भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Pan (Hard)

ಪದರ (ಗಟ್ಟಿ).
ಬಲವಾಗಿ ಗಟ್ಟಿಗಟ್ಟಿದ ಮಣ್ಣಿನೊಳಗಿನ ಪದರು. ಹೆಚ್ಚು ಜೇಡಿ ಮತ್ತು ಸುಣ್ಣವಸ್ತುಗಳಿಂದ ಈ ಪದರುಗಳುಂಟಾಗುತ್ತವೆ.

Partial Pressure

ಭಾಗಶಃ ಒತ್ತಡ.
ಒಂದು ಮಿಶ್ರಣದ ಪೂರ್ಣ ಘನ ಅಳತೆಯನ್ನು ಆ ಮಿಶ್ರಣದ ಒಂದು ಘಟಕ ಆವರಿಸಿಕೊಂಡಾಗ ಉಂಟಾಗುವ ಒತ್ತಡಕ್ಕೆ ಭಾಗಶಃ ಒತ್ತಡ ಎಂದು ಹೆಸರು.

Parent Material

ಮೂಲ ಸಾಮಗ್ರಿ; ಮೂಲ ವಸ್ತು.
ಮಣ್ಣು ಉತ್ಪತ್ತಿಯಾಗುವ ಮೂಲ ಸಾಮಗ್ರಿ. ಈ ಮೂಲ ಸಾಮಗ್ರಿಗಳು ಸಾಮಾನ್ಯವಾಗಿ ಶಿಥಿಲವಾಗಿರುವುದಿಲ್ಲ.

Parent Rocks

ಮೂಲ ಶಿಲೆಗಳು; ತಾಯಿ ಬಂಡೆಗಳು.
ಇವು ಮಣ್ಣಿನ ಮೂಲ ಶಿಲೆಗಳು. ಉದಾಹರಣೆಗೆ, ಅಗ್ನಿ ಶಿಲೆ; ಜನ ಶಿಲೆ.

Particle Density

ಕಣ ಸಾಂದ್ರತೆ.
ರಂಧ್ರಾವರಣವನ್ನು ಬಿಟ್ಟು ಕಂಡುಹಿಡಿದ ಮಣ್ಣುಕಣಗಳ ಸರಾಸರಿ ಸಾಂದ್ರತೆ.

Particle Size

ಕಣ ಗಾತ್ರ.
ಇದು ಮಣ್ಣಿನ ಕಣಗಳ ವ್ಯಾಸವನ್ನು ಸೂಚಿಸುತ್ತದೆ. ಇದನ್ನು ಜರಡಿಯಿಂದ ಅಥವಾ ಕಣಗಳು ದ್ರವದಲ್ಲಿ ತೂರುವ ವೇಗದಿಂದ ಕಂಡುಹಿಡಿಯುತ್ತಾರೆ.

Parts Per Million

ದಶ ಲಕ್ಷಾಂಶ.
ಹತ್ತು ಲಕ್ಷದಲ್ಲಿ ಎಷ್ಟು ಭಾಗ ಇದೆ ಎಂಬುದನ್ನು ಸೂಚಿಸುವ ಪದ್ಧತಿ. ಮಣ್ಣಿನ ವಿಶ್ಲೇಷಣೆಯ ನಿರೂಪಣೆಯಲ್ಲಿ 1.000,000 ಗ್ರಾಂಗೆ ಎಷ್ಟು ಭಾಗ ವಿವಿಧ ವಸ್ತುಗಳಿವೆ ಎಂಬುದನ್ನು ನಮೂದಿಸುತ್ತಾರೆ.

Partial Sterilization

ಭಾಗಶಃ ನಿರ್ಜೀವೀಕರಣ ; ಅಂಶಿಕ ಬರಡುಗೊಳಿಸುವಿಕೆ.
ಶಾಖ ಅಥವಾ ರಾಸಾಯನಿಕ ಪ್ರಯೋಗಗಳಿಂದ ಭಾಗಶಃ ಮಣ್ಣಿನಿಂದ ಸೂಕ್ಷ್ಮ ಜೀವಿಗಳನ್ನು ನಿಷ್ಕ್ರಿಯಗೊಳಿಸುವ ವಿಧಾನ. ಇದರಿಂದ ಕೆಲವು ಜಾತಿಯ ಜೀವಿಗಳು ಸ್ವಲ್ಪಮಟ್ಟಿಗೆ ಹಾಳಾಗುತ್ತವೆ.

