भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Radiation

ವಿಕಿರಣ.
ಯಾವ ಮಾಧ್ಯಮದ ಸಹಾಯವೂ ಇಲ್ಲದೇ ಉಷ್ಣ ಇಲ್ಲವೇ ಬೆಳಕು ಒಂದು ಪದಾರ್ಥದಿಂದ ಮತ್ತೊಂದು ಪದಾರ್ಥಕ್ಕೆ ಹರಿಯುವಿಕೆ.

Raoult’s Law

ರಾವೋಲ್ಟನ ನಿಯಮ.
ಅನಿಲ ಒತ್ತಡ ಕಡಿಮೆಯಾಗುವಿಕೆ ವಿಲೀನ ವಸ್ತುವಿನ ಅಣು ತೂಕಕ್ಕೆ ಸಂಬಂಧಿಸಿರುತ್ತದೆ.

Raoult’s Law of Boiling Point

ರಾವೋಲ್ಟನ ಕುದಿಯುವ ಬಿಂದು ನಿಯಮ.
ದ್ರಾವಕ ಕುದಿಯುವ ಬಿಂದುವಿನ ಏರಿಕೆ, ವಿಲೀನ ವಸ್ತುಗಳ ಪ್ರಬಲತೆಗೆ ಸರಳ ಪ್ರಮಾಣದಲ್ಲಿರುತ್ತದೆ.

Raoult’s Law of Freezing Point

ರಾವೋಲ್ಟನ ಘನೀಕರಣ ಬಿಂದು ನಿಯಮ.
ದ್ರಾವಕ ಹೆಪ್ಪುಗಟ್ಟುವ ಬಿಂದುವಿನ ಕುಗ್ಗುವಿಕೆ, ವಿಲೀನ ವಸ್ತುಗಳ ಪ್ರಬಲತೆಗೆ ಸರಳ ಪ್ರಮಾಣದಲ್ಲಿರುತ್ತದೆ.

Reduction

ಅಪಕರ್ಷಣ.
ಇದು ಉತ್ಕರ್ಷಣಕ್ಕೆ ತದ್ವಿರುದ್ಧವಾದದ್ದು. ಈ ಕ್ರಿಯೆಯಲ್ಲಿ ಧನ ವಿದ್ಯುತ್ ಅಥವಾ ಲೋಹದ ಪ್ರಮಾಣ ಹೆಚ್ಚಿಸುವುದು ಮತ್ತು ಋಣ ವಿದ್ಯುತ್ತಿನ ಅಥವಾ ಅಲೋಹದ ಪ್ರಮಾಣವು ಕಡಿಮೆಯಾಗುವುದು. ಆದ್ದರಿಂದ ಎಲ್ಲಾ ಅಪಕರ್ಷಣ ಕ್ರಿಯೆಗಳಲ್ಲಿ ಕೆಳಗಿನ ಸಂಗತಿಗಳನ್ನು ಕಾಣಬಹುದು.
1) ಯಾವುದಾದರೊಂದು ಮೂಲವಸ್ತು ಅಥವಾ ಸಂಯುಕ್ತದೊಡನೆ ಜಲಜನಕ ಅಥವಾ ಬೇರೆ ಯಾವುದಾದರೂ ಧನ ವಿದ್ಯುತ್ತಿನ ಮೂಲವಸ್ತು ಇಲ್ಲವೇ ಮೂಲಗಳ ಸಂಯೋಜನೆ ಅಥವಾ ಅವುಗಳ ಪ್ರಮಾಣದಲ್ಲಿ ಹೆಚ್ಚಳ.
2) ಒಂದು ಸಂಯುಕ್ತದಿಂದ ಆಮ್ಲಜನಕ ಅಥವಾ ಯಾವುದಾದರೊಂದು ಋಣ ವಿದ್ಯುತ್ತಿನ ಮೂಲವಸ್ತು ಇಲ್ಲವೇ ಮೂಲಗಳ ವಿಸರ್ಜನೆ ಅಥವಾ ಅವುಗಳ ಪ್ರಮಾಣದಲ್ಲಿ ಇಳಿತ.
3) ವಸ್ತುವಿಗೆ ಇಲೆಕ್ಟ್ರಾನ್ ಗಳ ಲಾಭವಾಗುವಿಕೆ.

