮುಖವಾದ ಪ್ರತಿಕ್ರಿಯೆಯೊಂದಿದೆ.

Nitrogen Cycle

ಸಾರಜನಕ ವೃತ್ತ.
ವಾಯುವಿನಲ್ಲಿರುವ ಅನಿಲ ರೂಪದ ಸಾರಜನಕ, ಸಿಡಿಲು, ಮಿಂಚು ಇವುಗಳಿಂದೊದಗಿದ ಶಕ್ತಿಯ ಫಲವಾಗಿ, ಅಮೋನಿಯಮ್ ನೈಟ್ರೇಟ್ ಆಗಿ ಪರಿವರ್ತನೆ ಹೊಂದಿ ಮಣ್ಣಿಗೆ ಸೇರಿ ಸಸ್ಯಗಳಿಗೊದಗುತ್ತದೆ. ಸಸ್ಯ ಅಥವಾ ಸೇಂದ್ರಿಯ ವಸ್ತುಗಳ ವಿಘಟನೆಯಾದಾಗ ಪುನಃ ಬಿಡುಗಡೆಯಾಗಿ ವಾಯುವನ್ನು ಸೇರುತ್ತದೆ. ಇದಕ್ಕೆ ಸಾರಜನಕ ಚಕ್ರ ಎಂದು ಹೆಸರು.

Nitrogen Fixation

ಸಾರಜನಕ ಸ್ಥಿರೀಕರಣ.
ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಕ್ರಿಯೆಯಿಂದ ವಾಯುವಿನಲ್ಲಿರುವ ಅನಿಲ ರೂಪದ ಸಾರಜನಕ, ಸಾವಯವ ಸಂಯುಕ್ತವಾಗುವ ಕ್ರಿಯೆ.

Nitrification

ನೈಟ್ರೀಕರಣ.
ಸಾರಜನಕ ವಸ್ತುಗಳಿಂದ ನೈಟ್ರೇಟ್ ಉತ್ಪತ್ತಿಯಾಗುವಿಕೆ.

Nitrate of Lime

ಸುಣ್ಣದ ನೈಟ್ರೇಟ್.
ಇದು ನೈಟ್ರಿಕ್ ಆಮ್ಲದ ಕ್ಯಾಲ್ಸಿಯಂ ಲವಣ. ಇದರಲ್ಲಿ ಶೇಕಡ 15 ರಷ್ಟು ಸಾರಜನಕವಿರುತ್ತದೆ.

Nitrate of Soda

ಸೋಡಿಯಂ ನೈಟ್ರೇಟ್.
ಸೋಡಿಯಂ ಕಾರ್ಬೊನೇಟ್ ಇಲ್ಲವೇ ಕಾಸ್ಟಿಕ್ ಸೋಡಾ ಮತ್ತು ನೈಟ್ರಿಕ್ ಆಮ್ಲಗಳ ಸಂಯೋಜನೆಯಿಂದುಂಟಾಗುವ ರಾಸಾಯನಿಕ ಸಂಯುಕ್ತ ವಸ್ತು. ಇದರಲ್ಲಿ ಶೇಕಡ 16 ರಷ್ಟು ಸಾರಜನಕವಿರುತ್ತದೆ.

Nitrogen Solution

ಸಾರಜನಕ ದ್ರಾವಣ.
ಅಮೋನಿಯಮ್, ನೈಟ್ರೇಟ್, ಯೂರಿಯ ಮುಂತಾದ ಸಾರಜನಕ ಗೊಬ್ಬರಗಳನ್ನು ನೀರಿನಲ್ಲಿ ಕರಗಿಸುವುದರಿಂದ ಉಂಟಾಗುವ ಸಾರಜನಕದ ದ್ರಾವಣ.

Nitrophosphate

ನೈಟ್ರೋ ಫಾಸ್ಫೇಟ್.
ಸಾರಜನಕ ಮತ್ತು ರಂಜಕದ ರಾಸಾಯನಿಕ ಸಂಯುಕ್ತ ಗೊಬ್ಬರ.