Pascal’s Law

ಪ್ಯಾಸ್ಕಲ್ ನ ನಿಯಮ.
ಸ್ಥಿರವಾದ ದ್ರವದ ಮೇಲೆ ಪ್ರಯೋಗಿಸಲ್ಪಟ್ಟ ಒತ್ತಡ ಎಲ್ಲ ಭಾಗಗಳಿಗೂ ಸಮವಾಗಿ ಹರಡಲ್ಪಡುತ್ತದೆ.

Pedology

ಸಸ್ಯೊಪಯೋಗಿ ಮಣ್ಣಿನ ಶಾಸ್ತ್ರ ಅಥವಾ ಮಣ್ಣಿನ ವಿಜ್ಞಾನ.
ಬಗೆ ಬಗೆಯ ಮಣ್ಣುಗಳನ್ನು ನೈಜ ಅಂಶಗಳೆಂದು ಪರಿಗಣಿಸಿ, ಅವುಗಳ ಭೌತಿಕ, ರಾಸಾಯನಿಕ ಮತ್ತು ಜೀವ ವಿಧಾನಗಳನ್ನು ವಿವರಿಸುವ ಮಣ್ಣಿನ ವಿಜ್ಞಾನ.

Permanent Gas

ಶಾಶ್ವತ ಅನಿಲ.
ಯಾವ ಅನಿಲದ (ಬಾಷ್ಪೀಭವನದ) ಉಷ್ಣತೆ ಕೊಠಡಿಯ ಉಷ್ಣತೆಗಿಂತ ಕಡಿಮೆ ಇರುತ್ತದೆಯೋ ಅತಂಹ ಅನಿಲಕ್ಕೆ ಶಾಶ್ವತ ಅನಿಲವೆಂದು ಹೆಸರು.

Penetrability

ಭೇದನಾ ಶಕ್ತಿ; ನುಗ್ಗುವಿಕೆಯ ಶಕ್ಯತೆ.
ಮಣ್ಣಿನೊಳಕ್ಕೆ ಒಂದು ವಸ್ತುವನ್ನು ಏಕಮಾನ ದೂರಕ್ಕೆ ನುಗ್ಗಿಸಲು ಬೇಕಾಗುವ ಬಲ.

Percolation

ಸ್ರವಿಸುವಿಕೆ; ಜಿನುಗುವಿಕೆ.
ಮಣ್ಣಿನಲ್ಲಿ ನೀರು ಇಳಿಯುವಿಕೆ.

Percolation Ratio

ಸ್ರವಿಸುವ ಅನುಪಾತ; ಜಿನುಗು ಅನುಪಾತ.
ಜಿನುಗುವಿಕೆಯ ಪ್ರಮಾಣವನ್ನು ಈ ಕೆಳಗಿನ ಸೂತ್ರದಿಂದ ವ್ಯಕ್ತಪಡಿಸಬಹುದು.
ಜಿನುಗುವ ಪ್ರಮಾಣ = (ನೇತಾಡುವ ಶೇಕಡ ವಸ್ತು ➗ 1) x (ತೇವಾಂಶದ ಸಮಬಲ ➗ ಅಸ್ಫಟಿಕ ಶೇಕಡಾಭಾಗ)

Periodic Law

ಆವರ್ತನೀಯ ನಿಯಮ.
ಪರಮಾಣುಗಳನ್ನು, ಅವುಗಳ ಪರಮಾಣು ಸಂಖ್ಯೆಗಳ ಏರಿಕೆಯ ಕ್ರಮದಲ್ಲಿ ಜೋಡಿಸಿದಾಗ, ಅವುಗಳ ಗುಣಗಳು ಒಂದು ಮೂಲವಸ್ತುವಿನಿಂದ ಮತ್ತೊಂದಕ್ಕೆ ಗೊತ್ತಾದ ರೀತಿಯಲ್ಲಿ ಬದಲಾಯಿಸುತ್ತವೆ ಮತ್ತು ಆ ಜೋಡಣೆ ಕೆಲವು ಗೊತ್ತಾದ ಬಿಂದುಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಮೊದಲಿನ ಗುಣಗಳ ಸಾಮ್ಯತೆಯನ್ನುಳ್ಳ ಸ್ಥಿತಿಗೆ ಹಿಂದಿರುಗುತ್ತದೆ.