Reduction Equivalent

ಅಪಕರ್ಷಣ ಸಮಾನತೆ.
ಒಂದು ಗ್ರಾಂ ಅಣುತೂಕದಷ್ಟು ಋಣಾಂಶಗಳನ್ನು ಬಿಟ್ಟುಕೊಡುವ ಅಪಕರ್ಷಣಕಾರಿಯ ತೂಕ.

Regolith

ರಿಗೋಲಿತ್; ಶಿಲೆಯ ಮೇಲಿನ ಹೊದ್ದಿಕೆ.
ಮೂಲ ಬಂಡೆಯ ಮೇಲೆ ಇರುವ ಸಡಿಲವಾದ ಕಲ್ಲುವಸ್ತು ಮತ್ತು ಅದರ ಮೇಲೆ ಇರುವ ಮಣ್ಣನ್ನು ಒಟ್ಟಾಗಿ ರಿಗೋಲಿತ್ ಎಂದು ಕರೆಯುತ್ತಾರೆ.

Regosols

ರೆಗೋಸಾಲ್ಸ್.
ಎಸೋನಲ್ (ವಲಯರಹಿತ) ಗುಂಪಿಗೆ ಸೇರಿದ ಈ ಮಣ್ಣು ಮೃದು ಖನಿಜ ವಸ್ತುಗಳಿಂದ ಕೂಡಿದ್ದು ಮರಳು ಗುಡ್ಡ ಮತ್ತು ಕಣಿವೆಯ ಬುಡಗಳಲ್ಲಿ ಕಂಡು ಬರುತ್ತದೆ.

Regur

ರೆಗುರ್; ಎರೆಭೂಮಿ; ಕರೆಭೂಮಿ.
ಉಷ್ಣವಲಯದ ಈ ಮಣ್ಣಿನಲ್ಲಿ ಹೇರಳವಾದ ಸುಣ್ಣದ ಶೇಖರಣೆ ಕಂಡು ಬರುತ್ತದೆ. ಪ್ರತ್ಯಾಮ್ಲದಿಂದ ಸಂತೃಪ್ತಿಯಾಗಿರುವ ನಮ್ಮ ದೇಶದ ಕಪ್ಪು ಭೂಮಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ.

Regradation

ಪುನರುದ್ಭವತೆ; ಪುನರುತ್ಥತೆ.
ಮಣ್ಣಿನಲ್ಲಿ ಲವಣಗಳು ಪುನರ್ ಶೇಖರಣೆಯಾಗುವಿಕೆ.

Rendzina Soils

ರೆಂಡ್ ಝಿನಾ ಮಣ್ಣುಗಳು.
ಮೇಲ್ಮೈ ಬೂದು ಅಥವಾ ಕಪ್ಪು ಹುಡಿ ಮಣ್ಣಿನಿಂದ ಕೂಡಿದ್ದು ತಳದಲ್ಲಿ ಕಂದು ಅಥವಾ ಹಳದಿ ಬಣ್ಣದ ಸುಣ್ಣ ಸಂಯುಕ್ತ ವಸ್ತುವಿನಿಂದ ಕೂಡಿರುವ ಮಣ್ಣುಗಳು.

Rhizobia

ರೈಸೊಬಿಯ.
ದ್ವಿದಳ ಸಸ್ಯಗಳ ಬೇರುಗಳಲ್ಲಿರುವ ಗ್ರಂಥಿಗಳಲ್ಲಿ ಇದ್ದು ಸಸ್ಯದೊಡನೆ ಸಹಜೀವನ ನಡೆಸುವ ಬ್ಯಾಕ್ಟೀರಿಯಾ. ಇವು ವಾಯುವಿನಲ್ಲಿರುವ ಸಾರಜನಕವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ.