Noble Gases

ಉತ್ತಮ ಅನಿಲಗಳು.
ಸಾಧಾರಣವಾಗಿ ಯಾವ ಬದಲಾವಣೆಯನ್ನೂ ಹೊಂದದ ಹೀಲಿಯಂ, ನಿಯಾನ್, ಆರ್ಗಾನ್ ಮುಂತಾದ ಅನಿಲಗಳಿಗೆ ಉತ್ತಮ ಅನಿಲಗಳೆನ್ನುತ್ತಾರೆ.

Nodule Bacteria

ಗ್ರಂಥಿ ಬ್ಯಾಕ್ಟೀರಿಯಾ.
ದ್ವಿದಳ ಜಾತಿಯ ಸಸ್ಯ ಬೇರುಗಳಲ್ಲಿ ಕಂಡುಬರುವ ಗ್ರಂಥಿಗಳಲ್ಲಿದ್ದು, ವಾಯುವಿನಿಂದ ನೇರವಾಗಿ ಸಾರಜನಕವನ್ನು ಬಳಸಿಕೂಂಡು, ತನ್ನ ಜೀವ ಕ್ರಿಯೆಗೆ ಬೇಕಾದ ಸಾವಯವ ವಸ್ತುಗಳನ್ನು ಸಸ್ಯಗಳಿಂದ ಪಡೆದುಕೊಳ್ಳುವ ಹಾಗೂ ಆತಿಥೇಯ ಸಸ್ಯಕ್ಕೆ ಸಾರಜನಕ ಸೇಂದ್ರಿಯ ವಸ್ತುಗಳನ್ನು ಒದಗಿಸುವ ಸಮಜೀವಿ ಬ್ಯಾಕ್ಟೀರಿಯಾ.

Non-electrolyte

ವಿದ್ಯುತ್ ಅಸಹಕಾರಿ.
ವಿದ್ಯುತ್ ಶಕ್ತಿ ಪ್ರವಹಿಸಲು ಅನುಕೂಲಮಾಡಿಕೊಡದಂತಹ ದ್ರಾವಣದಲ್ಲಿರುವ ವಸ್ತು.

Non-saline Alkali Soil

ಚೌಳುರಹಿತ ಕ್ಷಾರ ಮಣ್ಣು.
ಹೇರಳವಾದ ವಿನಿಮಯ ಸೋಡಿಯಂನಿಂದ ಈ ಮಣ್ಣು, ಸಸ್ಯಗಳ ಬೆಳವಣಿಗೆಗೆ ಅಡಚಣೆಯನ್ನುಂಟುಮಾಡುತ್ತದೆ. ನೀರಿನಲ್ಲಿ ಕರಗಬಲ್ಲ ಲವಣಗಳು ಈ ಮಣ್ಣಿನಲ್ಲಿ ಅಷ್ಟಾಗಿರಲಾರವು.

Non symbiotic

ಸ್ವತಂತ್ರ ಜೀವಿ.
ಮಣ್ಣಿನಲ್ಲಿರುವ ಸಾವಯವ ವಸ್ತುವಿನಿಂದೊದಗುವ ಶಕ್ತಿ ಮತ್ತು ನೇರವಾಗಿ ವಾಯುವಿನಿಂದ ಹೀರಲ್ಪಟ್ಟ ಸಾರಜನಕಗಳಿಂದ ಜೀವಕ್ರಿಯೆ ನಡೆಸುವ ಪಾಚಿ, ಅಸೊಟೋ ಬ್ಯಾಕ್ಟರ್ ಮುಂತಾದ ಸೂಕ್ಷ್ಮ ಜೀವಿಗಳು.

Normality

ನಾರ್ ಮ್ಯಾಲಿಟಿ.
ಒಂದು ಲೀಟರ್ ದ್ರಾವಣದಲ್ಲಿ ವಿಲೀನವಾಗಿರುವ ಒಂದು ವಸ್ತುವಿನ ‘ಗ್ರಾಂ ಸಮತೂಕ’ಗಳ ಸಂಖ್ಯೆಗೆ ನಾರ್ ಮ್ಯಾಲಿಟಿ ಎಂದು ಹೆಸರು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App