Permeability

ವ್ಯಾಪ್ಯತೆ.
ಮಣ್ಣಿನ ದ್ರವ್ಯದ ಮೂಲಕ, ದ್ರವ ಒತ್ತಡದ ಕಾರಣ ದ್ರವ ಹರಿದು ಹೋಗಲು ಅವಕಾಶ ಮಾಡಿಕೊಡುವ ಮಣ್ಣಿನ ಒಂದು ಗುಣ. ದ್ರವ ಹರಿಯುವ ಗತಿಯಿಂದ ಇದನ್ನು ಅಳೆಯುತ್ತಾರೆ.

Photo Map

ಛಾಯಾ ನಕ್ಷೆ.
ಅಂತರಿಕ್ಷದಿಂದ ತೆಗೆದ ಭೂ ಮೇಲ್ಮೈನ ನಕ್ಷೆ.

Plastic Limit

ನಮ್ಯತೆಯ ಮಿತಿ; ರೂಪ ನಿರ್ಮಾಪಣೆ ಮಿತಿ.
ಆಕೃತಿ ರೂಪಣೆಯ ಮಿತಿ ಅಥವಾ ಮಣ್ಣು ಮುದ್ದೆಯು ಒಡೆಯದೆ ರೂಪಾಂತರ ಹೊಂದಬಲ್ಲ ಕನಿಷ್ಟ ಶೇಕಡಾ ತೇವಾಂಶ.

Physical and Chemical Changes

ಭೌತಿಕ ಮತ್ತು ರಾಸಾಯನಿಕ ಬದಲಾವಣೆಗಳು.
(ಭೌತಿಕ ಬದಲಾವಣೆ) – (ರಾಸಾಯನಿಕ ಬದಲಾವಣೆ):
1) ಬದಲಾವಣೆ ತಾತ್ಕಾಲಿಕ – ಬದಲಾವಣೆ ಶಾಶ್ವತ.
2) ಮೊದಲಿನ ವಸ್ತುವಿನ ರಚನೆಯಲ್ಲಿ ಬದಲಾವಣೆಯಾಗುವುದಿಲ್ಲ – ಮೊದಲಿನ ವಸ್ತುವಿನ ರಚನೆಯಲ್ಲಿ ಯಾವಾಗಲೂ ಬದಲಾವಣೆ ಆಗುತ್ತದೆ.
3) ಯಾವ ಹೊಸ ವಸ್ತುವೂ ಉತ್ಪತ್ತಿಯಾಗುವುದಿಲ್ಲ – ಹೊಸ ಗುಣಗಳನ್ನು ಹೊಂದಿದ ಹೊಸ ವಸ್ತು ಉತ್ಪತ್ತಿಯಾಗುತ್ತದೆ.
4) ಈ ಬದಲಾವಣೆಗೆ ಶಾಖದ ಅಗತ್ಯವಿಲ್ಲ – ಬದಲಾವಣೆ ಯಾವಾಗಲೂ ಶಾಖದ
ಹೀರಿಕೆ ಅಥವಾ ಬಿಡುಗಡೆಯಿಂದೊಡಗೂಡಿರುತ್ತದೆ.
5) ವಸ್ತುವಿನ ತೂಕ ಬದಲಾಯಿಸುವುದಿಲ್ಲ – ತೂಕ ಯಾವಾಗಲೂ ಬದಲಾವಣೆಯಾಗುತ್ತದೆ.

Phytogenic Soils

ಸಸ್ಯ ಪ್ರಭಾವಿತ ಮಣ್ಣುಗಳು.
ಸಮಶೀತೋಷ್ಣ ವಲಯದಲ್ಲಿ ಮುಖ್ಯವಾಗಿ ಸ್ವಾಭಾವಿಕ ಸಸ್ಯವರ್ಗದ ಪ್ರಭಾವದಿಂದ ರೂಪುಗೊಂಡ ಮಣ್ಣುಗಳು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App