Rhizosphere

ಬೇರು ವಲಯ.
ಸಸ್ಯ ಬೇರುಗಳಿಗೆ ಅತಿ ಸಮೀಪದಲ್ಲಿರುವ ಆವರಣ. ಇಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಸಸ್ಯ ಬೇರುಗಳು ಒಂದನ್ನೊಂದು ಪ್ರಭಾವಿಸುತ್ತವೆ.

Ril Erosion

ಸೂಕ್ಷ್ಮಕಾಲುವೆಗಳ ಕೊಚ್ಚಣೆ ; ಕಿರು ಹರಿಗಳ ಕೊಚ್ಚಣೆ.
ಮಣ್ಣಿನ ಮೇಲೆ ಹರಿಯುವ ನೀರು ಕಿರುಗಾಲುವೆಗಳನ್ನು ಮಾಡಿ (ಸಾಮಾನ್ಯವಾಗಿ ಕೇವಲ ಕೆಲವೇ ಅಂಗುಲ ಆಳದ್ದು) ಮಣ್ಣಿನ ಸವಕಳಿಗೆ ದಾರಿ ಮಾಡಿಕೊಡುವಿಕೆ.

River Wash

ನದಿ ಮೆಕ್ಕಲು.
ಏನೂ ಬೆಳೆಯದಿರುವ ಸಾಮಾನ್ಯವಾಗಿ ನದಿಪಕ್ಕಗಳಲ್ಲಿರುವ ಮೆಕ್ಕಲು ಭೂಮಿ. ಇವು ಮರಳಿನಿಂದ ಕೂಡಿದ್ದು ಪ್ರವಾಹ ಬಂದಾಗಲೆಲ್ಲಾ ಸ್ಥಿತಿ ಬದಲಾಯಿಸುತ್ತವೆ.

Richmond’s Formula

ರಿಚ್ ಮಂಡ್ ನ ಸೂತ್ರ.
ಹಾಲಿನ ಪರೀಕ್ಷೆಯಲ್ಲಿ ಬಳಸುವ ಈ ಸೂತ್ರ ಕೆಳಗಿನಂತಿರುತ್ತದೆ.
T.S = 0.25 G + 1-2 F + 0.14.
ಇದರಲ್ಲಿ T.S. = ಶೇಕಡ ಒಟ್ಟು ಘನ ಪದಾರ್ಥ.
F = ಕೊಬ್ಬು.
G = ಕ್ಷೀರಮಾಪಕದಿಂದ ತೋರಿ ಬರುವ ಅಳತೆ.

Rock

ಶಿಲೆ.
ಒಂದು ಅಥವಾ ಹೆಚ್ಚು ಖನಿಜಗಳನ್ನೊಳಗೊಂಡ, ಹರಳುಗಳಿಂದ ಗಟ್ಟಿ ಬಂಡೆಯವರೆಗಿರುವ ವಸ್ತು.

Rock Phosphate

ಶಿಲಾ ರಂಜಕ.
ಒಂದು ಅಥವಾ ಹೆಚ್ಚು ಕ್ಯಾಲ್ಸಿಯಂ ಫಾಸ್ಫೇಟ್ ಖನಿಜವುಳ್ಳ ಈ ವಸ್ತು ಸ್ವಾಭಾವಿಕವಾಗಿ ದೊರೆಯುವ ಶಿಲೆ. ಇದರಲ್ಲಿ ಶೇಕಡ 36-40 ರಷ್ಟು P₂O₃ ಇರುತ್ತದೆ.

Rolling Land

ಹಗುರ ಇಳಿ ಮೇಡು.
ಗುಡ್ಡಗಳ ಮಧ್ಯೆ ಸಾಮಾನ್ಯ ಕಡಿದುಳ್ಳ ಇಳಿಮೇಡು.

Run Off

ಕೊಚ್ಚು ನೀರು [ರಭಸದೋಡು].
ಭೂಮಿಯ ಮೇಲೆ ಬಿದ್ದು ಕೊಚ್ಚಿಹೋಗುವ ನೀರಿನ ಪ್ರಮಾಣ.

Search Dictionaries

Loading Results

Follow Us :   
  Download Bharatavani App
  Bharatavani Windows App