भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Shabdartha Nirupanavali (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345Next >

Salt

ಲವಣ.
ಒಂದು ಲೋಹ ಅಥವಾ ಲೋಹವರ್ಗದ ಮೂಲವು ಒಂದು ಅಲೋಹ ಅಥವಾ ಲೋಹವರ್ಗದ ಮೂಲದೊಂದಿಗೆ ಸಂಯೋಜಿತವಾಗಿ ಹೊರಬಂದ ಸಂಯುಕ್ತ ವಸ್ತು.

Saline Soil

ಚೌಳು ಮಣ್ಣು.
ಸಾಕಷ್ಟು ಕರಗದ ಲವಣಾಂಶಗಳಿಂದ ಕೂಡಿದ್ದು ಸಸ್ಯಗಳ ಬೆಳವಣಿಗೆಗೆ ಅಡಚಣೆಯನ್ನುಂಟುಮಾಡುವ ಮಣ್ಣು.

Saline Alkali Soil

ಚೌಳುಕ್ಷಾರ ಮಣ್ಣು.
ಈ ಮಣ್ಣುಗಳಲ್ಲಿನ ಲವಣಾಂಶ ಹಾಗೂ ವಿನಿಮಯ ಸೋಡಿಯಂ ಎರಡೂ, ಸಸ್ಯ ಬೆಳವಣಿಗೆ ಮತ್ತು ಮಣ್ಣು ರಚನೆಗೆ ಅನಾನುಕೂಲವಾಗುವಷ್ಟು ಮಟ್ಟದಲ್ಲಿರುತ್ತದೆ. ವಿನಿಮಯ ಸೋಡಿಯಂ ಶೇಕಡಾಂಶ 15ಕ್ಕೆ ಮೀರಿದ್ದು ವಿದ್ಯುತ್ ವಾಹಕತ್ವ 4 ಮಿಲಿಮ್ಹೋಸ್ ಗಿಂತ ಹೆಚ್ಚಿರುತ್ತದೆ. pH (ಆಮ್ಲಸೂಚಿ) 8.5 ಕ್ಕಿಂತ ಹೆಚ್ಚಿರುವುದಿಲ್ಲ.

Salinization

ಚೌಳೀಕರಣ ಅಥವಾ ಲವಣೀಕರಣ.
ನೀರಿನಲ್ಲಿ ಕರಗುವ ಕ್ಲೋರೈಡ್, ಸಲ್ಫೇಟ್, ಇಂಥ ಲವಣಗಳು ಮಣ್ಣಿನಲ್ಲಿ ಶೇಖರಣೆಯಾಗುವಿಕೆ.

Sand

ಮರಳು.
ಸಣ್ಣ ಶಿಲೆ ಅಥವಾ ಖನಿಜಗಳ ಚೂರು, ಇದರ ವ್ಯಾಸ 2 ರಿಂದ 0.02 ಮಿ. ಮೀ. ನಷ್ಟಿರುತ್ತದೆ.

Sandy Clay

ಮರಳು ಜೇಡಿ.
ಶೇಕಡ 35 ಅಥವಾ ಹೆಚ್ಚು ಜೇಡಿ ಮತ್ತು 45 ಅಥವಾ ಹೆಚ್ಚು ಮರಳನ್ನುಳ್ಳ ಮಣ್ಣು.

Sandy Clay Loam

ಮರಳು ಜೇಡಿ ಗೋಡು.
ಶೇಕಡ 25 ರಿಂದ 35 ರಷ್ಟು ಜೇಡಿ, 45 ಅಥವಾ ಹೆಚ್ಚು ಮರಳು ಮತ್ತು 28 ಕ್ಕಿಂತ ಕಡಿಮೆ ಗೊಡನ್ನುಳ್ಳ ಮಣ್ಣು.

Sandy Loam

ಮರಳು ಗೋಡು.
ಶೇಕಡ 50 ರಷ್ಟು ಮರಳು ಹಾಗೂ 20 ಕ್ಕಿಂತ ಕಡಿಮೆ ಗೋಡುಮಣ್ಣು.

Sandy Soil

ಮರಳು ಮಣ್ಣು.
ಶೇಕಡ 70 ಕ್ಕಿಂತ ಹೆಚ್ಚು ಮರಳು ಉಳ್ಳ ಮಣ್ಣು.

Sand Deposits

ಮರಳು ನಿಕ್ಷೇಪ.
ಪ್ರವಾಹ ಅಥವಾ ಗಾಳಿಯಿಂದ ಸಾಗಿಬಂದ ಮರಳು ತಟ್ಟೆ ಪ್ರದೇಶದಲ್ಲಿ ಪದರ ಪದರವಾಗಿ ಶೇಖರಣೆಯಾಗಿರುವುದು.

Sand Dunes

ಮರಳು ದಿಣ್ಣೆಗಳು.
ಮರಳುಗಾಡಿನಲ್ಲಿ ಸುಂಟರಗಾಳಿಯಿಂದ ಹೊತ್ತು ಬಂದ ಮಣ್ಣು ಅಲ್ಲಲ್ಲಿ ದಿಬ್ಬವಾಗಿ ಶೇಖರಣೆಯಾಗಿರುವುದು.

Saponification Number

ಸಾಬೂನೀಕರಣ ಸಂಖ್ಯೆ.
ಒಂದು ಗ್ರಾಂ ಕೊಬ್ಬು ಅಥವಾ ಎಣ್ಣೆಯನ್ನು ಸಾಲೂನೀಕರಣಗೊಳಿಸಲು ಬೇಕಾದ ಮಿಲಿಗ್ರಾಂ ಮೊತ್ತದಲ್ಲಿ ಪೊಟ್ಯಾಸಿಯಂ ಹೈಡ್ರಾಕ್ಸೈಡ್.

Saprophyte

ಪೂತಿಜನ್ಯ ಸಸ್ಯ.
ಕೊಳೆಯುವ ಸಾವಯವ ಮತ್ತು ಸತ್ತ ವಸ್ತುಗಳನ್ನು ತಿಂದು ಬದುಕುವ ಜೀವಿ.

Saturated Soil

ಸಂತೃಪ್ತ ಮಣ್ಣು.
ಲೋಹ ಅಯಾನ್ ಗಳಿಂದ ಮಣ್ಣಿನ ವಿನಿಮಯ ಶಕ್ತಿ ಸಂಪೂರ್ಣವಾಗಿ ಸಂತೃಪ್ತಿ ಹೊಂದಿರುವ ಸ್ಥಿತಿ.

Saturated Solution

ಸಂತೃಪ್ತ ದ್ರಾವಣ.
ದ್ರಾವಣ ಮತ್ತು ಲವಣಗಳ ನಡುವೆ ಸಮತೆ ಪರಿಸ್ಥಿತಿ. ಅಂದರೆ ಒಂದು ದ್ರಾವಣದಲ್ಲಿ ಲವಣ ಕರಗುವ ಮಿತಿಯನ್ನು ದಾಟಿರುವ ಸ್ಥಿತಿ.

Secondary Mineral

ಉಪಮೂಲದ ಖನಿಜ; ಅನುಷಂಗಿಕ ಖನಿಜ.
ಶಿಲೆ ರೂಪಗೊಂಡ ನಂತರ ಅದರ ಮೇಲೆ ಶೇಖರವಾಗುವ ಖನಿಜ. ಹಾಗೆಯೇ ಬಂಡೆ ಖನಿಜಗಳು ಶಿಥಿಲವಾಗಿ ಮಣ್ಣು ಉದ್ಭವವಾಗುವ ಗತಿಯಲ್ಲಿ ಅಸ್ತಿತ್ವಕ್ಕೆ ಬರುವ ಜೋಡಿ ಖನಿಜಗಳು.

Secondary Soil

ಅನುಷಂಗಿಕ ಮಣ್ಣು.
ಭೂಮಿಯಲ್ಲಿರುವ ಕೆಲವು ವಸ್ತುಗಳು ಹದವಾಗುವುದರಿಂದ ಮತ್ತು ಹೊರಗಿನಿಂದ ಕೊಚ್ಚಿಬಂದ ಶಿಲೆಯ ಭಗ್ನ ಅವಶೇಷದಿಂದ ಉತ್ಪತ್ತಿಯಾಗುವ ಮಣ್ಣು.

Sedentary Soil

ಸ್ಥಳಜನ್ಯ ಮಣ್ಣು.
ಸಾಗಿಸಲ್ಪಟ್ಟ ವಸ್ತುಗಳನ್ನೊಳಗೊಂಡಿರುವ, ಸ್ಥಳದ ವಸ್ತುಗಳಿಂದಲೇ ಉತ್ಪತ್ತಿಯಾದ ಮಣ್ಣು. ತಳದಲ್ಲಿ ಕಂಡು ಬರುವ ಬಂಡೆ ಖನಿಜಗಳಿಂದಲೇ ಆದ ಮಣ್ಣು.

Sedimentary Rock

ಪದರ ಶಿಲೆ.
ನೀರಿನಿಂದ ತೇಲಿಬಂದು, ಒಟ್ಟುಗೂಡಿ, ಹೆಚ್ಚುಕಡಿಮೆ ಗಟ್ಟಿಯಾಗಿ ಅಂಟಿಕೊಂಡ ಕಲ್ಲು.

Sedimentation Method

ಮಡ್ಡಿ ವಿಧಾನ.
ನಿಂತ ನೀರಿನಲ್ಲಿ ವಿವಿಧ ಗಾತ್ರದ ಮಣ್ಣಿನ ಕಣಗಳನ್ನು ಅವುಗಳು ತಂಗುವ ವೇಗದ ಆಧಾರದ ಮೇಲೆ, ಬೇರ್ಪಡಿಸುವ ಭೌತಿಕ ವಿಶ್ಲೇಷಣತೆ.
< previous12345Next >

Search Dictionaries

Loading Results

Follow Us :   
  Download Bharatavani App
  Bharatavani Windows App